ಕುವೈಟ್: ಈ ವರ್ಷ 3 ಲಕ್ಷಕ್ಕೂ ಅಧಿಕ ವಿದೇಶಿಯರ ವಾಸ್ತವ್ಯ ಅನುಮತಿ ರದ್ದು

0
495

ಸನ್ಮಾರ್ಗ ವಾರ್ತೆ

ಕುವೈಟ್ ಸಿಟಿ: ಈ ವರ್ಷ ಕುವೈಟಿನಲ್ಲಿ 3ಲಕ್ಷಕ್ಕೂ ಹೆಚ್ಚು ವಿದೇಶಿಯರು ವಾಸ್ತವ್ಯ ಅನುಮತಿಯನ್ನು (ಇಖಾಮ) ಕಳಕೊಂಡಿದ್ದಾರೆ ಎಂದು ವಸತಿ ಇಲಾಖೆ ತಿಳಿಸಿದೆ. ಕೊರೋನದಿಂದ ಕುವೈಟಿಗೆ ಮರಳಲು ಆಗದೆ ಹೆಚ್ಚು ಮಂದಿ ಇಖಾಮ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. 2021ರ ಜನವರಿ 1 ರಿಂದ ನವೆಂಬರ್ 15ರವರೆಗೆ 3,16,700 ಮಂದಿ ವಿದೇಶಿ ಕಾರ್ಮಿಕರ ಇಖಾಮ ರದ್ದು ಆಗಿದೆ. ಹೆಚ್ಚು ಇಖಾಮ ಕಳಕೊಂಡಿದ್ದು ಅರಬ್ ಏಷ್ಯನ್ ದೇಶಗಳ ಜನರು.

ಕೊರೋನ ಲಾಕ್‍ಡೌನ್ ನಿಯಂತ್ರಣದಿಂದ ಕುವೈಟಿಗೆ ಬರಲು ಇವರಿಗೆ ಆಗಿರಲಿಲ್ಲ. ಆದರೆ ಈ ಲೆಕ್ಕದಲ್ಲಿ ಸ್ವಂತ ಇಚ್ಛೆಯಿಂದ ವೀಸಾ ರದ್ದು ಮಾಡಿಗೆ ಊರಿಗೆ ಹೋದವರಿದ್ದಾರೆ ಮತ್ತು ಅಪರಾಧ ಕೃತ್ಯಗಳ ಹಿನ್ನೆಲೆಯಲ್ಲಿ ಊರಿಗೆ ಗಡೀಪಾರಾದವರೂ ಸೇರಿದ್ದಾರೆ.

ಕೊರೋನದಿಂದ ದೇಶದಿಂದ ಹೊರಗೆ ಸಿಕ್ಕಿಹಾಕಿಕೊಂಡವರಲ್ಲಿ ಆನ್‍ಲೈನ್ ರೆಸಿಡೆನ್ಸಿ ನವೀಕರಿಸಿಕೊಳ್ಳಿ ಎಂದು ಗೃಹ ಸಚಿವಾಲಯ ಸೌಕರ್ಯ ಮಾಡಿಕೊಟ್ಟಿತ್ತು. ಇದನ್ನು ಹೆಚ್ಚಿನ ಜನರು ಉಪಯೋಗಿಸಿದ್ದಾರೆ. 60 ವರ್ಷ ಆದವರು ಪದವಿ ಇಲ್ಲದ ವಿದೇಶಿಯರ ಇಖಾಮ ನವೀಕರಿಸುವುದಿಲ್ಲ ಎಂದು ಸರಕಾರ ಕಾನೂನು ತಂದಿತ್ತು. ಆದ್ದರಿಂದ ಈ ವಯೋಮಾನದವರಲ್ಲಿ ಕೆಲವರು ವೀಸಾ ರದ್ದು ಮಾಡಿ ಊರಿಗೆ ಮರಳಿದ್ದರು.