ಕಾಶ್ಮೀರದ ವಿಷಯದಲ್ಲಿ ನೆಹರೂರಿಂದ ಹಿಮಾಲಯಕ್ಕಿಂತಲೂ ದೊಡ್ಡ ತಪ್ಪಾಗಿತ್ತು- ಮತ್ತೆ ನೆಹರೂ ಮೇಲೆ ವಾಗ್ದಾಳಿ ನಡೆಸಿದ ಅಮಿತ್ ಶಾ

0
457

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಸೆ.30: ಕಾಶ್ಮೀರ ವಿಷಯದಲ್ಲಿ ಜವಾಹರಲಾಲ್ ನೆಹರೂರನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತೊಮ್ಮೆ ಟೀಕಿಸಿದ್ದಾರೆ. ಕಾಶ್ಮೀರ ವಿಷಯವನ್ನು ವಿಶ್ವಸಂಸ್ಥೆಗೆ ತಂದದ್ದು ನೆಹರು. ಹಿಮಾಲಯಕ್ಕಿಂತ ದೊಡ್ಡ ತಪ್ಪಿದು. ಅವರೊಬ್ಬರ ತೆಗೆದುಕೊಂಡ ತೀರ್ಮಾನ ಇದು ಆಗಿತ್ತು ಎಂದು ಅಮಿತ್ ಶಾ ಹೇಳಿದರು.

630 ನಾಡು ರಾಜ್ಯಗಳನ್ನು ಒಗ್ಗೂಡಿಸುವ ಹೊಣೆ ಸರದಾರ್ ಪಟೇಲರದ್ದಾಗಿತ್ತು. ಆದರೆ ನೆಹರೂಗೆ ಜಮ್ಮು-ಕಾಶ್ಮೀರವನ್ನು ಭಾರತಕ್ಕೆ ಸೇರಿಸುವ ಏಕೈಕ ಹೊಣೆ ಮಾತ್ರ ಇತ್ತು. ಈ ಹೊಣೆಯು 2019 ಆಗಸ್ಟ್‌ಗೆ ನಿಜವಾಯಿತು ಎಂದು ಅಮಿತ್ ಶಾ ಹೇಳಿದರು.

ಇಷ್ಟು ಸಮಯ ಕಾಂಗ್ರೆಸ್ ಸರಕಾರ ಇತಿಹಾಸವನ್ನು ತಿರುಚಿತು. 1947ರಿಂದ ಕಾಶ್ಮೀರ ವಿವಾದ ವಿಷಯವಾಗಿತ್ತು. ಆದರೆ ಪ್ರತಿಯೊಂದು ಅಸಂಬದ್ಧವನ್ನು ಪುನರಾವರ್ತಿಸುವವರು ಇತಿಹಾಸ ಬರೆಯಲು ಆರಂಭಿಸಿದ್ದರಿಂದ ನಿಜಸ್ಥಿತಿ ಮರೆಯಲ್ಲಿರಿಸಲಾಯಿತು. ಕಾಶ್ಮೀರದ ಯಥಾರ್ಥತೆಯನ್ನು ಜನರು ಅರಿಯಬೇಕಾದ ಕಾಲವಿದು ಎಂದರು.
ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಯಾವ ದೇಶವೂ ಪಾಕಿಸ್ತಾನವನ್ನು ಬೆಂಬಲಿಸಿಲ್ಲ. ಎಲ್ಲರೂ ಭಾರತವನ್ನು ಬೆಂಬಲಿಸಿದರು. ಇದು ನರೇಂದ್ರ ಮೋದಿಯ ರಾಜತಾಂತ್ರಿಕ ವಿಜಯವಾಗಿದೆ.

ಕಾಶ್ಮಿರದಲ್ಲಿ ಸಾಮಾನ್ಯ ಪರಿಸ್ಥಿತಿ ಮರಳುತ್ತಿದೆ. ಅಲ್ಲಿ ಯಾವುದಕ್ಕೂ ನಿರ್ಬಂಧ ಹೇರಲಾಗಿಲ್ಲ. 196 ಪೊಲೀಸ್ ಠಾಣೆಗಳಲ್ಲಿ ಎಂಟು ಕಡೆ ಮಾತ್ರ ನಿಷೇಧಾಜ್ಞೆ ಇದೆ. ಟೆಲಿಫೋನ್ ಸಂಪರ್ಕ ಮರುಸ್ಥಾಪನೆಯಾಗುವುದನ್ನು ಮಾನವಹಕ್ಕು ಉಲ್ಲಂಘನೆಯೆಂದು ಭಾವಿಸುವುದಿಲ್ಲ. ಕಳೆದ ಕಾಲದಲ್ಲಿ ಕಾಶ್ಮೀರದಲ್ಲಿ 41,000 ಮಂದಿ ಜೀವ ಕಳೆದುಕೊಂಡಿದ್ದಾರೆ. ಇದು ನಿಜವಾದ ಮಾನವಹಕ್ಕು ಉಲ್ಲಂಘನೆಯಾಗಿದೆ ಎಂದು ಅಮಿತ್ ಶಾ ಹೇಳಿದರು.