ಮುಸ್ಲಿಂ ಬಹುಸಂಖ್ಯಾತ ಕಾಲೋನಿಗೆ ಒಂದು ತಿಂಗಳಿನಿಂದ ನೀರಿಲ್ಲ, ಹಿಂದೂ ಏರಿಯಾಕ್ಕೆ ನೀರಿದೆ

0
510

ಸನ್ಮಾರ್ಗ ವಾರ್ತೆ

ಕೊಲ್ಕತ್ತಾದ ಜ್ಯೋತಿ ನಗರ ಕಾಲನಿಯಲ್ಲಿ ವಾಸಿಸುತ್ತಿರುವ ನೂರಾರು ಕುಟುಂಬಗಳು ಸುಮಾರು ಒಂದು ತಿಂಗಳಿನಿಂದ ನೀರಿಲ್ಲದೆ ಸಂಕಷ್ಟ ಪಡುತ್ತಿದ್ದಾರೆ. ತಮ್ಮ ದೈನಂದಿನ ಅಗತ್ಯಗಳಿಗಾಗಿ ನದಿ ದಡಕ್ಕೆ ಹೋಗುತ್ತಿದ್ದಾರೆ. ಇಲ್ಲಿ ಸುಮಾರು 5 ಸಾವಿರದಷ್ಟು ಮಂದಿ ವಾಸಿಸುತ್ತಿದ್ದಾರೆ. ಇಲ್ಲಿನ ಹೆಚ್ಚಿನ ನಿವಾಸಿಗಳು ಮುಸ್ಲಿಮರು. ಕಡಿಮೆ ಸಂಖ್ಯೆಯಲ್ಲಿ ಹಿಂದೂ ಕುಟುಂಬಗಳೂ ಇವೆ . ಇದನ್ನು ಸ್ಥಳೀಯವಾಗಿ ಮುಸ್ಲಿಂ ಕಾಲೋನಿ ಎಂದು ಕರೆಯಲಾಗುತ್ತದೆ.

ಇಲ್ಲಿನ ನಿವಾಸಿಗಳು ನಿರ್ಮಾಣ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ ಮತ್ತು ಬಾಟಲ್ ಕರಗಿಸುವ ಘಟಕಗಳಲ್ಲಿ ಅಲ್ಪ ವೇತನಕ್ಕಾಗಿ ಕೆಲಸ ಮಾಡುತ್ತಿದ್ದಾರೆ.

ಈ ಕಾಲೋನಿಯಲ್ಲಿ ಆರು ನೀರಿನ ನಲ್ಲಿಗಳಿದ್ದು ಜುಲೈ 29 ರಿಂದ ಇವೆಲ್ಲವೂ ಪೂರೈಕೆಯನ್ನು ಸ್ಥಗಿತಗೊಳಿಸಿವೆ . ತಮ್ಮ ನಲ್ಲಿಗಳು ಒಣಗಿದ್ದರೂ ಅದೇ ರಸ್ತೆಯ ಉದ್ದಕ್ಕೂ ಇರುವ ಹಿಂದೂ ಬಹು ಸಂಖ್ಯಾತ ಕಾಲನಿಗಳಲ್ಲಿನ ನೀರಿನ ನಲ್ಲಿಗಳು ಕಾರ್ಯನಿರ್ವಹಿಸುತ್ತಿವೆ ಎಂದು ಮುಸ್ಲಿಮರು ಆರೋಪಿಸಿದ್ದಾರೆ.

ಇಷ್ಟು ಮಾತ್ರ ಅಲ್ಲ ಕಾಲನಿಯ ಬೀದಿಗಳಿಗೆ ವಿದ್ಯುತ್ ಸಂಪರ್ಕವನ್ನು ಕೂಡ ಸ್ಥಗಿತಗೊಳಿಸಲಾಗಿದ್ದು ಈಗ ಬೀದಿ ದೀಪಗಳು ಉರಿಯುತ್ತಿಲ್ಲ.

ತಮಗೆ ಮತ ಹಾಕದ ಮುಸ್ಲಿಮರಿಗೆ ತಾನು ಕೆಲಸ ಮಾಡುವುದಿಲ್ಲ ಎಂದು ಇಲ್ಲಿಯ ಬಿಜೆಪಿ ಶಾಸಕ ರಿತೇಶ್ ತಿವಾರಿ ಹೇಳಿದ್ದರು . ಈ ಹೇಳಿಕೆ ಈ ನೀರಿನ ಬಿಕ್ಕಟ್ಟಿಗೆ ಕಾರಣ ಎಂದು ನಿವಾಸಿಗಳು ಆರೋಪಿಸುತ್ತಾರೆ.

ಈ ಶಾಸಕರು ಪಕ್ಷದ ಸಭೆಯಲ್ಲಿ ಈ ಕೊಳೆಗೇರಿಯ ಜನರನ್ನು ಅಕ್ರಮ ಬಾಂಗ್ಲಾದೇಶಿ ವಲಸಿಗರು ಎಂದು ಕರೆದಿದ್ದರು. ಆ ಭಾಷಣ ಆನ್ಲೈನ್ನಲ್ಲಿ ವೈರಲ್ ಆಗಿತ್ತು. ಇದೀಗ ಈ ಕೊಳಗೇರಿಯ ನಿವಾಸಿಗಳು ತಮ್ಮನ್ನು ತೆರವುಗೊಳಿಸುವ ಭೀತಿಯಲ್ಲಿ ಇದ್ದಾರೆ. ಅಕ್ರಮ ಬಾಂಗ್ಲಾದೇಶಿಗಳು ಎಂದು ಹೇಳಿ ಬುಲ್ ಡೋಜರ್ ತೆರವು ಕಾರ್ಯಕ್ರಮ ನಡೆಯಬಹುದು ಎಂಬ ಆತಂಕದಲ್ಲಿದ್ದಾರೆ.