ವರದಕ್ಷಿಣೆ ಕಿರುಕುಳ: ಎರಡಂತಸ್ತಿನ ಮನೆಯಿಂದ ಕೆಳಗೆ ಹಾರಿದ ಅರ್ಚನಾ, ವಿಡಿಯೋ ವೈರಲ್

0
527

ಸನ್ಮಾರ್ಗ ವಾರ್ತೆ

ಉತ್ತರ ಪ್ರದೇಶದ ಅಲಿಗಡ್‌ನಲ್ಲಿ ಮಹಿಳೆಯೋರ್ವಳು ಎರಡು ಅಂತಸ್ತಿನಿಂದ ಜಿಗಿದು ಆಸ್ಪತ್ರೆ ಸೇರಿದ ಘಟನೆ ನಡೆದಿದೆ. ತನ್ನ ಮನೆಯ ಟೆರೇಸ್ ನಿಂದ ಕೆಳಗಡೆಗೆ ಹಾರುವುದಾಗಿ ಮಹಿಳೆ ನಿಂತಿದ್ದು ಹಾರಲು ಪತಿ ಪ್ರಚೋದನೆ ನೀಡಿರುವುದು ವಿಡಿಯೋದಲ್ಲಿ ಕಾಣಿಸಿದೆ. ವರದಕ್ಷಿಣೆಯ ಹಿಂಸೆಗೆ ಬೇಸತ್ತು ಆಕೆ ಹೀಗೆ ಮಾಡಿದ್ದಾಳೆ ಎಂದು ಗೊತ್ತಾಗಿದೆ.

ಆರು ವರ್ಷಗಳ ಹಿಂದೆ ಈ ಅರ್ಚನಾ ಎಂಬ ಮಹಿಳೆ ಸೋನು ಎಂಬವನನ್ನು ವಿವಾಹವಾಗಿದ್ದಳು. ಇವರಿಗೆ ನಾಲ್ಕು ಮತ್ತು ಎರಡು ವರ್ಷಗಳ ಇಬ್ಬರು ಮಕ್ಕಳಿದ್ದಾರೆ. ಮದುವೆಯ ಬಳಿಕ ಸುಮಾರು 10 ಲಕ್ಷ ರೂಪಾಯಿಯನ್ನು ಸೋನುವಿನ ಕುಟುಂಬಕ್ಕೆ ಅರ್ಚನಾ ಕುಟುಂಬ ವರದಕ್ಷಿಣೆಯಾಗಿ ನೀಡಿತ್ತು. ಆದರೆ ಪತಿ ಸೋನುವಿನ ಮನೆಯವರು ತೃಪ್ತರಾಗಿಲ್ಲ. ಇನ್ನೂ ಐದು ಲಕ್ಷ ರೂಪಾಯಿ ನೀಡಬೇಕೆಂದು ಅರ್ಚನಳ ಮೇಲೆ ಅವರು ಒತ್ತಡ ಹೇರಿದ್ದಾರೆ. ಅಲ್ಲದೆ ಒಂದು ರಾಯಲ್ ಎನ್ಫೀಲ್ಡ್ ಬೈಕ್ ಕೂಡ ನೀಡಬೇಕೆಂದು ಧಮಕಿ ಹಾಕಿದ್ದಾರೆ. ವರದಕ್ಷಿಣೆಯ ಹೆಸರಲ್ಲಿ ಅರ್ಚನಾ ಮಾನಸಿಕವಾಗಿ ಮತ್ತು ದೈಹಿಕವಾಗಿ ಪೀಡನೆಗೆ ಒಳಗಾಗಿದ್ದಾಳೆ ಎಂದು ಆಕೆಯ ಕುಟುಂಬ ಕೂಡ ಹೇಳಿದೆ.

ಅಲ್ಲದೆ ಪತಿ ಸೋನುವಿನ ಸಹೋದರ ಅರ್ಚನಳಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಅರ್ಚನಾ ಸಹೋದರ ಪೊಲೀಸರಿಗೆ ದೂರು ನೀಡಿದ್ದಾನೆ. ಈ ಬಗ್ಗೆ ಸೋನುವಿನಲ್ಲಿ ಆಕೆ ದೂರಿಕೊಂಡಿದ್ದಳು. ಹಾಗೆಯೇ ಅತ್ತೆಯಲ್ಲೂ ದೂರು ನೀಡಿದ್ದಳು. ಆದರೆ ಈ ವಿಷಯವನ್ನು ನೀನು ಹೊರಗಡೆ ತಿಳಿಸಬೇಡ ಎಂದು ಅವರು ಬಾಯಿ ಮುಚ್ಚಿಸಿದ್ದಾರೆ ಎಂದು ಸಹೋದರ ಹೇಳಿದ್ದಾನೆ.