ಅರ್ನಾಬ್ ರಿಂದ ಅಹಂಕಾರದ ವರ್ತನೆ, ತನಿಖೆಗೆ ಅಡ್ಡಿ: ಮುಂಬೈ ಪೊಲೀಸ್ ಸುಪ್ರೀಂ ಕೋರ್ಟಿಗೆ ದೂರು

0
1767

ಸನ್ಮಾರ್ಗ ವಾರ್ತೆ

ನವದೆಹಲಿ, ಮೇ 5- ರಿಪಬ್ಲಿಕ್ ಟಿವಿ ಚಾನೆಲ್ ನ ಅರ್ನಬ್ ಗೋಸ್ವಾಮಿ ಅಹಂಕಾರದಿಂದ ವರ್ತಿಸುತ್ತಿದ್ದಾರೆ ಮತ್ತು ಸುಪ್ರೀಂಕೋರ್ಟ್ ನೀಡಿರುವ ರಕ್ಷಣೆಯನ್ನು ದುರುಪಯೋಗಪಡಿಸಿ ತನಿಖೆಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಹೇಳಿ ಮುಂಬೈ ಪೊಲೀಸ್ ಸುಪ್ರೀಂಕೋರ್ಟಿನ ಮೆಟ್ಟಿಲೇರಿದೆ.

ಅರ್ನಾಬ್ ಅವರ ಅಹಂಕಾರಿ ವರ್ತನೆಯು ತನಿಖೆಗೆ ಅಡ್ಡಿಯಾಗುತ್ತಿದೆ ಎಂದು ಮುಂಬೈ ಡೆಪ್ಯೂಟಿ ಕಮಿಷನರ್ ಸುಪ್ರೀಂ ಕೋರ್ಟಿನಲ್ಲಿ ಹೇಳಿದ್ದಾರೆ. ತನಿಕ ಅಧಿಕಾರಿಗಳನ್ನು ತಡೆದು ತನಿಖೆಯನ್ನು ಬುಡಮೇಲು ಗೊಳಿಸಲು ಅವರು ಪ್ರಯತ್ನಿಸುತ್ತಿದ್ದಾರೆ ಮತ್ತು ಅವರನ್ನು ಈ ವರ್ತನೆಯಿಂದ ತಡೆಯಬೇಕೆಂದು ಮುಂಬೈ ಪೊಲೀಸ್ ಸುಪ್ರೀಂಕೋರ್ಟ್ ನಲ್ಲಿ ಬೇಡಿಕೆ ಇಟ್ಟಿದೆ.

ಅರ್ನಬ್ ಗೋಸ್ವಾಮಿಯನ್ನು ತನಿಖೆ ನಡೆಸಿ ಬಿಟ್ಟು ಬಿಡಲಾದ ನಂತರ ತನ್ನ ಪ್ರೈಮ್ ಟೈಮ್ ರಿಪಬ್ಲಿಕ್ ಭಾರತಿಯಲ್ಲಿ ಅವರು ಮುಂಬೈ ಪೊಲೀಸ್ ಪಕ್ಷಪಾತಿ ಎಂದು ಆರೋಪಿಸಿದ್ದರು. ಮುಂಬೈ ಪೊಲೀಸರ ವಿರುದ್ಧ ಹಲವು ಆರೋಪಗಳನ್ನೂ ಅವರು ಹೊರಿಸಿದ್ದಾರೆ. ಇಂಡಿಯಾ ಬುಲ್ಸ್ ಹಗರಣದಲ್ಲಿ ಮುಂಬೈ ಕಮಿಷನರ್ ಭಾಗಿಯಾಗಿದ್ದಾರೆಂದೂ ಆ ಬಗ್ಗೆ ತನಿಖೆ ಯಾಗುತ್ತಿದೆ ಎಂದೂ ಪೂಚ್ ತಾ ಹೈ ಭಾರತ್ ಶೋದಲ್ಲಿ ಅವರು ಹೇಳಿದ್ದಾರೆ.

ತನಿಖಾಧಿಕಾರಿಗಳನ್ನು ಭಯಪಡಿಸುವುದೇ ಇದರ ಉದ್ದೇಶ. ತನಿಖಾ ಪ್ರಕ್ರಿಯೆಗೆ ತಡೆ ಒಡ್ಡುವ ಅರ್ನಾಬ್ ರ ಈ ವರ್ತನೆಯನ್ನು ತಡೆಯಬೇಕೆಂದು ಡೆಪ್ಯೂಟಿ ಕಮಿಷನರ್ ಅವರು ಸುಪ್ರೀಂ ಕೋರ್ಟಿಗೆ ಮನವರಿಕೆ ಮಾಡಿದ್ದಾರೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.