ಎನ್‌ಸಿಪಿ ಸಚಿವ ನವಾಬ್ ಮಲಿಕ್ ವಿರುದ್ಧ 1000 ಕೋಟಿ ರೂ. ಮಾನನಷ್ಟ ಮೊಕದ್ದಮೆ

0
227

ಸನ್ಮಾರ್ಗ ವಾರ್ತೆ

ಮುಂಬೈ: ಮಹಾರಾಷ್ಟ್ರ ಸಚಿವ ಎನ್‍ಸಿಪಿ ನಾಯಕ ನವಾಬ್ ಮಲಿಕ್ ಮತ್ತು ಏಳು ಮಂದಿ ವಿರುದ್ಧ ಮುಂಬೈ ಜಿಲ್ಲಾ ಸಹಕಾರಿ ಬ್ಯಾಂಕ್ ಸಲ್ಲಿಸಿದ 1000 ಕೋಟಿ ರೂಪಾಯಿ ಮಾನನಷ್ಟ ದೂರಿನಲ್ಲಿ ಉತ್ತರಿಸಲು ಆರು ವಾರಗಳ ಸಮಯವನ್ನು ಮುಂಬೈ ಹೈಕೋರ್ಟು ನೀಡಿದೆ. ಜುಲೈ 1 ಮತ್ತು ನಾಲ್ಕನೇ ತಾರೀಕಿನ ನಡುವೆ ನಿರಾಧಾರ ಮಾನಹಾನಿಕರ ಪೋಸ್ಟರ್‌ಗಳನ್ನು ಜನನಿಬಿಡ ಜಾಗಗಳಲ್ಲಿ ಸ್ಥಾಪಿಸಲಾಗಿದೆ. ಇವುಗಳನ್ನು ಮುಂಬೈ ನಿವಾಸಿಗಳು ನೋಡಿದ್ದಾರೆ. ಮಲಿಕ್ ಮತ್ತು ತಂಡ ಇದರ ಹಿಂದಿದೆ ಎಂದು ಬ್ಯಾಂಕು ಅರ್ಜಿಯಲ್ಲಿ ತಿಳಿಸಿದೆ.

ಸಾವಿರಾರು ಮಂದಿ ಪೋಸ್ಟರ್‌ಗಳನ್ನು ನೋಡಿದ್ದಾರೆ. ಇದರಿಂದ ಬ್ಯಾಂಕಿನ ವರ್ಚಸ್ಸಿಗೆ ಹಾನಿಯಾಗಿದೆ. 1000ಕೋಟಿ ರೂಪಾಯಿ ನಷ್ಟ ಪರಿಹಾರ ನೀಡಬೇಕೆಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಮಲಿಕ್ ಮತ್ತು ಸಂಗಡಿಗರಿಗೆ ಬ್ಯಾಂಕ್ ನೋಟಿಸು ಕಳುಹಿಸಲಾಗಿದೆ ಆದರೆ ಮಲಿಕ್‍ರ ಕಡೆಯಿಂದ ಪ್ರತಿಕ್ರಿಯೆ ಲಭಿಸಿಲ್ಲ ಎಂದು ಬ್ಯಾಂಕ್ ಕೋರ್ಟಿಗೆ ತಿಳಿಸಿತು. ಇದೇ ವೇಳೆ ಪೋಸ್ಟರ್ ಸ್ಥಾಪಿಸಿದ ಘಟನೆಯಲ್ಲಿ ತನಗೆ ಸಂಬಂಧ ಇಲ್ಲ ಎಂದ ಮಲಿಕ್ ತಿಳಿಸಿದ್ದಾರೆ.