ಆಂಧ್ರದಲ್ಲಿ ಅಜ್ಞಾತ ರೋಗ: ಹಲವರು ಆಸ್ಪತ್ರೆಗೆ ದಾಖಲು

0
373

ಸನ್ಮಾರ್ಗ ವಾರ್ತೆ

ಹೈದರಾಬಾದ್: ಆಂಧ್ರಪ್ರದೇಶದ ಗೋದಾವರಿ ಜಿಲ್ಲೆಯಲ್ಲಿ ಅಜ್ಞಾತ ರೋಗ ದೃಢಪಟ್ಟಿದ್ದು, ಪುಲ್ಲ, ಕೊಮಿರೆಪಳ್ಳಿ ಗ್ರಾಮದಿಂದ ರೋಗ ವರದಿಯಾಗಿದೆ. ಶಾರೀರಿಕ ಅಸ್ವಾಸ್ಥ್ಯದಿಂದ ಹಲವು ಮಂದಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಪಸ್ಮಾರ, ವಾಂತಿ, ಮುಂತಾದ ಲಕ್ಷಣಗಳು ಇರುವ ಈ ರೋಗ ಕೊಮೇರಿಪಳ್ಳಿಯಲ್ಲಿ 22 ಜನರಲ್ಲಿ ಕಾಣಿಸಿಕೊಂಡಿದೆ. ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಇವರಲ್ಲಿ ಹಲವರು ಮಂದಿ ಕುಸಿದು ಬಿದ್ದಿದ್ದಾರೆ. ನಂತರ ಬಾಯಿಯಿಂದ ನೊರೆ ಹೊರಗೆ ಬಂದಿದೆ.

ಒಂದು ವಾರ ಮೊದಲು ಪುಲ್ಲ ಗ್ರಾಮದ 29 ಮಂದಿಗೆ ಇಂತಹ ರೋಗ ಕಂಡು ಬಂದಿತ್ತು. ಅವರು ರೋಗದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ನಂತರ ಎರಡು ದಿವಸಗಳಲ್ಲಿ ಹೊಸ ಪ್ರಕರಣಗಳು ಕಂಡು ಬಂದಿರಲಿಲ್ಲ. ಕಳೆದ ಡಿಸೆಂಬರಿನಲ್ಲಿ ಎಲ್ಲೂರು ಎಂಬಲ್ಲಿಯೂ ಅಜ್ಞಾತ ರೋಗ ಕಂಡುಬಂದಿತ್ತು.

ಇದೇ ವೇಳೆ ಜನರು ಹೆದರಿಕೊಂಡಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಮುಖ್ಯಮಂತ್ರಿ ಜಗನ್ ರೆಡ್ಡಿ ತಜ್ಞರ ತಂಡವನ್ನು ಎಲೂರಿಗೆ ಕಳುಹಿಸಿದ್ದಾರೆ. ಮುಖ್ಯ ಕಾರ್ಯದರ್ಶಿ ಆದಿತ್ಯದಾಸ್, ಮೆಡಿಕಲ್ -ಹೆಲ್ತ್ ಪ್ರಿನ್ಸಿಪಲ್ ಕಾರ್ಯದರ್ಶಿ ಅನಿಲ್ ಕುಮಾರ್ ಸಿಂಘಾಲ್, ಮೆಡಿಕಲ್ ಹೆಲ್ತ್ ಕಮಿಷನರ್ ಕದಂನೇನಿ ಭಾಸ್ಕರ್ ಆಸ್ಪತ್ರೆಗೆ ಭೇಟಿ ಮಾಡಿದ್ದಾರೆ.