ಸನ್ಮಾರ್ಗ ವಾರ್ತೆ
ಝಿಯೋನಿಷ್ಟ್ ಎಂಬ ಪದವನ್ನು ವಿದ್ಯಾರ್ಥಿಗಳು ಉಪಯೋಗಿಸಬಾರದು ಎಂದು ನ್ಯೂಯಾರ್ಕ್ ಯುನಿವರ್ಸಿಟಿ ಹೊಸ ಸೂಚನೆಯನ್ನು ನೀಡಿದೆ.
ಈ ಮೊದಲು ನ್ಯೂಯಾರ್ಕ್ ಯೂನಿವರ್ಸಿಟಿ ಮತ್ತು ಕೊಲಂಬಿಯಾ ಯೂನಿವರ್ಸಿಟಿಗಳಲ್ಲಿ ಇಸ್ರೇಲ್ ವಿರೋಧಿ ವಿದ್ಯಾರ್ಥಿ ಪ್ರತಿಭಟನೆ ನಡೆದಿತ್ತು. ಪ್ರತಿಭಟಿಸಿದ ವಿದ್ಯಾರ್ಥಿಗಳ ವಿರುದ್ಧ ದೌರ್ಜನ್ಯವೂ ನಡೆದಿತ್ತು. ಇದೀಗ ಹಲವು ನಿರ್ಬಂಧಗಳನ್ನು ವಿಧಿಸಿ ಯೂನಿವರ್ಸಿಟಿಗಳು ಆದೇಶ ಹೊರಡಿಸಿವೆ.
ನ್ಯೂಯಾರ್ಕ್ ನ ಎನ್ ವೈ ಯು ಫೆಲೆಸ್ತೀನ್ ಸಾಲಿಡರಿಟಿ ಕಮಿಟಿ ಮತ್ತು ಕೊಲಂಬಿಯಾ ಸ್ಟೂಡೆಂಟ್ ಫಾರ್ ಜಸ್ಟಿಸ್ ಇನ್ ಫೆಲೆಸ್ತೀನ್ ಎಂಬ ಎರಡು ಸಂಘಟನೆಗಳಿಗೆ ಇನ್ಸ್ಟಾಗ್ರಾಮ್ ಫೇಸ್ಬುಕ್ ನಲ್ಲಿ ಮೆಟ ಈಗಾಗಲೇ ನಿಷೇಧವನ್ನು ಹೇರಿದೆ.
ರಜಾವಧಿ ಕಳೆದು ಹೊಸ ಸೆಮಿಸ್ಟರ್ ಅವಧಿ ಪ್ರಾರಂಭವಾಗುವ ಹೊತ್ತಿನಲ್ಲಿಯೇ ಈ ಎರಡು ಯುನಿವರ್ಸಿಟಿಗಳು ಈ ನಿಯಂತ್ರಣವನ್ನು ಜಾರಿಗೆ ತಂದಿವೆ. ಈ ವರ್ಷದ ಆರಂಭದಲ್ಲಿ ಎರಡೂ ಯೂನಿವರ್ಸಿಟಿಗಳಲ್ಲಿ ಫೆಲೆಸ್ತೀನ್ ಪರ ಮತ್ತು ಇಸ್ರೇಲ್ ವಿರುದ್ಧ ಭಾರಿ ಪ್ರತಿಭಟನೆ ವ್ಯಕ್ತವಾಗಿತ್ತು. ವಿದ್ಯಾರ್ಥಿಗಳ ಮೇಲೆ ಪೊಲೀಸ್ ದೌರ್ಜನ್ಯ ಕೂಡ ನಡೆದಿತ್ತು. ಈ ಯೂನಿವರ್ಸಿಟಿಗಳ ಯಹೂದಿ ಸಂಘಟನೆಗಳು
ಕ್ಯಾಂಪಸ್ ಅನ್ನು ಸುರಕ್ಷಿತಗೊಳಿಸಿ ಎಂಬ ಅಭಿಯಾನ ಪ್ರಾರಂಭಿಸಿದ ಬಳಿಕ ಈ ನಿಯಂತ್ರಣ ಜಾರಿಗೆ ಬಂದಿದೆ.
ವಿದ್ಯಾರ್ಥಿಗಳ ಮೇಲೆ ಪೊಲೀಸ್ ದೌರ್ಜನ್ಯ ಕೂಡ ನಡೆದಿತ್ತು. ಈ ಯೂನಿವರ್ಸಿಟಿಗಳ ಯಹೂದಿ ಸಂಘಟನೆಗಳು
ಕ್ಯಾಂಪಸ್ ಅನ್ನು ಸುರಕ್ಷಿತಗೊಳಿಸಿ ಎಂಬ ಅಭಿಯಾನ ಪ್ರಾರಂಭಿಸಿದ ಬಳಿಕ ಈ ನಿಯಂತ್ರಣ ಜಾರಿಗೆ ಬಂದಿದೆ












