ಮಂದಿರಕ್ಕೆ ಜಮೀನು ನೀಡದ್ದಕ್ಕೆ ಊರಿನಿಂದ ಬಹಿಷ್ಕಾರ ಹಾಕಿದ ಪಂಚಾಯತ್..!

0
769

ಸನ್ಮಾರ್ಗ ವಾರ್ತೆ

ಭೋಪಾಲ್: ಮಧ್ಯಪ್ರದೇಶದಲ್ಲಿ ಮಂದಿರ ಕಟ್ಟಲು ಜಮೀನು ಕೊಡದ ಕುಟುಂಬವೊಂದಕ್ಕೆ ಬಹಿಷ್ಕಾರ ಹಾಕಿರುವ ಪಂಚಾಯತ್ ವೊಂದ, ಕುಟುಂಬ ಪುರುಷರ ಗಡ್ಡ ಬೋಳಿಸಬೇಕು, ದನದ ಮೂತ್ರ ಕುಡಿಸಬೇಕು ಮತ್ತು ಮೆಟ್ಟನ್ನು ತಲೆಯಲ್ಲಿ ಹೊತ್ತು ನಡೆಯಬೇಕೆಂದು ಶಿಕ್ಷೆ ನೀಡಿದ ಘಟನೆ ಮಧ್ಯಪ್ರದೇಶದ ಗುಣ ಜಿಲ್ಲೆಯಲ್ಲಿ ನಡೆದಿದೆ.

ಗುಣ ಶಿವಾಜಿನಗರದ ಹೀರಾ ಲಾಲ್ ಗೋಝಿ ಎಂಬವರು ಜಿಲ್ಲಾಧಿಕಾರಿಗೆ ದೂರು ಕೊಟ್ಟ ಮೇಲೆ ಘಟನೆ ಬಹಿರಂಗವಾಗಿದೆ. ಹಿರಾಲಾಲ ಮತ್ತು ಕುಟುಂಬವು ಜಮೀನು ಕೊಡದ್ದಕ್ಕೆ ಪಂಚಾಯತ್ ಸೇರಿ ಊರ ಬಹಿಷ್ಕಾರ ಮತ್ತು ಶಿಕ್ಷೆಯನ್ನು ಘೋಷಿಸಲಾಗಿದೆ. ದೇವಸ್ಥಾನಕ್ಕೆ ಜಮೀನು ಕೊಡುವ ವಿವಾದ ಈ ಎಲ್ಲ ಘಟನೆಯ ಹಿನ್ನೆಲೆಯಾಗಿದ್ದು. ಜಮೀನಿನ ಒಂದು ಭಾಗವನ್ನು ದೇವಸ್ಥಾನ ಕಟ್ಟಲು ಕೊಟ್ಟಿದ್ದೆವು. ಆದರೆ ಎಲ್ಲ ಭೂಮಿ ಕೊಡಬೇಕೆಂದು ಪಂಚಾಯತ್ ಹೇಳುತ್ತಿದೆ. ವಿರೋಧಿಸಿದ್ದಕ್ಕೆ ಅವರು ನಮ್ಮ ಕುಟುಂಬವನ್ನು ಹೊರಹಾಕಿದ್ದಾರೆ. ಬೇರೆಯವರ ಮನೆಗೆ ಹೋಗದಂತೆ ನಿಷೇಧ ಹೇರಲಾಗಿದೆ. ಕುಟುಂಬದಿಂದ ಮದುವೆ ಇತ್ಯಾದಿಗೆ ನಿಷೇಧ ಹೇರಿದ್ದಾರೆ ಎಂದು ಹೀರೆಲಾಲ್ ಜಿಲ್ಲಾಧಿಕಾರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.

ಪಂಚಾಯತ್ ನಿಷೇಧ ಹಾಕಿದ್ದನ್ನು ಹಿರೇಲಾಲ ಮೊಬೈಲ್ ಫೋನ್‍ನಲ್ಲಿ ದಾಖಲು ಮಾಡಿಕೊಂಡಿದ್ದರು. ಇದು ಅವರಲ್ಲಿ ಇನ್ನಷ್ಟು ಮುನಿಸು ತಂದಿದೆ. ಮತ್ತು ಇನ್ನಷ್ಟು ನಿಷೇಧವನ್ನು ಹೇರಿದ್ದಾರೆ. ಇಡೀ ಜಮೀನು ದೇಣಿಗೆ ಕೊಟ್ಟು ಇಡೀ ಕುಟುಂಬ ಶುದ್ಧೀಕರಣಕ್ಕಾಗಿ ದನದ ಮೂತ್ರ ಕುಡಿಯಬೇಕು. ಅವರ ಚಪ್ಪಲಿಗಳನ್ನು ತಲೆಯಲ್ಲಿ ಹೊರಬೇಕು. ಕುಟುಂಬದೊಡೆಯ ಗಡ್ಡ ಬೋಳಿಸಬೇಕೆಂದು ಹೇಳಲಾಗಿದೆ.

ನನ್ನ ವಶದಲ್ಲಿರುವ ಜಮೀನಿನ ಕುರಿತು ವಿವಾದ ಸೃಷ್ಟಿಸಿದ್ದಾರೆ. ದೇವಸ್ಥಾನ ಕಟ್ಟಲು ಜಮೀನಿನ ಒಂದು ಭಾಗ ಕೊಟ್ಟಿದ್ದೆವು. ಎಲ್ಲ ಜಮೀನು ಕೊಟ್ಟರೆ ನಮಗೆ ಜಮೀನಿಲ್ಲದಾಗುತ್ತದೆ ಎಂದು ಕೋಸಿ ಹೇಳಿದರು. ಜಿಲ್ಲಾಧಿಕಾರಿ ತನಿಖೆಗೆ ಆದೇಶಿಸಿದ್ದು, ದೂರು ನಿಜವೆಂದು ಮನವರಿಕೆಯಾದರೆ ತಪ್ಪಿತಸ್ಥರ ವಿರುದ್ಧ ಕ್ರಮ ಜರಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಫ್ರಾಂಕ್ ನೋಬೆಲ್ ಹೇಳಿಕೆ ನೀಡಿದ್ದಾರೆ.