ಗುಜರಾತ್ ಗಲಭೆ| ಪ್ರಧಾನಿ ಮೋದಿಗೆ ಕ್ಲೀನ್ ಚಿಟ್: ಝಕಿಯಾ ಜಾಫ್ರಿ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

0
21

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಗುಜರಾತ್ ಜನಾಂಗೀಯ ಹತ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯ ಪಾತ್ರವಿದ್ದು ತನಿಖಿಸಬೇಕೆಂದು ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟು ವಜಾಗೊಳಿಸಿದೆ. ಮೋದಿಗೆ ಕ್ಲೀನ್ ಚಿಟ್ ನೀಡಿ 2012ರಲ್ಲಿ ವಿಶೇಷ ತನಿಖಾ ತಂಡ ಸಲ್ಲಿಸಿದ ವರದಿಯನ್ನು ಸ್ವೀಕರಿಸಲಾಗಿದೆ. ಮತ್ತೊಮ್ಮೆ ಹೊಸ ತನಿಖೆ ಅಗತ್ಯವಿಲ್ಲ ಎಂದು ಜಸ್ಟಿಸ್ ಎಎಂ ಕಾನ್ವಿಲ್ಕರ್ ಅಧ್ಯಕ್ಷತೆಯ ಪೀಠ ಹೇಳಿತು.

2002ರಲ್ಲಿ ಗುಜರಾತ್‌ನ ಗುಲ್ಬರ್ಗಾ ಸೊಸೈಟಿಯಲ್ಲಿ ಜನಾಂಗೀಯ ಹತ್ಯೆ ನಡೆದಿತ್ತ. ಈ ಸಾಮೂಹಿಕ ಹತ್ಯೆಯಲ್ಲಿ ಅತ್ಯಂತ ದಾರುಣವಾಗಿ ಕೊಲ್ಲಲ್ಪಟ್ಟಿದ್ದ ಕಾಂಗ್ರೆಸ್ ಸಂಸದ ಇಹ್ಸನ್ ಜಾಫ್ರಿಯವರ ಪತ್ನಿ ಝಕಿಯಾ ಜಾಫ್ರಿ ನೀಡಿದ ಅರ್ಜಿಯನ್ನು ಸುಪ್ರೀಂ ಕೋರ್ಟು ತಿರಸ್ಕರಿಸಿದೆ.

ತಮ್ಮ ಬಳಿ ಇರುವ ಸಾಕ್ಷ್ಯಗಳನ್ನು ಪರಿಶೀಲಿಸಲು ಸಿದ್ಧರಾಗದ ಎಸಐಟಿಯ ವಿರುದ್ಧ ಹಿರಿಯ ವಕೀಲ ಕಪಿಲ್ ಸಿಬಲ್ ವಾದವನ್ನು ಜಸ್ಟಿಸ್ ಎಎಂ ಖಾನ್ವಿಲ್ಕರ್ ಅಧ್ಯಕ್ಷತೆಯ ಪೀಠ ತಳ್ಳಿಹಾಕಿದೆ. ನಿಷ್ಪಕ್ಷ ತನಿಖೆ ನಡೆಸದ ಎಸ್‍ಐಟಿ ವಿರುದ್ಧ ತನಿಖೆ ನಡೆಸಬೇಕೆಂದು ಸಿಬಲ್ ಹೇಳಿದರು. ನರೇಂದ್ರ ಮೋದಿ ಸಹಿತ ಅಂದಿನ ಗುಜರಾತ್ ಸರಕಾರದ ಉನ್ನತರಿಗೆ ಜನಾಂಗೀಯ ಹತ್ಯೆಯಲ್ಲಿ ಇರುವ ಪಾತ್ರವನ್ನು ತನಿಖಿಸುವಂತೆ ಆಗ್ರಹಿಸಿದ ವಯೋವೃದ್ಧೆ ಝಕಿಯ ಜಾಫ್ರಿ ಹೋರಾಟಕ್ಕೆ ಇದು ಅಂತಿಮ ತೆರೆಯಾಗಿದೆ. ಕಳೆದ ವರ್ಷ ಅಕ್ಟೋಬರ್ 26‌ರಂದು ಸುಪ್ರೀಂ ಕೋರ್ಟು ಝಕಿಯ ಜಾಫ್ರಿಯವರು ಸಲ್ಲಿಸಿದ ವಿಶೇಷ ಅರ್ಜಿಯಲ್ಲಿ ವಾದ ಆಲಿಸಿತ್ತು.