ವಿಶ್ವದ ಅತ್ಯಂತ ಕೊಳಕು ಮನುಷ್ಯ ನಿಧನ

0
264

ಸನ್ಮಾರ್ಗ ವಾರ್ತೆ

ವಿಶ್ವದ ಅತ್ಯಂತ ಕೊಳಕು ಮನುಷ್ಯ ಎಂದು ಹೆಸರಾಗಿದ್ದ ಇರಾನಿನ 94 ವರ್ಷದ ಅಮೌ ಹಾಜಿ ಎಂಬವರು ನಿಧನರಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಸುಮಾರು ಅರವತ್ತು ವರ್ಷಗಳಿಂದ ಸ್ನಾನ ಮಾಡದ ಕಾರಣಕ್ಕಾಗಿ ಅವರು ಎಲ್ಲೆಡೆ ಕುತೂಹಲದ ವಸ್ತುವಾಗಿದ್ದರು.

ಮಸಿಯನ್ನು ಮೆತ್ತಿಕೊಂಡು, ಸಿಂಡರ್-ಬ್ಲಾಕ್‌ಗಳ ಗುಡಿಸಲಿನಲ್ಲಿ ವಾಸಿಸುತ್ತಿದ್ದರು.  “ತನ್ನ ಯೌವನಾವಸ್ಥೆಯಲ್ಲಿ ಭಾವನಾತ್ಮಕವಾಗಿ ಘಾಸಿಗೊಳಗಾಗಿದ್ದ  ಅಮೌ ಹಾಜಿ ತದನಂತರ ಸ್ನಾನ ಮಾಡಲು ನಿರಾಕರಿಸಿದ್ದಾಗಿ” ಸ್ಥಳೀಯರು ಹೇಳುತ್ತಾರೆ.

1950ರ ದಶಕದ ಮಧ್ಯಭಾಗದಿಂದ ಸ್ನಾನ ಮಾಡದೇ ಜೀವಿಸುತ್ತಿದ್ದ ಅಮೌ ಹಾಜಿ, ಅನಾರೋಗ್ಯಕ್ಕೆ ಒಳಗಾಗುತ್ತೇನೆ ಎಂಬ ಭಯದಿಂದ ಸ್ಥಾನ ಮಾಡುವುದನ್ನು ತೊರೆದಿದ್ದರು ಎಂದು ಸ್ಥಳೀಯ ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಈ ಮಧ್ಯೆ ಕೆಲವು ತಿಂಗಳ ಹಿಂದೆ ಮೊದಲ ಬಾರಿಗೆ ಗ್ರಾಮಸ್ಥರು ಇವರನ್ನು ಸ್ನಾನಮಾಡಿಸಲು ಸ್ನಾನ ಗೃಹಕ್ಕೆ ಕರೆದೊಯ್ದಿದ್ದರು ಎಂದು ವರದಿಯಾಗಿದೆ

ಇವರಿಗೆ ಟ್ರೈ ಕಿನೋಸಿಸ್ ಎಂಬ ಕಾಯಿಲೆಯಿತ್ತು. ಇದು ಹಸಿ ಅಥವಾ ಕಡಿಮೆ ಬೇಯಿಸಿದ ಮಾಂಸವನ್ನು ತಿನ್ನುವುದರಿಂದ ಬರುವ ಕಾಯಿಲೆ. ಆದಾಗ್ಯೂ ಈ ಕಾಯಿಲೆಯು ಅವರಿಗೆ ಅಸ್ವಸ್ಥತೆಯನ್ನು ಉಂಟುಮಾಡಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

2013ರಲ್ಲಿ ಇವರ ಜೀವನದ ಬಗ್ಗೆ ‘ದಿ ಸ್ಟ್ರೇಂಜ್ ಲೈಫ್ ಆಫ್ ಅಮೌ ಹಾಜಿ’ ಎಂಬ ಕಿರು ಸಾಕ್ಷ್ಯಚಿತ್ರವನ್ನು ನಿರ್ಮಿಸಲಾಗಿತ್ತು ಎಂದು ವರದಿಗಳು ಹೇಳಿವೆ.