ನಾನೇ ಪ್ರಥಮ, ಮೋದಿ ದ್ವಿತೀಯ; ವಿಚಿತ್ರ ವಾದ ಮಂಡಿಸಿದ ಟ್ರಂಪ್

0
1105

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್, ಫೆ. 21: ನರೇಂದ್ರ ಮೋದಿ ಫೇಸ್‍ಬುಕ್‍ನಲ್ಲಿ ಎರಡನೆ ಸ್ಥಾನದಲ್ಲಿದ್ದಾರೆ. ಪ್ರಥಮ ಸ್ಥಾನದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದ್ದಾರೆ ಎಂದು ಫೆಸ್‍ಬುಕ್ ಸಂಸ್ಥಾಪಕ ಮಾರ್ಕ್ ಝುಕರ್‍ಬಗ್ ತನ್ನೊಡನೆ ನೇರವಾಗಿ ಹೇಳಿದ್ದಾರೆ ಎಂದು ಲಾಸ್ ವೇಗಸ್‍ನಲ್ಲಿ ಕಾರ್ಯಕ್ರಮವೊಂದರಲ್ಲಿ ಡೊನಾಲ್ಡ್ ಟ್ರಂಪ್ ಜನರಿಗೆ ತಿಳಿಸಿದ್ದಾರೆ. 4.4 ಕೋಟಿ ಜನರು ಮೋದಿಯನ್ನು ಫೇಸ್‍ಬುಕ್‍ನಲ್ಲಿ ಫಾಲೋ ಮಾಡಿದರೆ ಟ್ರಂಪ್‍ರನ್ನು 2.7 ಕೋಟಿ ಜನರು ಪಾಲೋ ಮಾಡುತ್ತಿದ್ದಾರೆ. ಯಾವ ಆಧಾರದಲ್ಲಿ ಟ್ರಂಪ್ ಹೀಗೆ ಹೇಳಿಕೆ ನೀಡಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವರು ಪ್ರಶ್ನಿಸಿದ್ದಾರೆ.

ಇದೇ ವೇಳೆ ಭಾರತದಲ್ಲಿ 150 ಕೋಟಿ ಜನಸಂಖ್ಯೆಇರುವುದರಿಂದ ಮೋದಿಗೆ ಫೇಸ್‍ಬುಕ್‍ನಲ್ಲಿ ಈ ಸಾಧನೆ ಸಾಧ್ಯವಾಗಿದೆ ಎಂದು ಟ್ರಂಪ್ ಹೇಳಿದ್ದಾರೆ. ಅಮೆರಿಕದಲ್ಲಿ 32 ಕೋಟಿ ಜನರಿದ್ದಾರೆ. ಆದರೂ ಮೋದಿ ಫೇಸ್ ಬುಕ್ ಕ್‍ನಲ್ಲಿ ಎರಡನೆ ಸ್ಥಾನದಲ್ಲಿದ್ದಾರೆ. ಯಾರು ಪ್ರಥಮ ಎಂದು ನಿಮಗೆ ಗೊತ್ತೇ..? ಟ್ರಂಪ್… ನಿಮಗೆ ನಂಬಲು ಆಗುತ್ತಿದೆಯೇ? ನನಗೂ ಈಗ ಮನವರಿಕೆಯಾಗುತ್ತಿದೆ ಎಂದು ಟ್ರಂಪ್ ಹೇಳಿದರು.

ಫೇಸ್‍ಬುಕ್‍ನ ಸ್ಥಾಪಕರು ಒಂದು ವಾರ ಹಿಂದೆ ನನ್ನನ್ನು ಭೇಟಿಯಾಗಿದ್ದರು. ಅವರು ನನ್ನನ್ನು ಅಭಿನಂದಿಸಿದರು. ಯಾಕೆ ಎಂದು ಕೇಳಿದಾಗ ನೀವು ಫೇಸ್‍ಬುಕ್‍ನಲ್ಲಿ ಪ್ರಥಮ ಸ್ಥಾನದಲ್ಲಿದ್ದೀರಿ ಎಂದು ಝುಕರ್‍ಬರ್ಗ್ ಹೇಳಿದರು. ಈಗ ಟ್ವಿಟರ್ ನಲ್ಲಿಯೂ ನಾನೇ ಪ್ರಥಮ ಸ್ಥಾನದಲ್ಲಿರುವೆ ಎಂದು ನಗುತ್ತಾ ಟ್ರಂಪ್ ಹೇಳಿದರು.