ವಿವಾದದಿಂದಾಗಿ ಜಾಹೀರಾತು ಹೆಚ್ಚು ಜನರಿಗೆ ತಲುಪಿತು- ತನಿಷ್ಕ್ ಜಾಹೀರಾತು ನಿರ್ಮಾಪಕರು

0
720

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.21: ಹಿಂಪಡೆದುಕೊಂಡ ತನಿಷ್ಕ್ ಜಾಹೀರಾತಿಗೆ ಸಂಬಂಧಿಸಿದ ವಿವಾದದ ಕಾರಣದಿಂದ ಅದು ಹೆಚ್ಚು ಮಂದಿಯನ್ನು ತಲುಪಿದೆ ಎಂದು ತನಿಷ್ಕ್‌ನ ಜಾಹೀರಾತು ನಿರ್ಮಾಪಕರು ತಿಳಿಸಿದ್ದಾರೆ. ಹೆಚ್ಚು ಮಂದಿ ತನಿಷ್ಕ್ ಉತ್ಪನ್ನಗಳನ್ನು ಖರೀದಿಸುವುದಕ್ಕೆ ವಿವಾದ ಜಾಹೀರಾತು ದಾರಿ ಮಾಡಿಕೊಟ್ಟಿತು. ಇದಕ್ಕೆ ಸಂಬಂಧಿಸಿದ ವಿವಾದದಲ್ಲಿ ತನಿಷ್ಕ್ ಜೊತೆ ಮಾನಸಿಕ ಬೆಂಬಲವನ್ನು ಹೆಚ್ಚು ಮಂದಿ ನೀಡಿದ್ದಾರೆ ಎಂದು ವಾಟ್ಸ್ ಯುವರ್ ಪ್ರಾಬ್ಲಂ ಎಂಬ ಹೆಸರಿನ ಏಜೆನ್ಸಿಯ ಮ್ಯಾನೇಜಿಂಗ್ ಪಾರ್ಟನರ್ ಕ್ರಿಯೇಟಿವ್ ಹೆಡ್ ಆದ ಅಮತಿ ಅಕಾಲಿ ಹೇಳಿದರು.

ವಿವಾದದ ಬಳಿಕ ಗಲಾಟೆ ಮಾಡಿದ ಅಲ್ಪಸಂಖ್ಯೆಯ ಜನರ ವಿರುದ್ಧ ಮೌನವಾಗಿದ್ದ ಬಹುಸಂಖ್ಯಾತರು ಮಾತಾಡಲು ಆರಂಭಿಸಿದ್ದಾರೆನ್ನುವುದು ಸತ್ಯವಾಗಿದೆ. ಜಾಹೀರಾತಿನ ಉದ್ದೇಶ ಸಾಮುದಾಯಿಕ ಸೌಹಾರ್ದವಾಗಿದೆ. ಇಂತಹ ವಿವಾದವನ್ನು ನಾವ್ಯಾರು ನಿರೀಕ್ಷಿಸಿರಲಿಲ್ಲ. ತನಿಷ್ಕ್ ದಿಟ್ಟತನ ಇರುವ ಕಂಪೆನಿ ಕೊನೆಗೆ ಜಾಹೀರಾತು ಹಿಂಪಡೆದುದು ನಮ್ಮ ಸಿಬ್ಬಂದಿಗಳ ಸುರಕ್ಷೆಯ ಕಾರಣದಿಂದಾಗಿತ್ತು ಎಂದು ಅಮಿತ್ ತಿಳಿಸಿದರು.

ತನಿಷ್ಕ್ ಟಾಟಾ ಗ್ರೂಪ್‍ನ ಮಾಲಕತ್ವದ ಜ್ಯುವೆಲ್ಲರಿಯಾಗಿದೆ. 55 ಸೆಕೆಂಡಿನ ಜಾಹೀರಾತು ವಿವಾದವಾಗಿತ್ತು. ಹಿಂದು ಸೊಸೆ ಧರ್ಮಾಚರಣೆಯನ್ನು ಪರಿಗಣಿಸಿ ಮುಸ್ಲಿಮಳಾದ ಗೃಹಿಣಿಯ ದೃಶ್ಯವಿತ್ತು. ಇದು ತೀವ್ರ ಹಿಂದುತ್ವವಾದಿಗಳ ಕೋಪಕ್ಕೆ ಕಾರಣವಾಗಿತ್ತು. ನಂತರ ತನಿಷ್ಕ್ ಜಾಹೀರಾತು ಹಿಂಪಡೆದಿತ್ತು.