ಮನೆಗಳು ನೆಲಸಮ, ಉದ್ಯೋಗಕ್ಕೆ ನಿಷೇಧ: ಇದು ಅಲ್ಪಸಂಖ್ಯಾತರನ್ನು ಬೇಟೆಯಾಡುತ್ತಿರುವ ಹೊಸ ಗುಜರಾತ್ ಮಾದರಿ

0
195

ಸನ್ಮಾರ್ಗ ವಾರ್ತೆ

ಗುಜರಾತ್‌ನ ಕರಾವಳಿ ಪ್ರದೇಶಗಳಲ್ಲಿ ಭದ್ರತಾ ಕಾರಣಗಳನ್ನು ಉಲ್ಲೇಖಿಸಿ ಮತ್ತು ಅಕ್ರಮ ನಿರ್ಮಾಣದ ಆರೋಪದ ಮೇಲೆ ಮುಸ್ಲಿಂ ಸಮುದಾಯದವರಿಗೆ ಸೇರಿದ ಮನೆಗಳು ಮತ್ತು ಕಟ್ಟಡಗಳನ್ನು ಕೆಡವುವ ಪ್ರಕ್ರಿಯೆ ಮುಂದುವರೆದಿದೆ. ಸೌರಾಷ್ಟ್ರ ಪ್ರದೇಶದ ಕರಾವಳಿ ಪ್ರದೇಶದಲ್ಲಿ ಅಕ್ಟೋಬರ್ 1ರಂದು ಪ್ರಾರಂಭವಾದ ಕಾರ್ಯಾಚರಣೆ ಯಾವುದೇ ತಡೆಯಿಲ್ಲದೇ ಮುಂದುವರೆದಿದೆ.

ಈಗಾಗಲೇ ಸಾವಿರಾರು ಕಟ್ಟಡಗಳು ನೆಲಸಮವಾಗಿವೆ. ಈ ಕ್ರಮದಿಂದಾಗಿ ಅನೇಕ ಜನರು ನಿರಾಶ್ರಿತರಾಗಿದ್ದಾರೆ. ಅಕ್ರಮ ನಿರ್ಮಾಣ ಎಂದು ಆರೋಪಿಸಿ, ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮಕ್ಕೆ ಸೂಚಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಕರಾವಳಿಯಲ್ಲಿ ಮುಸ್ಲಿಮರನ್ನು ಹಲವು ವರ್ಷಗಳಿಂದ ಬೇಟೆಯಾಡಲಾಗುತ್ತಿದ್ದು, ಈಗಿನ ಕ್ರಮ ಅದರ ಮುಂದುವರಿದ ಭಾಗವಾಗಿದೆ ಎಂದು ಅಲ್ಪಸಂಖ್ಯಾತ ಪ್ರತಿನಿಧಿಗಳು ಹೇಳುತ್ತಿದ್ದಾರೆ. ಪೊರ್‌ಬಂದರಿನ ಸಮೀಪದ ಗೋಸಬಾರದಲ್ಲಿ ನೂರಾರು ಮುಸ್ಲಿಮರ ಮನೆಗಳಿದ್ದು ಹಲವು ವರ್ಷಗಳಿಂದ ಇವರು ಇಲ್ಲಿ ಬೇಟೆಯಾಡಲ್ಪಡುತ್ತಿರುವುದನ್ನು ಒಂದು ಉದಾಹರಣೆಯಾಗಿ ಪ್ರತಿನಿಧಿಗಳು ಬೆಟ್ಟು ಮಾಡುತ್ತಾರೆ.

ವಿಶ್ವ ಹಿಂದೂ ಪರಿಷತ್, ಬಜರಂಗದಳ ಮೊದಲಾದವರು ದೂರು ನೀಡಿದ ಆಧಾರದಲ್ಲಿ ಗೋಸಾಬಾರದಲ್ಲಿ ಜನರಿಗೆ ಮೀನುಗಾರಿಕೆಗೆ ಲೈಸನ್ಸ್ ಇದ್ದರೂ ಕೂಡ ಮೀನುಗಾರಿಕೆಗೆ ಅನುಮತಿಯನ್ನೂ ಕೂಡ ಅಧಿಕಾರಿಗಳು ನಿಷೇಧಿಸಿದ್ದಾರೆ. ಇವರು ಸಮಾಜ ವಿರೋಧಿಗಳು, ದೇಶವಿರೋಧಿ ಕೃತ್ಯ ಎಸಗುವವರೆಂದು ಮೀನುಗಾರರನ್ನು ಹಿಂದುತ್ವ ಸಂಘಟನೆಗಳು ಆರೋಪಿಸುತ್ತಿವೆ. ವಿಚಿತ್ರ ಕ್ರಮದ ವಿರುದ್ಧ ಅಧಿಕಾರಿಗಳನ್ನು ವಿಚಾರಿಸಿದರೆ, ಮೇಲಿನಿಂದ ಬಂದ ಆದೇಶ ಎಂದು ಅವರು ಹೇಳಿರುವುದಾಗಿ ಗೋಸಾಬಾದಿನ ಮೀನುಗಾರರ ಪ್ರತಿನಿಧಿ ಅಲ್ಲಾರಖ ಹೇಳುತ್ತಾರೆ.

