2 ವರ್ಷದ ಹೆಣ್ಣು ಮಗುವನ್ನು ಜೀವಂತ ಹೂಳಿದ ಮಹಿಳೆ ಬಂಧನ

0
88

ಸನ್ಮಾರ್ಗ ವಾರ್ತೆ

ಪಂಜಾಬ್: ನೆರೆಮನೆಯ ಎರಡು ವರ್ಷದ ಹೆಣ್ಣು ಮಗುವನ್ನು ಜೀವಂತ ಹೂತ ಪ್ರಕರಣದಲ್ಲಿ ಮಹಿಳೆಯನ್ನು ಬಂಧಿಸಲಾಗಿದೆ. ಪಂಜಾಬಿನ ಶಿಮ್ಲಾಪುರಿಯಲ್ಲಿ ಈ ಘಟನೆ ನಡೆದಿದೆ. ವೈಯಕ್ತಿಕ ದ್ವೇಷ ಮಗುವಿನ ಕೊಲೆಗೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳೆಯು ಮಗುವಿನೊಂದಿಗೆ ಹೋಗುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿತ್ತು. ನಂತರ ಮಹಿಳೆಯನ್ನು ಪೊಲೀಸರು ವಿಚಾರಣೆ ನಡೆಸಿದರು. ಈ ವೇಳೆ ಘಟನೆ ಬಹಿರಂಗವಾಗಿದೆ. ಮಹಿಳೆಯನ್ನು ನೀಲಂ ಎಂಬುದಾಗಿ ಗುರುತಿಸಲಾಗಿದೆ. ಪೊಲೀಸರು ತಿಳಿಸಿದ ಪ್ರಕಾರ ನೀಲಂ ಮಗುವನ್ನು ಗುಂಡಿಯಲ್ಲಿ ಹೂತು ಹಾಕಿದ್ದಳು. ಮಗುವನ್ನು ಗುಂಡಿಯಿಂದ ಹೊರತಂದು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಮಗು ಬದುಕುಳಿಯಲಿಲ್ಲ.