ನೆತನ್ಯಾಹು ಪತ್ನಿ ಸಾರ ಮತ್ತು ಮಾಜಿ ಪ್ರಧಾನಿ ಬೆನೆಟ್ ನಡುವೆ ತೀವ್ರ ವಾಗ್ವಾದ

0
12

ಸನ್ಮಾರ್ಗ ವಾರ್ತೆ

ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರ ಪತ್ನಿ ಸಾರ ಮತ್ತು ಮಾಜಿ ಪ್ರಧಾನಿ ನಫ್ತಾಲಿ ಬೆನೆಟ್ ಅವರು ಸಂಸತ್ತಿನಲ್ಲಿ ತೀವ್ರ ವಾಗ್ವಾದಕ್ಕೆ ಇಳಿದಿರುವ ವಿಡಿಯೋ ಬಹಿರಂಗಕ್ಕೆ ಬಂದಿದೆ. ನೆತನ್ಯಾಹು ರಾಷ್ಟ್ರೀಯ ಏಕತೆಗೆ ಕರೆ ನೀಡುತ್ತಾ ಸಂಸತ್ತಿನಲ್ಲಿ ಭಾಷಣ ಮಾಡ್ತಾ ಇದ್ರು. ಆಗ ಪ್ರೇಕ್ಷಕರ ಸಾಲಿನಲ್ಲಿ ಸಾರಾ ಮತ್ತು ಬೆನೆಟ್ ಇದ್ದರು.

ನೆತನ್ಯಾಹು ಅವರ ಸಲಹೆಗಾರರು ಕತಾರ್ ಜೊತೆ ಸಂಬಂಧ ಹೊಂದಿದ್ದಾರೆ ಎಂಬ ಆರೋಪಗಳು ಮತ್ತು ಅಕ್ಟೋಬರ್ ಏಳರ ದಾಳಿಯ ತನಿಖೆಗೆ ಸಂಬಂಧಿಸಿದಂತೆ ಉತ್ತರಗಳನ್ನು ಕೋರುತ್ತಾ ಅವರ ಭಾಷಣಕ್ಕೆ ಬೆನೆಟ್ ಅಡ್ಡಿಪಡಿಸಿದರು. ನಂತರ ಸಾರಾ ಮತ್ತು ಬೆನೆಟ್ ನಡುವೆ ತೀವ್ರ ವಾಗ್ವಾದ ನಡೆಯಿತು. ಇವರಿಬ್ಬರ ನಡುವೆ ವಾಗ್ವಾದ ಜೋರಾಗುತ್ತಿರುವಂತೆಯೇ ಭಾಷಣ ಮಾಡುತ್ತಿದ್ದ ನೆತನ್ಯಾಹು ಅವರ ಗಮನವೂ ಇವರ ಕಡೆಗೆ ತಿರುಗಿತು.

ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬೆನೆಟ್ ಮತ್ತು ನೆತನ್ಯಾಹು ನಡುವಿನ ವಾಗ್ವಾದಕ್ಕೆ ಸಾರಾ ಮಧ್ಯಪ್ರವೇಶಿಸಿದರು. ಸಾರ ತನ್ನ ಆಸನದಿಂದಲೇ ಜೋರಾಗಿ ಪ್ರತಿಕ್ರಿಯಿಸಿದರು. ಇದು ಇಬ್ಬರು ನಡುವಿನ ವಾಗ್ವಾದವನ್ನು ಹೆಚ್ಚಿಸಿತು.