ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಮಾ. 26: ಕೊನೆಗೂ ಕೊರೊನಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಮದ್ದು ಸಂಶೋಧನೆಯಾಗಿದೆ. ರೋಗಿಗೆ ಚುಚ್ಚಿದರೆ ಮೂರು ಗಂಟೆಗಳಲ್ಲಿ ಶಮನವಾಗುತ್ತದೆ, ಇದನ್ನು ಅಮೆರಿಕದ ವಿಜ್ಞಾನಿಗಳು ಕಂಡು ಹುಡುಕಿದ್ದಾರೆ ಎಂದು ಸುಳ್ಳು ಪ್ರಚಾರ ನಡೆಯುತ್ತಿದೆ. ಜೊತೆಗೆ ಅಮೆರಿಕದ ವಿಜ್ಞಾನಿಗಳಿಗೆ ಕೃತಜ್ಞತೆಯನ್ನೂ ಸಲ್ಲಿಸಲಾಗಿದೆ. ದಕ್ಷಿಣ ಕೊರಿಯ ಅಭಿವೃದ್ಧಿ ಪಡಿಸಿದ ಕೊವಿಡ್ ತಪಾಸಣೆಯ ಕಿಟ್‍ನ ಚಿತ್ರವನ್ನೂ ಉಪಯೋಗಿಸಲಾಗಿದೆ.
ವಿಶ್ವದಲ್ಲಿ 22,000 ಮಂದಿ ಜೀವ ಕಳಕೊಂಡಿದ್ದು ನಾಲ್ಕು ಲಕ್ಷಕ್ಕೂ ಹೆಚ್ಚು ಮಂದಿಗೆ ವೈರಸ್ ತಗಲಿದೆ. ಇದಕ್ಕೆ ವ್ಯಾಕ್ಸಿನ್ ಕಂಡು ಹುಡುಕಲು ವಿಶ್ವಾದ್ಯಂತ ನಿರಂತರ ಪರಿಶ್ರಮ ನಡೆಯುತ್ತಿದೆ. ಇನ್ನೂ ಯಶಸ್ವಿಯಾಗಿಲ್ಲ. ಇದೇ ವೇಳೆ ಅಮೆರಿಕದ ವಿಜ್ಞಾನಿಗಳು ಕೊರೊನಾ ಕ್ಕೆ ವ್ಯಾಕ್ಸಿನ್ ಕಂಡು ಹುಡುಕಿದ್ದಾರೆ ಎಂದು ಪ್ರಚಾರ ನಡೆಯುತ್ತಿದೆ. ಟೂರೊ ಡೆಲಿವಿಷನ್ ಎಂಬ ಫೇಸ್‍ಬುಕ್ ಚ್ಯಾನೆಲ್‍ನಲ್ಲಿ ಸುಳ್ಳುಪ್ರಚಾರ ಆರಂಭವಾಗಿದೆ. ಕೊವಿಡ್-19 1ಜಿಎಂ/1ಜಿಜಿಎಂಬ ಹೆಸರಿನಲ್ಲಿ ವ್ಯಾಕ್ಸಿನ್ ಕೂಡಲೇ ಮಾರುಕಟ್ಟೆಗೆ ಬರಲಿದೆ ಎಂದು ಪ್ರಚಾರ ನಡೆಯುತ್ತಿದೆ.
ರೋಚ್ ಮೆಡಿಕಲ್ ಕಂಪೆನಿಯಿಂದ ಮುಂದಿನ ರವಿವಾರ ವ್ಯಾಕ್ಸಿನ್ ಹೊರಬರಲಿದೆ ಎಂದು ಟ್ರಂಪ್ ಹೇಳಿದ್ದು ಲಕ್ಷಾಂತರ ಡೋಸ್‍ಗಳನ್ನು ನೀಡಲು ಸಿದ್ಧ ಎಂದು ಹೇಳಿಕೊಂಡಿದ್ದಾರೆ. ಆದರೆ, ದಕ್ಷಿಣ ಕೊರಿಯದ ಪ್ರಧಾನ ಫಾರ್ಮ ಕಂಪೆನಿಗಳಲ್ಲೊಂದಾದ ಸುಗೆನ್‍ಟೆಕ್ ಕಂಡು ಹಿಡಿದಿರುವ ಪೊರ್ಟೇಬಲ್ ಪರಿಶೀಲನೆ ಕಿಟ್ ಎಸ್‍ಜಿಟಿಐ-ಫ್ಲೆಕ್ಸ್ ಕೊವಿಡ್ -19 1ಜಿಜಿಯ ರಾಪರನ್ನು ತೋರಿಸಲಾಗುತ್ತಿದೆ.
ಹತ್ತೇ ನಿಮಿಷದಲ್ಲಿ ಕೊರೊನಾ ವೈರಸ್ ಗುರುತಿಸಲು ಸಾಧ್ಯವಿರುವ ತಪಾಸಣೆ ಕಿಟ್ ಇದು. ಆದ್ದರಿಂದ ಈ ಸುದ್ದಿಗೆ ಯುರೋಪಿಯನ್ ಮಾಧ್ಯಮಗಳು ಕೂಡ ಪ್ರಾಮುಖ್ಯ ನೀಡಿತ್ತು. ಕೊರೊನಾಕ್ಕೆ ಮದ್ದು ಎಂದು ಸುಳ್ಳು ಪ್ರಚಾರಕ್ಕೆ ಬಳಸಿದ್ದು ಕೂಡ( ಕೊವಿಡ್ ವ್ಯಾಕ್ಸಿನ್ ಎಂಬುದು )ಸುಗನ್‍ಟೆಕ್ ಕಂಪೆನಿಯ ಕೊರೊನಾ ಪತ್ತೆಯ ಕಿಟ್ ಆಗಿದ್ದು. ಅದರಲ್ಲಿ ಸುಗನ್‍ಟೆಕ್ ಕಂಪೆನಿಯ ಹೆಸರೂ ಕಂಡು ಬರುತ್ತಿದೆ.












