ಗಾಝಕ್ಕೆ ಹೊರಟ ನೆರವಿನ ಹಡಗು: ನೆಲ್ಸನ್ ಮಂಡೇಲಾ ಮೊಮ್ಮಗ ಭಾಗಿ

0
427

ಸನ್ಮಾರ್ಗ ವಾರ್ತೆ

ಹತ್ತಕ್ಕಿಂತಲೂ ಅಧಿಕ ಬೋಟುಗಳು ಮತ್ತು ಆಹಾರ ವಸ್ತುಗಳು ಸೇರಿದಂತೆ 44 ರಾಷ್ಟ್ರಗಳ ನೂರಕ್ಕಿಂತಲೂ ಅಧಿಕ ಮಂದಿ ಹಡಗಿನಲ್ಲಿ ಗಾಝಾಕ್ಕೆ ಹೊರಟಿದ್ದು ಇದರಲ್ಲಿ ದಕ್ಷಿಣ ಆಫ್ರಿಕಾದ ಮುಖಂಡ ನೆಲ್ಸನ್ ಮಂಡೇಲಾ ಅವರ ಮೊಮ್ಮಗ ಮಂಡಲ ಮಂಡೇಲಾ ಅವರು ಸೇರಿಕೊಂಡಿದ್ದಾರೆ. ಇವರು ದಕ್ಷಿಣ ಆಫ್ರಿಕಾದ ಸಂಸದರಾಗಿದ್ದಾರೆ ಈ ಹಡಗಿನಲ್ಲಿ ಪರಿಸರ ಹೋರಾಟಗಾರ್ತಿ ಗ್ರೇಟಾ ತನ್ ಬರ್ಗ್ ಕೂಡ ಇದ್ದಾರೆ.

ಈ ಹಡಗಿನಲ್ಲಿ 10 ಮಂದಿ ದಕ್ಷಿಣ ಆಫ್ರಿಕಾದ ಆಕ್ಟಿವೆಸ್ಟ್ ಗಳಿದ್ದಾರೆ. ಈ ಹಡಗು ಸ್ಪೈನ್‌ನ ಬಾರ್ಸೆಲೋನಾದಿಂದ ಆಗಸ್ಟ್ 31ರಂದು ಹೊರಟಿದೆ. ಆಹಾರದ ಕೊರತೆಯಿಂದ ಮತ್ತು ಮಾನವೀಯತೆಯ ಅಪ್ಪುಗೆಯಿಂದ ನಲುಗುತ್ತಿರುವ ಗಾಝಾಕ್ಕೆ ಈ ಎಲ್ಲವನ್ನು ತಲುಪಿಸುವುದು ಈ ಪ್ರಯಾಣದ ಉದ್ದೇಶವಾಗಿದೆ.

ಗಾಝಕ್ಕೆ ಇಸ್ರೇಲ್ ವಿಧಿಸಿರುವ ಬಹಿಷ್ಕಾರವನ್ನು ಭೇದಿಸಿ ಗಾಝಾಕ್ಕೆ ಆಹಾರ ನೀರು ಔಷಧಿ ಸಹಿತ ಅಗತ್ಯ ವಸ್ತುಗಳನ್ನು ತಲುಪಿಸುವುದು ಈ ಹಡಗಿನ ಪ್ರಯಾಣದ ಉದ್ದೇಶ ಎಂದು ತಿಳಿಸಲಾಗಿದೆ.

ಈ ಮೊದಲು ಇಂಥದ್ದೇ ಪ್ರಯತ್ನ ನಡೆಸಲಾಗಿತ್ತು. ಆದರೆ ಗಾಝಕ್ಕೆ ತೆರಳಲು ಇಸ್ರೇಲ್ ಅನುಮತಿಸಿರಲಿಲ್ಲ. ಅದಕ್ಕಿಂತ ಮೊದಲೇ ಅವರನ್ನು ಬಂಧಿಸಿ ಮರಳಿ ಅವರವರ ದೇಶಕ್ಕೆ ಕಳುಹಿಸಿಕೊಡಲಾಗಿತ್ತು.