ಸಾಕುಪುತ್ರಿಯ ವಿವಾಹವನ್ನು ಹಿಂದೂ ಸಂಪ್ರದಾಯದಂತೆ ಮಾಡಿದ ಮುಸ್ಲಿಮ್ ಪೋಷಕರು

0
978

ಸನ್ಮಾರ್ಗ ವಾರ್ತೆ

ಬೆಂಗಳೂರು: ಸಾಕು ಮಗಳ ಮದುವೆಯನ್ನು ಅವಳ ನಂಬಿಕೆ ಆಚಾರಗಳ ಪ್ರಕಾರ ಹಿಂದೂ ಸಂಪ್ರದಾಯದಂತೆ ಮುಸ್ಲಿಂ ಹೆತ್ತವರು ನಡೆಸಿಕೊಟ್ಟಿದ್ದಾರೆ. ವಿಜಯಪುರದ ಇಲೆಕ್ಟ್ರಿಕಲ್ ಗುತ್ತೆದಾರ ಮೆಹ್‍ಬೂಬರ ಸಾಕು ಮಗಳಾದ ಪೂಜಾ ವಡಿಗೇರಿ(18)ಯವರ ಮದುವೆಯನ್ನು ವಿಶೇಷ ಪೂಜೆಯೊಂದಿಗೆ ನಡೆಸಿದ್ದಾರೆ. ಹಿಂದೂ ಆದ ಶಂಕರ್‌ರನ್ನು ಪೂಜಾ ವರಿಸಿದ್ದಾರೆ.

ಹತ್ತು ವರ್ಷಗಳ ಹಿಂದೆ ಪೂಜಾ ತಂದೆ-ತಾಯಿಯನ್ನು ಕಳೆದುಕೊಂಡಿದ್ದಳು. ಇವಳನ್ನು ತಮ್ಮ ನಾಲ್ಕು ಮಕ್ಕಳ ಜೊತೆ ತಮ್ಮ‌ ಮಗಳಂತೆಯೇ ಮೆಹ್‍ಬೂಬ್ ಸಾಕಿದರು. ಹಿಂದೂ ವಿಶ್ವಾಸದಂತೆಯೇ ಪೂಜಾಳನ್ನು ಸಾಕಿದರು. ಹದಿನೆಂಟು ವರ್ಷ ವಯಸ್ಸಾದಾಗ ಪೂಜಾಳಿಗೆ ಅನುಯೋಜ್ಯನಾದ ವರನನ್ನು ಹುಡುಕಿ ಮದುವೆ ನಿಶ್ಚಯಿಸಿದ್ದಾರೆ. ಎರಡು ಧರ್ಮದ ಸಂಬಂಧಿಕರು ಮದುವೆಯಲ್ಲಿ ಭಾಗವಹಿಸಿದರು.