ಸನ್ಮಾರ್ಗ ಯೂಟ್ಯೂಬ್ ಚಾನಲ್ ನಾಲ್ಕನೆಯ ವರ್ಷಕ್ಕೆ ಪಾದಾರ್ಪಣೆ

0
153

ಸನ್ಮಾರ್ಗ ವಾರ್ತೆ

✍️ ಶಮೀರ ಜಹಾನ್

ಒಂದು ದೇಶದ ಸರ್ವಾಂಗೀಣ ಅಭಿವೃದ್ದಿಗೆ ಮಾಧ್ಯಮ ರಂಗದ ಕೊಡುಗೆ ಅಪಾರ. ಇಂದು ಸುಳ್ಳು ಸುದ್ದಿಗಳೇ ಹೆಚ್ಚು ಹೆಚ್ಚು ಪ್ರಚಾರ ಪಡೆಯುತ್ತದೆ. ಮಾಧ್ಯಮ‌ ಕ್ಷೇತ್ರ ಸತ್ಯದಿಂದ ಕೂಡಿರಬೇಕು. ಏಕಪಕ್ಷೀಯವಾಗಿರದೆ ನ್ಯಾಯದಿಂದ ಕೂಡಿರಬೇಕು‌. ನಮ್ಮಲ್ಲಿ ಕನ್ನಡ ಸುದ್ದಿವಾಹಿನಿಗಳಿಗೆ ಏನೂ ಕೊರತೆ ಇಲ್ಲ. ಆದರೆ ಇದ್ದದ್ದನ್ನು ಇದ್ದ ಹಾಗೆ ಪ್ರಸಾರ ಮಾಡದೆ, ಸುಳ್ಳು ಸುದ್ದಿಗಳನ್ನು ಹರಡುವ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವ ಮಾಧ್ಯಮಗಳೇ ಮೇಲುಗೈ ಸಾಧಿಸುತ್ತಿದೆ.

ಈ ಕಾಲಘಟ್ಟದಲ್ಲಿ ಸತ್ಯವನ್ನು ಮಾತ್ರ ಪ್ರಸಾರ ಮಾಡುವ ಉದ್ದೇಶದಿಂದ ‘ಸುದ್ದಿಗಳ ಸಂತೆಯಲ್ಲಿ ಸತ್ಯದ ಮೊಂಬತ್ತಿ’ ಎಂಬ ಧ್ಯೇಯವಾಕ್ಯದೊಂದಿಗೆ ರಂಗ ಪ್ರವೇಶಿಸಿದ ಸನ್ಮಾರ್ಗ ಯೂ ಟ್ಯೂಬ್ ಚಾನಲ್ ನ ಸೇವೆ ಶ್ಲಾಘನೀಯ.

ಸತ್ಯದ ಕೆಲಸ ಎಲ್ಲರನ್ನೂ ಒಂದುಗೂಡಿಸುವುದಾಗಿದೆ. ಸನ್ಮಾರ್ಗ ಎಲ್ಲ ಜನ ವಿಭಾಗದವರನ್ನೂ ಒಂದುಗೂಡಿಸುವ ಪ್ರಯತ್ನ ಮಾಡುತ್ತಿರುವುದರಲ್ಲಿ ಸಂದೇಹವೇ ಇಲ್ಲ. ಎಲ್ಲ ಕ್ಷೇತ್ರಗಳೂ ವ್ಯಾಪಾರೀಕರಣಗೊಂಡಿರುವಾಗ, ಕಲುಷಿತಗೊಂಡಿರುವಾಗ ಮೌಲ್ಯಾಧಾರಿತವಾಗಿ ಮುನ್ನಡೆಯುವುದು ಒಂದು ದೊಡ್ಡ ಸಾಹಸವೇ ಸರಿ.

ಸನ್ಮಾರ್ಗ ಇನ್ನು ಮುಂದೆಯೂ ಏಕಪಕ್ಷೀಯವಾಗಿರದೆ ಜನರ ಮಾಧ್ಯಮವಾಗಲಿ. ಬೆದರಿಕೆಗಳಿಗೆ ಅಂಜದೆ, ತೆಗಳಿಕೆಗೆ ಕುಗ್ಗದೆ ದೇಶದ ಅಭಿವೃದ್ಧಿಗೆ ತನ್ನದಾದ ಕೊಡುಗೆ ನೀಡಲಿ ಎಂಬ ಹಾರೈಕೆ.