ಎನ್‌ಸಿಇಆರ್‌ಟಿ ಆರ್‌ಎಸ್‌ಎಸ್‌ ಅಂಗಸಂಸ್ಥೆಯಂತೆ ಕೆಲಸ ಮಾಡುತ್ತಿದೆ: ಕಾಂಗ್ರೆಸ್ ವಾಗ್ದಾಳಿ

0
149

ಸನ್ಮಾರ್ಗ ವಾರ್ತೆ

ಪಠ್ಯಪುಸ್ತಕಗಳ ವಿವಾದದ ಹಿನ್ನೆಲೆಯಲ್ಲಿ ಎನ್‌ಸಿಇಆರ್‌ಟಿ ಆರ್‌ಎಸ್‌ಎಸ್‌ನ ಅಂಗಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಕಾಂಗ್ರೆಸ್‌ ವಾಗ್ದಾಳಿ ನಡೆಸಿದೆ.

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್, 2024ರ ನೀಟ್‌ನಲ್ಲಿ ಕೃಪಾಂಕ ಅಂಕಗಳನ್ನು ನೀಡಿದ್ದಕ್ಕೆ ಎನ್‌ಸಿಇಆರ್‌ಟಿಯನ್ನು ರಾಷ್ಟ್ರೀಯ ಪರೀಕ್ಷ ಮಂಡಳಿ ದೂಷಿಸಿದೆ. ಎನ್‌ಟಿಎ ತಾನು ಮಾಡಿದ ತಪ್ಪಿನಿಂದ ಹೊರಗುಳಿಯಲು ಗಮನವನ್ನು ಬೇರೆಕಡೆ ಸೆಳೆದಿದೆ ಎಂದು ಜೈರಾಮ್‌ ರಮೇಶ್ ತಿಳಿಸಿದ್ದಾರೆ.

ಆದಾಗ್ಯೂ ಎನ್‌ಸಿಇಆರ್‌ಟಿ ವೃತ್ತಿಪರ ಸಂಸ್ಥೆಯಾಗಿ ಉಳಿದುಕೊಂಡಿಲ್ಲದಿರುವುದು ನಿಜವಾಗಿದೆ. 2014ರಿಂದ ಆರ್‌ಎಸ್‌ಎಸ್‌ ಅಂಗಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ. 12ನೇ ತರಗತಿಯ ರಾಜಕೀಯ ವಿಜ್ಞಾನ ಪರಿಷ್ಕೃತ ಪಠ್ಯಪುಸ್ತಕದಲ್ಲಿ ಜಾತ್ಯತೀತತೆಯನ್ನು ಟೀಕಿಸಿ ರಾಜಕೀಯ ಪಕ್ಷಗಳ ನೀತಿಗಳನ್ನು ಪರಿಗಣಿಸಿರುವುದು ಬಹಿರಂಗಗೊಂಡಿದೆ. ಎನ್‌ಸಿಇಆರ್‌ಟಿಯ ಉದ್ದೇಶ ಪಠ್ಯಪುಸ್ತಕ, ರಾಜಕೀಯ ಭಿತ್ತಿಪತ್ರ ಹಾಗೂ ಪ್ರಚಾರಗಳನ್ನು ಹರಡುವುದಲ್ಲ ಎಂದು ಜೈರಾಮ್‌ ರಮೇಶ್ ಹೇಳಿದ್ದಾರೆ.

ಎನ್‌ಸಿಇಆರ್‌ಟಿ ಭಾರತ ಗಣರಾಜ್ಯದ ಆಧಾರಸ್ತಂಭವಾಗಿರುವ ಸಂವಿಧಾನದಲ್ಲಿರುವ ಪೀಠಿಕೆಯಲ್ಲಿನ ಜಾತ್ಯತೀತತೆಯ ಮೇಲೆ ದಾಳಿ ಮಾಡುತ್ತಿದೆ. ಜಾತ್ಯಾತೀತತೆಯು ಸಂವಿಧಾನದ ಮೂಲ ರಚನೆಯ ಪ್ರಮುಖ ಭಾಗವಾಗಿದೆ ಎಂದು ಹಲವು ಸುಪ್ರೀಂ ಕೋರ್ಟ್ ತೀರ್ಪುಗಳು ಸ್ಪಷ್ಟವಾಗಿ ಹೇಳಿವೆ ಎಂದು ಜೈರಾಮ್‌ ರಮೇಶ್ ತಿಳಿಸಿದ್ದಾರೆ.

ಎನ್‌ಸಿಇಆರ್‌ಟಿ ತಾನು ನಾಗ್ಪುರ ಅಥವಾ ನರೇಂದ್ರ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಈಗಿನ ಎಲ್ಲ ಪಠ್ಯಪುಸ್ತಕಗಳು ವಿಶ್ವಾಸವಲ್ಲದ ಗುಣಮಟ್ಟವನ್ನು ಹೊಂದಿದ್ದು, ನನ್ನನ್ನು ಶಾಲೆಯಲ್ಲಿ ರೂಪಿಸಿರುವುದಕ್ಕಿಂತ ತುಂಬ ವಿಭಿನ್ನವಾಗಿದೆ ಎಂದು ಜೈರಾಮ್‌ ರಮೇಶ್ ಬೇಸರ ವ್ಯಕ್ತಪಡಿಸಿದ್ದಾರೆ.

