ಸನ್ಮಾರ್ಗ ವಾರ್ತೆ
ಪಾಟ್ನ,ಅ.21: ಬಿಹಾರದ ಸಚಿವಾಲಯದ ಗ್ರಾಮ ವಿಕಾಸ್ ಇಲಾಖೆಯಲ್ಲಿ ನಡೆದಿರುವ ಭಾರೀ ಬೆಂಕಿ ಅನಾಹುತದ ಹಿಂದೆ ಗೂಢಾಲೋಚನೆಯಿದೆ ಎಂಬ ಗಂಭೀರ ಆರೋಪವನ್ನು ರಾಷ್ಟ್ರೀಯ ಜನತಾದಳ ಆರೋಪಿಸಿದೆ.
ಎನ್ಡಿಎ ಸರಕಾರದ ಭ್ರಷ್ಟಾಚಾರದ ಸಾಕ್ಷ್ಯಗಳು ಸಿಗದಂತೆ ಮಾಡಲು ಫೈಲುಗಳು ದಾಖಲೆಗಳನ್ನು ಈ ರೀತಿ ನಾಶಪಡಿಸಲಾಗಿದೆ ಎಂದು ಆರ್ಜೆಡಿ ಆರೋಪಿಸಿದೆ. ಅಧಿಕೃತ ದಾಖಲೆಗಳು, ಫೈಲುಗಳು ನಾಶವಾದುದರ ಹಿಂದೆ ಕ್ರಿಮಿನಲ್ ಸಂಚು ಇದೆ ಎಂದು ಆರ್ಜೆಡಿ ವಕ್ತಾರ ಚಿತ್ರಾಮಜನ್ ಗಗಾನ್ ಆರೋಪಿಸಿದ್ದಾರೆ. ಭವಿಷ್ಯದಲ್ಲಿ ಭ್ರಷ್ಟಾಚಾರ ಪತ್ತೆಯಾಗದಿರಲು ಉದ್ದೇಶಪೂರ್ವಕವಾಗಿ ಬೆಂಕಿ ಹಾಕಿರಬಹುದು. ತಮ್ಮ ಸರಕಾರ ಬಿಹಾರದಲ್ಲಿ ಅಧಿಕಾರಕ್ಕೆ ಬರಲಾರದು ಎಂದು ಜೆಡಿಯು- ಬಿಜೆಪಿ ನಾಯಕರಿಗೆ ಅರಿವಾಗಿದೆ.
ಎನ್ಡಿಯ ಆಡಳಿತ ಕಾಲದ ಭ್ರಷ್ಟಾಚಾರಗಳು ಆರ್ಜೆಡಿ ಅಧಿಕಾರಕ್ಕೆ ಬಂದಾಗ ತನಿಖೆಗೊಪ್ಪಿಸಬಹುದೆಂಬ ಹೆದರಿಕೆಯಿಂದ ಅವರು ಈ ರೀತಿ ಮಾಡಿದ್ದಾರೆ. ಆದುದರಿಂದ ಸಚಿವಾಲಯದ ಕಟ್ಟಡಕ್ಕೆ ಬೆಂಕಿಹಾಕಿ ನಾಶಪಡಿಸಲಾಗಿದೆ ಎಂದು ಅವರು ಆರೋಪಿಸಿದರು.












