ಕಾಣೆಯಾಗಿದ್ದ ಕೊರೋನ ರೋಗಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಆಸ್ಪತ್ರೆಯ ಶೌಚಾಲಯದಲ್ಲಿ ಪತ್ತೆ

0
439

ಸನ್ಮಾರ್ಗ ವಾರ್ತೆ

ಮುಂಬೈ,ಅ.24: 14 ದಿನಗಳ ಹಿಂದೆ ಕಾಣೆಯಾಗಿದ್ದ ಕೊರೋನ ಪೀಡಿತ 27 ವರ್ಷದ ವ್ಯಕ್ತಿಯ ಮೃತದೇಹವು ಆಸ್ಪತ್ರೆಯ ಶೌಚಾಲಯದಲ್ಲಿ ಪತ್ತೆಯಾಗಿದೆ. ಕ್ಷಯ ರೋಗ ಪೀಡಿತನಾಗಿದ್ದ ಸೂರ್ಯಭಾನ್ ಯಾದವ್‍‌ರ ಮೃತದೇಹವು ಟಿಬಿ ಆಸ್ಪತ್ರೆಯ ಶೌಚಾಲಯದಲ್ಲಿ ಕಂಡು ಬಂದಿದೆ. ಈತ ಅಕ್ಟೋಬರ್ 4ರಂದು ಆಸ್ಪತ್ರೆಯಿಂದ ಕಾಣೆಯಾಗಿದ್ದ. ಆಸ್ಪತ್ರೆಯ ಶೌಚಾಲಯಗಳನ್ನು ದಿನಾಲೂ ಶುಚಿ ಮಾಡಲಾಗುತ್ತದೆ. ಬೇರೆ ರೋಗಿಗಳೂ ಬಳಸುತ್ತಾರೆ ಆದರೆ, 14 ದಿನದಿಂದ ಮೃತದೇಹ ಗಮನಕ್ಕೆ ಬಾರದ್ದು ನಿಗೂಢವಾಗಿದೆ. ಘಟನೆಯ ಉನ್ನತ ತನಿಖೆಗೆ ಅಧಿಕಾರಿಗಳು ಆದೇಶ ಹೊರಡಿಸಿದೆ.

ವಾರ್ಡಿನಲ್ಲಿ ದುಡಿಯುತ್ತಿದ್ದ 40 ಸಿಬ್ಬಂದಿಗಳಿಗೆ ನೋಟಿಸು ಕಳುಹಿಸಲಾಗಿದೆ. ಮೃತದೇಹಕ್ಕೆ ಹಲವು ದಿವಸಗಳಾಗಿದ್ದರಿಂದ ಕೊಳೆತು ಹೋಗಿತ್ತು. ಆದ್ದರಿಂದ ಆರಂಭದಲ್ಲಿ ಮೃತದೇಹವನ್ನು ಗುರುತಿಸಲು ಸಾಧ್ಯವಾಗಿಲ್ಲ. ನಂತರ ಹೆಚ್ಚಿನ ಪರಿಶೀಲನೆಯ ಬಳಿಕ ಮೃತದೇಹ ಯಾದವ್‍ರೆಂದು ಗುರುತಿಸಲಾಯಿತು.

ಸೆಪ್ಟಂಬರ್ 30ಕ್ಕೆ ಯಾದವ್ ಆಸ್ಪತ್ರೆಗೆ ಬಂದಿದ್ದರು. ಆದರೆ, ಅವರು ವಿಳಾಸ ಸರಿಯಾಗಿರಲಿಲ್ಲ ಎಂದು ಸಿಬ್ಬಂದಿಗಳು ಹೇಳುತ್ತಾರೆ. ಅವರು ಬಂದಾಗ ಆಸ್ಪತ್ರೆಯಲ್ಲಿ ಕೊರೋನ ರೋಗಿಗಳಿದ್ದರು. ಅವರ ಜೊತೆಗೆ ಪ್ರಥಮ ಅಂತಸ್ತಿನಲ್ಲಿ ಯಾದವ್‍ರನ್ನೂ ಇರಿಸಲಾಗಿತ್ತು. ಶೌಚಕ್ಕೆ ತೆರಳಿದವರು ಉಸಿರುಗಟ್ಟಿ ಬಿದ್ದಿರಬಹುದು ಎಂದು ಸಿಬ್ಬಂದಿಗಳು ಹೇಳುತ್ತಿದ್ದಾರೆ. ಯಾದವ್ ನಾಪತ್ತೆಯಾಗಿದ್ದಾರೆಂದು ಕೇಸು ದಾಖಲಿಸಲಾಗಿತ್ತು.

ಟಿಬಿ ರೋಗಿಗಳು ಆಸ್ಪತ್ರೆಯಿಂದ ತಪ್ಪಿಸಿಕೊಳ್ಳುವುದು ಸಾಮಾನ್ಯವಾಗಿದೆ. ದುರದೃಷ್ಟಕರವಾಗಿ ಒಬ್ಬರು ಮೃತಪಟ್ಟಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ತಿಳಿಸಿದೆ.