ಇತ್ತೀಚಿಗಷ್ಟೆ ಸುದ್ದಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದ ಎನ್‌ಸಿಇಆರ್‌ಟಿ ನಿರ್ದೇಶಕ ದಿನೇಶ್ ಪ್ರಸಾದ್‌ ಸಕ್ಲಾನಿ, ಗುಜರಾತ್‌ ಗಲಭೆಗಳು ಹಾಗೂ ಬಾಬ್ರಿ ಮಸೀದಿ ಧ್ವಂಸದ ವಿಷಯಗಳನ್ನು ಶಾಲಾ ಪಠ್ಯಪುಸ್ತಕಗಳಲ್ಲಿ ಮಾರ್ಪಡಿಸಲಾಗಿದೆ ಎಂದು ತಿಳಿಸಿದ್ದರು.

ಪಠ್ಯಗಳಲ್ಲಿ ಇಂತಹ ವಿಷಯಗಳಿಂದ ಗಲಭೆಗಳು ಹಾಗೂ ಖಿನ್ನತೆಗೊಳಗಾಗ ನಾಗರಿಕರನ್ನು ಸೃಷ್ಟಿಸಬಹುದು. ಆದ ಕಾರಣದಿಂದ ಗಲಭೆ ಹಾಗೂ ನೋವುಗಳು ಪಠ್ಯಗಳ ಭಾಗವಾಗಬಾರದು. ನಾವು ಏಕೆ ಶಾಲಾ ಪಠ್ಯ ಪುಸ್ತಕಗಳಲ್ಲಿ ಗಲಭೆಗಳನ್ನು ಬೋಧಿಸಬೇಕು? ನಾವು ಸಕಾರಾತ್ಮಕ ನಾಗರಿಕರನ್ನು ಸೃಷ್ಟಿಸಬೇಕೆ ವಿನಾ ಹಿಂಸಾತ್ಮಕ ಅಥವಾ ಖಿನ್ನತೆಗೊಳಗಾದ ನಾಗರಿಕರನ್ನು ಸೃಷ್ಟಿಸುವುದಿಲ್ಲ ಎಂದು ಹೇಳಿದ್ದರು.

ಪ್ರಸ್ತುತ 12ನೇ ತರಗತಿಯ ರಾಜಕೀಯ ವಿಜ್ಞಾನ ಪಠ್ಯಪುಸ್ತಕದಲ್ಲಿ ಪರಿಷ್ಕೃತಗೊಳಿಸಲಾಗಿದ್ದು, ಬಾಬ್ರಿ ಮಸೀದಿ ಧ್ವಂಸವನ್ನು ಉಲ್ಲೇಖಿಸಲಾಗಿಲ್ಲ. ಆದರೆ ಮೂರು ಗೊಮ್ಮಟ ರಚನೆಯ ಬಗ್ಗೆ ತಿಳಿಸಲಾಗಿದೆ. ಅಯೋಧ್ಯೆ ವಿಭಾಗವನ್ನು 4ರಿಂದ 2 ಪುಟಗಳಿಗೆ ಕತ್ತರಿ ಹಾಕಲಾಗಿದೆ ಹಾಗೂ ಹಿಂದಿನ ಆವೃತ್ತಿಗಳ ವಿವರಗಳನ್ನು ಬಿಡಲಾಗಿದೆ.

ಪರಿಷ್ಕೃತ ಕತ್ತರಿ ಹಾಕಿರುವ ವಿಷಯಗಳಲ್ಲಿ ಗುಜರಾತ್‌ನಿಂದ ಸೋಮನಾಥ್‌ವರೆಗೆ ಬಿಜೆಪಿಯ ರಥಯಾತ್ರೆ,ಕರಸೇವಕರ ಪಾತ್ರ, ಬಾಬ್ರಿ ಮಸೀದಿ ಧ್ವಂಸದ ನಂತರ ಉಂಟಾದ ಗಲಭೆ, ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ರಾಷ್ಟ್ರಪತಿ ಆಳ್ವಿಕೆ ಹಾಗೂ ಅಯೋಧ್ಯೆಯ ಘಟನೆಗಳ ಬಗ್ಗೆ ಬಿಜೆಪಿ ವಿಷಾದದ ವಿಷಯಗಳು ಸೇರಿವೆ. ಮೊಘಲರ ಸಾಧನೆಗಳನ್ನು ಅಳಿಸಲಾಗಿದೆ. ಸೇರಿಸಲಾದ ಹೊಸ ಭಾಗಗಳಲ್ಲಿ ನೂತನ ಸಂಸತ್ತಿನ ನಿರ್ಮಾಣ ವಿಷಯವಿದೆ.