ಮಾದಕ ವಸ್ತು ವ್ಯಸನ ಮತ್ತು ಅಕ್ರಮ ಸಾಗಾಣಿಕೆ ವಿರೋಧಿ ದಿನ: ಡಾ.APJ ಅಬ್ದಲ್ ಕಲಾಂ ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆ ವತಿಯಿಂದ ಜನ ಜಾಗೃತಿ ಉಪನ್ಯಾಸ ಕಾರ್ಯಕ್ರಮ

0
86

ಸನ್ಮಾರ್ಗ ವಾರ್ತೆ

ಮುಧೋಳ: ಡಾ. ಏ.ಪಿ.ಜೆ ಅಬ್ದುಲ್ ಕಲಾಂ ಗ್ರಾಮೀಣಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆ(ರಿ) ಮುಧೋಳ ವತಿಯಿಂದ ಅಂತಾರಾಷ್ಟ್ರೀಯ ಮಾದಕ ವಸ್ತು ವ್ಯಸನ ಮತ್ತು ಅಕ್ರಮ ಸಾಗಾಣಿಕೆ ವಿರೋಧಿ ದಿನದ ಪ್ರಯುಕ್ತ ಜನ ಜಾಗೃತಿ ಹಾಗೂ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಮುಹಮ್ಮದ್ ಗೌಸ್‌ ಆರ್ ಬಳ್ಳಿ‌ನ್ ವಹಿಸಿದರು. ಉಪನ್ಯಾಸವನ್ನು ಖಿದ್ಮಾ ಫೌಂಡೇಶನ್ ಕರ್ನಾಟಕ ರಾಜ್ಯ ಸಂಚಾಲಕರಾದ ಆಮಿರ್ ಬನ್ನೂರು ನೀಡಿದರು.

ಇದೇ ಸಂದರ್ಭ ಶಿಕ್ಷಕರಾದ ಜಗದೀಶ್ ಬಳಿಗಾರ್, ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಅಬ್ದುಲ್ ರಝಾಕ್ ಹಿರೇಮನಿ, ವೀರಣ್ಣ ತಮ್ಮಿ ನಾಳ ಮೆಹಬೂಸಾಬ್ ಆರ್ ಬಳ್ಳಿನ್, ಬಸವರಾಜ ಕಮ ತರ,ಬಸವರಾಜ ಬಾಗೇವಾಡಿ ಹಾಗೂ ಪ್ರಭುರಾಜ ಪಲ್ಲೆದ ಉಪಸ್ಥಿತರಿದ್ದರು ಪ್ರಸನ್ನ ಕುಮಾರ ಕಮತದ ಸ್ವಾಗತಿಸಿದರು ಅಮೀರ ಹಿರೇಮನಿ ವಂದಿಸಿದರು.