ಸನ್ಮಾರ್ಗ ವಾರ್ತೆ
ಸಿಡ್ನಿ, ಫೆ. 21: ಗೆಳೆಯರ ಚುಚ್ಚು ಮಾತು ಸಹಿಸಲಾಗದೆ ಅಳುವ, ಕಡಿಮೆ ಎತ್ತರದ ಒಂಬತ್ತು ವರ್ಷದ ಬಾಲಕನ ವೀಡಿಯೊ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಸಾಮಾಜಿಕ ಮಾಧ್ಯಮಕ್ಕೆ ಬಾಲಕ ಕ್ವಾರ್ಡನ್‍ನ ತಾಯಿ ಯಾರಕ ಬೈಲಿ ವೀಡಿಯೊ ಪೋಸ್ಟ್ ಮಾಡಿದ್ದಾರೆ. ಒಂಬತ್ತು ವರ್ಷದ ತನ್ನ ಮಗ ಕ್ವಾರ್ಡನ್‍ನ ಮನನೋಯಿಸಿದ ಅನುಭವಗಳನ್ನು ಲೈವ್ ಆಗಿ ಅವರು ಫೇಸ್‍ಬುಕ್‍ಗೆ ಪೋಸ್ಟ್ ಮಾಡಿದ್ದಾರೆ. ಮಗ ಕುಳ್ಳಗಿದ್ದಾನೆ ಎಂದು ಸಹಪಾಠಿಗಳು ನಿರಂತರ ತಮಾಷೆ ಮಾಡುತ್ತಿದ್ದಾರೆ. ಇದರಿಂದ ನೊಂದು ಬಾಲಕ ಆತ್ಮಹತ್ಯೆ ಮಾಡುವ ಬೆದರಿಕೆ ಹಾಕಿದ್ದಾನೆ. ಫೇಸ್‍ಬುಕ್‍ನಲ್ಲಿ ಬೆಯ್ಲಿ ಬಲವಾದ ಸಂದೇಶವನ್ನೂ ಕೂಡ ನೀಡಿದ್ದಾರೆ. ಅಪಹಾಸ್ಯ ಚುಚ್ಚು ಮಾತುಗಳು ಮಕ್ಕಳಿಗೆ ಎಷ್ಟು ನೋವು ಕೊಡುತ್ತದೆ ಎಂಬುದನ್ನು ಅವರು ಹೇಳುತ್ತಾರೆ.
“ಮಗನನ್ನು ಮನೆಗೆ ಕರೆದುಕೊಂಡು ಬರಲು ಶಾಲೆಗೆ ಬಂದಿದ್ದೇನೆ. ಆದರೆ ಅವನ ಸಹಪಾಠಿಗಳು ತಲೆಗೆ ಹೊಡೆಯುವುದು ನೋಡಿ ಅಸಹಾಯಕಳಾದೆ. ನಾನು ಏನಾದರೂ ಮಾಡಿಯೇನೊ ಎಂಬ ಹೆದರಿಕೆಯಲ್ಲಿ ಮಗ ಓಡಿ ಬಂದು ಕಾರಿನಲ್ಲಿ ಹತ್ತಿ ಕೂತ” ಎಂದು ಯಾರಕ ಹೇಳಿದರು.
‘ಇತರ ಮಕ್ಕಳಂತೆ ಎಲ್ಲ ದಿವಸವೂ ನನ್ನ ಮಗ ಕೂಡ ಶಾಲೆಗೆ ಕಲಿಯಲು ಹೋಗುತ್ತಾನೆ. ಆದರೆ ಪ್ರತಿ ದಿವಸವೂ ಅವನ ಕಡಿಮೆ ಎತ್ತರಕ್ಕಾಗಿ ಚುಚ್ಚು ಮಾತಿಗೆ ಈಡಾಗುತ್ತಾನೆ. ಈ ದೂರಿನೊಂದಿಗೆ ಮನೆಗೆ ಬರುತ್ತಾನೆ. ಹೊಸ ಹೆಸರುಗಳಿಂದ ತಮಾಷೆ ಮಾಡುತ್ತಾರೆ. ಕಿರುಕುಳ ಕೊಡುತ್ತಾರೆ. ತಾಯಿ ಎಂಬ ನೆಲೆಯಲ್ಲಿ ನಾನು ವಿಫಲಳಾಗಿರುವೆ. ನಮ್ಮ ವಿದ್ಯಾಭ್ಯಾಸ ವ್ಯವಸ್ಥೆಯೇ ವಿಫಲವಾದದ್ದೆಂದು ನನಗೆ ಅನಿಸುತ್ತಿದೆ ಎಂದು ಯರಕಾ ಹೇಳಿದರು.
“ನನಗೆ ಒಂದು ಹಗ್ಗ ಕೊಡಿ… ನಾನು ನನ್ನ ಜೀವನ ಕೊನೆಗೊಳಿಸುವೆ. ಹೃದಯಕ್ಕೆ ಕತ್ತಿ ಹಾಕಬೇಕೆಂದು ಅನಿಸುತ್ತಿದೆ. ನನ್ನನ್ನು ಯಾರಾದರೂ ಕೊಂದು ಹಾಕಿದ್ದರೆ… ಒಂಬತ್ತು ವರ್ಷದ ಕ್ವಾರ್ಡನ್ ವೀಡಿಯೊದಲ್ಲಿ ಇಂತಹ ಅಪಾಯಕಾರಿ ಮಾತುಗಳನ್ನು ಹೇಳುತ್ತಿದ್ದಾನೆ.
ವ್ಯಂಗ್ಯ ಚುಚ್ಚುಮಾತು ಮಕ್ಕಳಲ್ಲಿ ಎಷ್ಟು ಆಘಾತವುಂಟು ಮಾಡುತ್ತಿದೆ ಎಂದು ವೀಡಿಯೊ ಪೋಸ್ಟ್ ಮಾಡಿ ಜನರ ಗಮನ ಸೆಳೆಯಲು ಯರಕಾ ಬೈಲಿ ಶ್ರಮಿಸಿದ್ದಾರೆ. ವಿಶೇಷ ಸಾಮರ್ಥ್ಯದ ಮಕ್ಕಳ ಕುರಿತು ಸಮಾಜಕ್ಕೆ ಅರಿವಿನ ಅಗತ್ಯವಿದೆ. ವಿದ್ಯಾರ್ಥಿಗಳಿಗೆ ಅವರ ಹೆತ್ತವರೇ ಹೇಳಿಕೊಡಬೇಕಿದೆ ಎಂದ ಯರಕಾ ಹೇಳುತ್ತಿದ್ದಾರೆ.
ಕ್ವಾರ್ಡನ್‍ನ ವೀಡಿಯೊ ವೈರಲ್ ಆದ ಬಳಿಕ ದೇಶದ ವಿವಿಧ ಕ್ಷೇತ್ರದ ಪ್ರಮುಖರ ಸಹಿತ ಅನೇಕರ ಬೆಂಬಲ ಸಿಕ್ಕಿದ ಸಂತೋಷದಲ್ಲಿ ಬಾಲಕನ ಕುಟುಂಬ ಇದೆ. ಟೀಂ ಕ್ವಾರ್ಡನ್ ಎಂಬ ಹ್ಯಾಶ್‍ಟ್ಯಾಗ್ ಪ್ರಚಾರವೂ ಆರಂಭವಾಗಿದೆ.
Mum from Australia shares a powerful video
An Aussie mum's strong message has gone viral and is breaking everyone's heart 💔Credit: https://www.facebook.com/yarraka
Posted by Ben Phillips on Thursday, February 20, 2020













