ಸನ್ಮಾರ್ಗ ವಾರ್ತೆ
ರಮಝಾನಿನ ಉಳಿದ ಅವಧಿಯನ್ನು ಮಸ್ಜಿದುಲ್ ಹರಾಮ್ ನಲ್ಲಿ ಕಳೆಯುವುದಕ್ಕಾಗಿ ಸೌದಿ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ಅವರು ಹರಮ್ ಪ್ರವೇಶಿಸಿದ್ದಾರೆ. ಮಾರ್ಚ್ 28ರ ಶುಕ್ರವಾರದಂದು ರಾತ್ರಿ ಅವರು ಮಸ್ಜಿದುಲ್ ಹರಾಂನಲ್ಲಿ ಬಂದಿಳಿದಿದ್ದಾರೆ.
ಮಸ್ಜಿದುಲ್ ಹರಾಮ್ ನಲ್ಲಿ ಮುಹಮ್ಮದ್ ಸಲ್ಮಾನ್ ಆಗಮಿಸುವುದು ಮತ್ತು ಅಲ್ಲಿ ಎರಡು ಮೂರು ದಿನಗಳನ್ನು ಕಳೆಯುವುದು ಸೌದಿ ನಾಗರಿಕರಲ್ಲಿ ಮತ್ತು ಪ್ರವಾಸಿಗರಲ್ಲಿ ವಿಶೇಷ ಚರ್ಚೆಗೆ ಕಾರಣವಾಗಿದೆ. ಅವರ ಧಾರ್ಮಿಕ ಶ್ರದ್ಧೆ ಮತ್ತು ಉತ್ಸಾಹವನ್ನು ಶ್ಲಾಘಿಸಲಾಗುತ್ತಿದೆ. ಅವರ ಜೊತೆ ಸಚಿವರಾದ ಅಮೀರ್ ಅಬ್ದುಲ್ ಅಝಝ್ ಸವೂದ್ ಬಿನ್ ನಾಯಿಫ್ ಹಾಗೂ ಇನ್ನಿತರ ಹಲವು ಸಚಿವರು ಭಾಗಿಯಾಗಿದ್ದಾರೆ.












