ಆಗಸ್ಟ್ 23ಕ್ಕೆ ರಾಷ್ಟ್ರೀಯ ಬಾಹ್ಯಾಕಾಶ ದಿನ- ಮೋದಿ

0
219

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಆ. 26: ಚಂದ್ರಯಾನ 3 ದೌತ್ಯ ಚಂದ್ರನಲ್ಲಿಳಿದ ಆಗಸ್ಟ್ 23ನ್ನು ರಾಷ್ಟ್ರೀಯ ಬಾಹ್ಯಕಾಶ ದಿನವಾಗಿ ಆಚರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಇಸ್ರೊದ ವಿಜ್ಞಾನಿಗಳನ್ನು  ಉದ್ದೇಶಿಸಿ ಮಾತಾಡುತ್ತಿದ್ದಾಗ ಅವರು ರಾಷ್ಟ್ರೀಯ ಬಾಹ್ಯಕಾಶ ದಿನವನ್ನು ಘೋಷಿಸಿದರು. ಆಗಸ್ಟ್ 23ಕ್ಕೆ ಚಂದ್ರನ ದಕ್ಷಿಣ ದ್ರುವದಲ್ಲಿ ಚಂದ್ರಯಾನ ಮೂರು ಅತೀ ಸಂಕೀರ್ಣ ಸಾಫ್ಟ್ ಲ್ಯಾಂಡಿಂಗ್ ಆಗಿತ್ತು.

ಇದರೊಂದಿಗೆ ದಕ್ಷಿಣ ದ್ರುವದಲ್ಲಿ ಉಪಗ್ರಹ ಇಳಿಸಿದ ಮೊದಲ ದೇಶ ಎಂಬ ಖ್ಯಾತಿ ಭಾರತಕ್ಕೆ ಸಿಕ್ಕಿದೆ. ಈ ನಿರ್ಣಾಯಕ ಸಾಧನೆಯ ಸ್ಮರಣೆಗಾಗಿ ಆಗಸ್ಟ್ 23 ಅನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನ ಎಂದು ಆಚರಿಸಲು ಪ್ರಧಾನಿ ಮೋದಿ  ನಿರ್ಧರಿಸಿದರು.

ಇಂದು ಬೆಂಗಳೂರಿನ ಇಸ್ರೊ ಸಂಸ್ಥೆಯಲ್ಲಿ ಬಂದು ವಿಜ್ಞಾನಿಗಳನ್ನು ನೇರವಾಗಿ ಪ್ರಧಾನಿ ಮೋದಿ ಅಭಿನಂದಿಸಿದರು. ಚಂದ್ರಯಾನ ದೌತ್ಯದಲ್ಲಿ ಭಾಗಿಯಾದ ವಿಜ್ಞಾನಿಗಳನ್ನು ಅವರು ಅಭಿಸಂಬೋಧಿಸಿ ಮಾತಾಡಿದರು. ಇಸ್ರೊ ಅಧ್ಯ್ಷ ಎಸ್. ಸೋಮನಾಥರು ಚಂದ್ರಯಾನ 3ರ ದೌತ್ಯದ ಚಟುವಟಿಕೆಗಳನ್ನು ಪ್ರಧಾನಿಗೆ ವಿವರಿಸಿದರು. ಚಂದ್ರಯಾಣ -3 ಇಳಿದ ಸ್ಥಳವು ಮುಂದೆ ಶಿವಶಕ್ತಿ ಪೊಯಿಂಟ್ ಎಂದು ಕರೆಯಲ್ಪಡಲಿದೆ ಎಂದು ಮೋದಿ ಹೇಳಿದರು.