ಸೌದಿ: ವಿಮಾನ ಹಾರಾಟ ಮುಂದೂಡಿದ ಇಂಡಿಗೋ

0
9

ಸನ್ಮಾರ್ಗ ವಾರ್ತೆ

ಸೌದಿ ಅರೇಬಿಯಾಕ್ಕೆ ತನ್ನ ವಿಮಾನ ಹಾರಾಟವನ್ನು ಇಂಡಿಗೋ ಏರ್ಲೈನ್ಸ್ ಮತ್ತೊಮ್ಮೆ ವಿಸ್ತರಿಸಿದೆ. ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಯನ್ನು ಖಾತರಿ ಪಡಿಸುವ ಭಾಗವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಇಂಡಿಗೋ ತಿಳಿಸಿದೆ.

ಜಿದ್ದ ಮತ್ತು ಮದೀನಕ್ಕೆ ವಿಮಾನಗಳ ಹಾರಾಟವನ್ನು ನವೆಂಬರ್ 21ರವರೆಗೆ ವಿಸ್ತರಿಸಲಾಗಿದೆ. ರಿಯಾದ್ ಮತ್ತು ಧಮ್ಮಾಮ್ ಗೆ ವಿಮಾನಗಳ ಹಾರಾಟವನ್ನು ನವೆಂಬರ್ 30ಕ್ಕೆ ಮುಂದೂಡಲಾಗಿದೆ.

ವಿಮಾನಗಳ ರದ್ದತಿಯಿಂದ ತೊಂದರೆಗೊಳಗಾದ ಪ್ರಯಾಣಿಕರಿಗೆ ಮರುಪಾವತಿ ಮರು ಹೊಂದಾಣಿಕೆ ಮತ್ತು ಇತರ ಪ್ರಯಾಣ ವ್ಯವಸ್ಥೆಗಳನ್ನು ಒದಗಿಸುವ ಭರವಸೆಯನ್ನು ವಿಮಾನ ಸಂಸ್ಥೆ ನೀಡಿದೆ. ಬುಕಿಂಗ್ ಸಮಯದಲ್ಲಿ ಒದಗಿಸಲಾದ ಸಂಪರ್ಕ ಸಂಖ್ಯೆಗಳ ಮೂಲಕ ತೊಂದರೆಗೊಳಗಾದ ಗ್ರಾಹಕರಿಗೆ ಸಂದೇಶಗಳನ್ನು ಕಳುಹಿಸಲಾಗುತ್ತಿದೆ ಎಂದು ವಿಮಾನ ಸಂಸ್ಥೆ ತಿಳಿಸಿದೆ.