ಅರಬ್ ಒಗ್ಗಟ್ಟು ಎತ್ತಿ ಹಿಡಿದು ಅಮೆರಿಕದ ಶಾಂತಿ ಯೋಜನೆ ವಿರೋಧಿಸಿದ ಮುಸ್ಲಿಂ ಬ್ರದರ್ ಹುಡ್

0
623

ಕೈರೊ,ಜೂ.7: ಅರಬ್ ಪ್ರದೇಶಗಳ ಸಮಸ್ಯೆ ಪರಿಹಾರಕ್ಕೆ ತುರ್ತು ಕ್ರಮಕೈಗೊಳ್ಳುವಂತೆ ಮತ್ತು ಅರಬ್ ದೇಶಗಳ ಒಗ್ಗಟ್ಟಿಗೆ ಮುಸ್ಲಿಂ ಬ್ರದರ್‍ ಹುಡ್‌ಗೆ ಕರೆ ನೀಡಿದೆ. ಶತಮಾನದ ಒಪ್ಪಂದ ಎಂದು ಕರೆಯಲಾದ ಅಮೆರಿಕದ ಮಧ್ಯಪ್ರಾಚ್ಯ ಶಾಂತಿ ಯೋಜನೆಯನ್ನು ಮುಸ್ಲಿಂ ಬ್ರದರ್‌ ಹುಡ್‌ ವಿರೋಧಿಸಿದೆ. ಮಕ್ಕದಲ್ಲಿ ನಡೆದಿದ್ದ ಅರಬ್‍ಲೀಗ್, ಜಿಸಿಸಿ ಇಸ್ಲಾಮಿಕ್ ಸಹಕಾರ ಸಂಘಟನೆಯ ಶೃಂಗದ ನಂತರ ಬ್ರದರ್‍‌ ಹುಡ್ ಹೇಳಿಕೆಯನ್ನು ನೀಡಿತು.

ಅರಬ್ ಜಗತ್ತಿಗೆ ಬೆದರಿಕೆಯಾಗುವ ಒಂದು ವಾತಾವರಣದಲ್ಲಿ ಇಂತಹ ಶೃಂಗ ನಡೆಯಿತು. ಅರಬ್ ಲೋಕ ತೀರಾ ಬೆದರಿಕೆಯನ್ನು ಎದುರಿಸುತ್ತಿದೆ ಎಂದು ಬ್ರದರ್‍‌ ಹುಡ್ ಹೇಳಿದೆ. ಅರಬ್ ದೇಶಗಳು ಪರಸ್ಪರ ಕಚ್ಚಾಡದೆ ಸಮಸ್ಯೆಗಳನ್ನು ಬಗೆಹರಿಸಲು ಮುಂದೆ ಬರಬೇಕು. ಹೀಗೆ ನಡೆಯುವುದಾದರೆ ಗಲ್ಫ್ ಬಿಕ್ಕಟ್ಟು ಇಲ್ಲದಂತೆ ಮಾಡಬಹುದು ಎಂದು ಹೇಳಿಕೆಯಲ್ಲಿ ಬ್ರದರ್‌ ಹುಡ್ ಅಭಿಪ್ರಾಯ ವ್ಯಕ್ತಪಡಿಸಿತು.