ಇಂದು ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನ
ಸನ್ಮಾರ್ಗ ವಾರ್ತೆ
ನವದೆಹಲಿ; ನವೆಂಬರ್ 7, ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನ. ಕ್ಯಾನ್ಸರ್ ಪ್ರತಿರೋಧದ ಕುರಿತು ಹಾಗೂ ರೋಗ ಪತ್ತೆಹಚ್ಚುವುದರ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಕ್ಯಾನ್ಸರ್ ಎಂಬುವುದು ವಿಶ್ವದಲ್ಲೇ ಮರಣಕ್ಕೆ ಕಾರಣವಾಗುವ ಎರಡನೇ ಮಾರಕ ಖಾಯಿಲೆಯಾಗಿದೆ.
ಭಾರತದಲ್ಲೂ ಕ್ಯಾನ್ಸರ್ ಮರಣ ಪ್ರಮಾಣ ಆತಂಕಕಾರಿ ಸ್ಥಿತಿಯಲ್ಲಿದೆ. ದೇಶದಲ್ಲಿ ಪ್ರತಿ ಎಂಟು ನಿಮಿಷಕ್ಕೆ ಗರ್ಭಾಶಯ ಕ್ಯಾನ್ಸರ್ ಕಾರಣದಿಂದ ಒಬ್ಬಳು ಸ್ತ್ರೀಯ ಮರಣವಾಗುತ್ತದೆ. 2018 ರಲ್ಲಿ ಮಾತ್ರ ದೇಶದಲ್ಲಿ 15 ದಶ ಲಕ್ಷ ಮಂದಿ ಕ್ಯಾನ್ಸರ್‌ನಿಂದ ಮರಣವನ್ನಪ್ಪಿದ್ದಾರೆ.
1975 ರಲ್ಲಿ ಭಾರತದಲ್ಲಿ ಕ್ಯಾನ್ಸರ್ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸುವ ಸಲುವಾಗಿ ರಾಷ್ಟ್ರೀಯ ಕ್ಯಾನ್ಸರ್ ನಿಯಂತ್ರಣ ಯೋಜನೆ ಆರಂಭಿಸಲಾಯಿತು. ಆ ಬಳಿಕ 1985-85ರಲ್ಲಿ ಕ್ಯಾನ್ಸರ್ ಪ್ರತಿರೋಧ ಮತ್ತು ರೋಗ ಪತ್ತೆ ಹಚ್ಚುವುದಕ್ಕೆ ಪ್ರಾಮುಖ್ಯತೆ ಕಲ್ಪಿಸಲು ಈ ಯೋಜನೆಯನ್ನು ನವೀಕರಿಸಲಾಯಿತು. 2014 ರಲ್ಲಿ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್‌ರವರು ನವಂಬರ್ 7 ನ್ನು ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನವನ್ನಾಗಿ ಘೋಷಿಸಿದರು. ಉಚಿತ ಪರಿಶೀಲನೆಗಾಗಿ ಮುನ್ಸಿಪಲ್ ಕ್ಲಿನಿಕ್‌ಗಳನ್ನೂ ಇದರ ಭಾಗವಾಗಿ ಸಜ್ಜುಗೊಳಿಸಲಾಯ್ತು.