ಸನ್ಮಾರ್ಗ ವಾರ್ತೆ
ಅಹ್ಮದಾಬಾದ್, ಫೆ. 21: ಫೆಬ್ರವರಿ 24ಕ್ಕೆ ಅಹ್ಮದಾಬಾದ್ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ನಡೆಸುವ 22 ಕಿಲೊಮೀಟರ್ ರೋಡ್ ಶೋ ನೋಡಲು ಒಂದು ಲಕ್ಷ ಮಂದಿ ನೆರಯಲಿದ್ದಾರೆ ಎಂದು ವರದಿಯಾಗಿದೆ. ಆದರೆ, ರೋಡ್ ಶೋ ನೋಡಲು 70 ಲಕ್ಷ ಮಂದಿ ಬರುವರು ಎಂದು ಮೋದಿ ತಿಳಿಸಿದ್ದಾರೆ ಎಂದು ಟ್ರಂಪ್ ಈ ಹಿಂದೆ ಹೇಳಿದ್ದರು. 70- 78 ಲಕ್ಷ ಮಂದಿ ಅಹ್ಮದಾಬಾದಿನ ಜನಸಂಖ್ಯೆಯಾಗಿದ್ದು ರೋಡ್ ಶೋ ನೋಡಲು ಒಂದು ಲಕ್ಷ ಬರುವ ನಿರೀಕ್ಷೆ ಇದೆ ಎಂದು ಮುನ್ಸಿಪಲ್ ಕಮಿಶನರ್ ವಿಜಯ್ ನೆಹ್ರ ಹೇಳಿದರು. ರೋಡ್ ಶೋ ಭಾಗವಾಗಿ ಅಹ್ಮದಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೊದಲು ಸಬರ್ಮತಿ ಆಶ್ರಮಕ್ಕೆ ಟ್ರಂಪ್ ಬರಲಿದ್ದಾರೆ. ಅದೇವೇಳೆ
ಭಾರತವು ಅಮೆರಿಕವನ್ನು ವ್ಯಾಪಾರಿ ಕ್ಷೇತ್ರದಲ್ಲಿ ಸರಿಯಾಗಿ ಪರಿಗಣಿಸಿಲ್ಲ ಎಂದು ಟ್ರಂಪ್ ಈ ಹಿಂದೆ ನೀಡಿದ್ದಾರೆ. ರಫ್ತು-ಆಮದುಗಳ ನಡುವೆ ಇರುವ ಅಂತರದ ಹಿನ್ನೆಲೆಯಲ್ಲಿ ಟ್ರಂಪ್ ಹೀಗೆ ಹೇಳಿದ್ದಾರೆ ಎಂದು ವಿದೇಶ ಸಚಿವಾಲಯ ಹೇಳುತ್ತಿದೆ. ಈ ಆತಂಕ ಬಗೆಹರಿಸುವ ಯತ್ನ ನಡೆಯುತ್ತಿದೆ ಎಂದು ವಿದೇಶ ವಕ್ತಾರ ರವೀಶ್ ಕುಮಾರ್ ಹೇಳಿದರು. ಒಪ್ಪಂದಕ್ಕೆ ಸಹಿಹಾಕುವ ಕುರಿತು ಚರ್ಚೆಗಳು ನಡೆಯುತ್ತಿವೆ ಎಂದು ಅನಿವಾಸಿ ಭಾರತೀಯರನ್ನು ಬಾಧಿಸುವ ಎಚ್1ಬಿ ವೀಸಾ ಕುರಿತು ಮೋದಿ-ಟ್ರಂಪ್ ಭೇಟಿಯ ವೇಳೆ ಚರ್ಚೆ ನಡೆಯಲಿದೆಯೇ ಎಂದು ಪ್ರಶ್ನಿಸಿದಾಗ ಹೇಳಿದರು.