ಗೋಸಬಾರದಲ್ಲಿ ಜನರಿಗೆ ನವಿಬಂದರಿನಲ್ಲಿ ಮೀನು ಹಿಡಿಯುವ ಅನುಮತಿ ನೀಡಿದರೆ ಸಮಸ್ಯೆ ಆಗಬಹುದೆಂದು ಅದರ ಜವಾಬ್ದಾರಿ ಅಧಿಕಾರಿಗಳದ್ದು ಎಂದು ಹಿಂದುತ್ವ ಸಂಘಟನೆಗಳು ದೂರು ನೀಡಿದ್ದು, ಗೋಸಾಬಾರದಲ್ಲಿ ದೇಶವಿರೋಧಿ ಚಟುವಟಿಕಗಳು ನಡೆಯುತ್ತಿದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. ಆದರೆ ಆರೋಪಗಳಿಗೆ ಯಾವುದೇ ಪುರಾವೆಗಳಿಲ್ಲ. ಎಲ್ಲ ದೂರುಗಳು ಒಂದೇ ರೀತಿಯಲ್ಲಿದ್ದು ಎಲ್ಲವೂ ಅವುಗಳ ಪ್ರತಿಗಳಾಗಿವೆ. ಕೆಳಗೆ ಸಹಿ ಹಾಕಿದವರು ಮಾತ್ರ ಬದಲಾಗಿದ್ದಾರೆ.

ದೂರಿನ ಆಧಾರದಲ್ಲಿ ಗೋಸಬಾರದ ಮುಸ್ಲಿಮರು ಮೀನು ಹಿಡಿಯುವುದನ್ನು ಮಾರ್ಚ್ ಎರಡರಿಂದ ಅಧಿಕಾರಿಗಳು ತಡೆ ಹಿಡಿದಿದ್ದಾರೆ. ಕೆಲಸ ಮಾಡಲು ಬಿಡದ ಅಧಿಕಾರಿಗಳ ಕ್ರಮದ ವಿರುದ್ಧ ಗೋಸಬಾರದ ಮುಸ್ಲಿಮ್ ಮುಕ್ಕುವ ಸಮುದಾಯದ 600 ಮಂದಿ ದಯಾಮರಣಕ್ಕೆ ಅನುಮತಿ ಕೇಳಿ ಹೈಕೋರ್ಟಿನ ಮೊರೆ ಹೋಗಿದ್ದಾರೆ. ತಿಳಿದ ಕೆಲಸ ಮಾಡಲು ಬಿಡುವುದಿಲ್ಲ. ಆದುದರಿಂದ ದಯಾ ಮರಣಕ್ಕೆ ಅನುಮತಿಸಬೇಕೆಂದು ಮುಕ್ಕುವದವರು ಆಗ್ರಹಿಸಿದ್ದರು. ತದನಂತರ ಮುಕ್ಕುವರಿಗೆ ಮೀನುಗಾರಿಕೆಗರ ಅನುಮತಿ ನೀಡಲಾಗಿತ್ತು. ಅದರೆ, ಅಕ್ಟೋಬರ್‌ನಲ್ಲಿ ಶುರುವಾದ ವಿವಾದದಿಂದ ಗೋಸಬಾರದಲ್ಲಿರುವ ಮುಕ್ಕುವದವರ ಮನೆಗಳು, ಕಟ್ಟಡಗಳನ್ನು ಕೆಡವಲಾಗಿದ್ದು ಈಗ ಅವರಿಗೆ ನಿಲ್ಲಲು ನೆಲೆ ಇಲ್ಲದಂತಾಗಿದೆ. ಪೊರಬಂದರಿನಲ್ಲಿ ಮುಸ್ಲಿಮರಿಗೆ ಸೇರಿದ ಕಟ್ಟಡ, ಮನೆಗಳು, ಅಂಗಡಿಗಳನ್ನು ದರ್ಗಾಗಳನ್ನು ಕೆಡವಲಾಗಿದೆ. ನೋಟಿಸು ನೀಡಲಾಗಿಲ್ಲ, ಅವರ ದೂರನ್ನು ಕೇಳಿಲ್ಲ ಹಾಗೆಯೇ, ವಿಚಾರಣೆಯೂ ನಡೆದಿಲ್ಲ. ಬುಲ್ಡೋಝರ್‌ನಿಂದ ಅವರ ಮನೆ ಮಠಗಳನ್ನು ಕೆಡಹುವ ಕಾರ್ಯ ಮಾತ್ರ ಮುಂದುವರಿದಿದೆ.