ಹೊಸದಿಲ್ಲಿ,ಜೂ. 8: ಅಸ್ಸಾಂನಲ್ಲಿ ವಿದೇಶಿಯರನ್ನು ಪತ್ತೆ ಹಚ್ಚಲು ಸ್ಥಾಪನೆಯಾದ ಟ್ರಿಬ್ಯೂನಲ್, ವಿದೇಶಿಯೆಂದು ಘೋಷಿಸಿ ಜೈಲಿಗೆ ದೂಡಿದ್ದ ಕಾರ್ಗಿಲ್ ಯುದ್ಧ ಸೇನಾನಿ ಮುಹಮ್ಮದ್ ಸನಾವುಲ್ಲಾರಿಗೆ ಮಧ್ಯಕಾಲೀನ ಜಾಮೀನು ದೊರಕಿದೆ. ಮಾಜಿ ಭಾರತ ಭೂ ಸೇನೆಯ ಜವಾನ್ ಎಂಬ ನೆಲೆಯಲ್ಲಿ ಅಸ್ಸಾಂ ಪೊಲೀಸಿನ ಗಡಿ ಭದ್ರತಾದಳದಲ್ಲಿ ಅಧಿಕಾರಿಯಾಗಿದ್ದ ಸನಾವುಲ್ಲಾರನ್ನು ಅಸ್ಸಾಂನ ಬೊಕೊದಲ್ಲಿ ಮೇ 28ರಂದು ಬಂಧಿಸಲಾಗಿತ್ತು.
ಟ್ರಿಬ್ಯುನಲ್ ಇವರನ್ನು ವಿದೇಶಿ ಪ್ರಜೆಯೆಂದು ಘೋಷಿಸಿದೆಯೆಂದು ಹೈಕೋರ್ಟಿನ ಆದೇಶದಲ್ಲಿ ವಿವರಿಸಲಾಗಿದೆ. ಟ್ರಿಬ್ಯುನಲ್ ಆದೇಶದ ವಿರುದ್ಧ ಸನಾವುಲ್ಲಾರ ಕುಟುಂಬ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು. ಪೌರತ್ವ ಸಾಬೀತು ಪಡಿಸುವ ದಾಖಲೆಗಳು ಕುಟುಂಬದ ಬಳಿ ಇದೆ ಎಂದು ಇವರ ವಕೀಲರು ಹೇಳಿದ್ದಾರೆ.












