ಮುಂಬಯಿ: ಚಿಕನ್ ಜತೆ ಇಲಿ ಮಾಂಸ ಮಿಕ್ಸ್ ; ಬಾಂದ್ರಾ ವೆಸ್ಟ್‌ ನ ರೆಸ್ಟೊರೆಂಟ್ ಮೇಲೆ ಕೇಸು ದಾಖಲು

0
121

ಸನ್ಮಾರ್ಗ ವಾರ್ತೆ

ಮುಂಬಯಿ, ಆ. 16: ಚಿಕನ್ ಫುಡ್‍ನಲ್ಲಿ ಇಲಿ ಮಾಂಸದ ತುಂಡು ಕಂಡು ಬಂದ ಹಿನ್ನೆಲೆಯಲ್ಲಿ ರೆಸ್ಟೊರೆಂಟ್ ಮತ್ತು ಅಡಿಗೆಯಾಳು, ಮ್ಯಾನೇಜರ್ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ.

ಅನುರಾಗ್ ಸಿಂಗ್ ದೂರಿನ ಆಧಾರದಲ್ಲಿ ಬಾಂದ್ರ ವೆಸ್ಟ್ ನ ಪಾಲಿ ಹಿಲ್ಸ್‌ ನ ರೆಸ್ಟೋರೆಂಟ್ ಮೇಲೆ ವಿವಿಧ ಸೆಕ್ಷನ್‍ನ ಅಡಿಯಲ್ಲಿ ಕೇಸು ದಾಖಲಿಸಲಾಗಿದೆ.

ಅನುರಾಗ್ ಸಿಂಗ್ ಇಲ್ಲಿ ಆಹಾರ ಸೇವಿಸಲು ಬಂದಿದ್ದರು. ಚಿಕನ್ ಥಾಲಿ, ಮಟನ್ ಥಾಲಿ ಆರ್ಡರ್ ಮಾಡಿದ್ದು ಚಿಕನ್‍ನಲ್ಲಿ ಬೇರೆ ರೀತಿಯ ಮಾಂಸವು ಅವರ ಗಮನಕ್ಕೆ ಬಂದಿದೆ. ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅದು ಇಲಿ ಮಾಂಸ ಎಂದು ಅವರಿಗೆ ತಿಳಿದು ಬಂದಿದೆ.

ಈ ಕುರಿತು ಅನುರಾಗ್ ಸಿಂಗ್ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ರೆಸ್ಟೊರೆಂಟ್ ವಿರುದ್ಧ ದೂರು ನೀಡಿದ್ದಾರೆ. ದೂರಿನ ಆಧಾರದಲ್ಲಿ ಪೊಲೀಸರು ರೆಸ್ಟೊರೆಂಟ್, ಕುಕ್ ಮತ್ತು ಮ್ಯಾನೇಜರ್ ವಿರುದ್ಧ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.