ಮುಂಬೈಯ ಸ್ಲಮ್ ಗಳಲ್ಲಿ ನಾಲ್ವರಿಗೆ ಕೊರೊನಾ

0
883

ಸನ್ಮಾರ್ಗ ವಾರ್ತೆ

ಮುಂಬೈ, ಮಾ. 26: ಮುಂಬೈಯ ಜೋಪಡಾ ಪಟ್ಟಿಗಳಲ್ಲಿ ನಾಲ್ವರಿಗೆ ಕೊರೊನಾ ದೃಢಪಟ್ಟಿದ್ದು ಪರೇಲ್‍ನ 65 ವರ್ಷದ ಮಹಿಳೆಗೆ ಮತ್ತು ಇಟಲಿಯಿಂದ ಮರಳಿದ 37 ವರ್ಷದ ಕಲೆನಿಯರಿಗೆ ಕೊರೊನಾ ದೃಢಪಟ್ಟಿದೆ. ಘಾಟ್‍ಕೋಪರ್ ನ 68 ವರ್ಷ ವ್ಯಕ್ತಿ ಮತ್ತು 25 ವರ್ಷದ ಯುವಕನಿಗೆ ಕೊರೊನಾ ದೃಢಪಟ್ಟಿದೆ.

ಈ ಹಿಂದೆ ಮುಂಬೈ ಜೋಪಡಾ ಪಟ್ಟಿಯಿಂದ ಕೊರೊನಾ ವರದಿಯಾಗಿತ್ತು. ನಂತರ ಆರೋಗ್ಯ ಕಾರ್ಯಕರ್ತರು ನಿರಂತರ ಪರೀಕ್ಷೆ ನಡೆಸಿದ್ದು ಕೆಲಸಕ್ಕೆ ಹೋಗದಂತೆ ಜೊಪಡಾ ಪಟ್ಟಿ ನಿವಾಸಿಗಳನ್ನು ನಿರ್ಬಂಧಿಸಿದ್ದರು.

ಶುಚಿತ್ವದ ಕೊರತೆ ಇರುವುದರಿಂದ ಕೊರೊನಾ ನಿಯಂತ್ರಣದ ಕುರಿತು ಹೆಚ್ಚು ಜಾಗೃತಿ ಕಾರ್ಯ ನಡೆಯುತ್ತಿದ್ದು ಅಧಿಕಾರಿಗಳಿಗೆ ಇದು ತುಂಬ ತ್ರಾಸಕರವಾಗಿ ಪರಿಣಮಿಸಿದೆ.