24 ದಿನಗಳ ಬಳಿಕ ನ್ಯೂಝಿಲೆಂಡಿನಲ್ಲಿ ಪುನಃ ಕೊರೋನ ಸೋಂಕು ದೃಢ

0
474

ಸನ್ಮಾರ್ಗ ವಾರ್ತೆ

ವೆಲ್ಲಿಂಗ್ಟನ್,ಜೂ.16: ಒಂದು ತಿಂಗಳಿಂದ ಕೊರೋನ ವರದಿಯಾಗದ ನ್ಯೂಝಿಲೆಂಡಿನಲ್ಲಿ ಹೊಸದಾಗಿ ಇಬ್ಬರಿಗೆ ಕೊರೋನಾ ಸೋಂಕು ದೃಢವಾಗಿದೆ. ಇಂಗ್ಲೆಂಡಿನಿಂದ ಬಂದ ಇಬ್ಬರು ಕೊರೋನ ಪಾಸಿಟಿವ್ ಆಗಿದ್ದಾರೆ. 24 ದಿವಸಗಳಲ್ಲಿ ಹೊಸದಾಗಿ ಕೊರೋನ ವರದಿಯಾಗಿರಲಿಲ್ಲ. ಆದ್ದರಿಂದ ದೇಶವನ್ನು ಕೊರೋನ ಮುಕ್ತ ಎಂದು ಘೋಷಿಸಲಾಗಿತ್ತು. ಕಳೆದ ವಾರ ದೇಶದ ಎಲ್ಲ ಸಾಮಾಜಿಕ ಆರ್ಥಿಕ ನಿಯಂತ್ರಣಗಳನ್ನು ತೆಗೆದು ಹಾಕಿ ಗಡಿಯನ್ನು ಮಾತ್ರ ಮುಚ್ಚಲಾಗಿತ್ತು.

ವಿದೇಶದಿಂದ ಬಹಳಷ್ಟು ಜನರು ನ್ಯೂಝಿಲೆಂಡ್‍ಗೆ ಬರುತ್ತಿದ್ದಾರೆ. ಈ ಕಾರಣದಿಂದ ಕೊರೋನ ಪೀಡಿತರ ಸಂಖ್ಯೆಯು ಇನ್ನಷ್ಟು ಹೆಚ್ಚುವ ಸಾಧ್ಯತೆಯಿಂದೆ ಎಂದು ಪ್ರಧಾನಿ ಜೆಸಿಂತಾ ಅರ್ಡನ್ ಹೇಳಿದ್ದಾರೆ. ವಿದೇಶದಿಂದ ಅಲ್ಲಿಗೆ ಯಾರೂ ಬಂದರೂ ಹದಿನಾಲ್ಕು ದಿವಸ ಕ್ವಾರಂಟೈನ್‌ನಲ್ಲಿ ಇರಬೇಕಾಗುತ್ತದೆ. ನ್ಯೂಝಿಲೆಂಡ್ ಐವತ್ತು ಲಕ್ಷದಷ್ಟು ಜನರನ್ನೊಳಗೊಂಡ ಒಂದು ಸಣ್ಣ ದೇಶ. ಇಲ್ಲಿ 1,156 ಕೊರೋನ ಸೋಂಕು ಪ್ರಕರಣಗಳು ಮಾತ್ರ ವರದಿಯಾಗಿದೆ. ಕೊರೋನ ಸೋಂಕಿನಿಂದಾಗಿ ಇಪ್ಪತ್ತೊಂದು ಜನರು ಮೃತಪಟ್ಟಿದ್ದಾರೆ. ಪ್ರಥಮ ಕೊರೋನ ಸೋಂಕು ಪ್ರಕರಣವು ಫೆಬ್ರುವರಿಯಲ್ಲಿ ಪತ್ತೆಯಾಗಿತ್ತು. ಆದರೆ ಕೊರೋನ ಹರಡದಂತೆ ತಡೆಯುವಲ್ಲಿ ನ್ಯೂಝಿಲೆಂಡ್ ಯಶಸ್ವಿಯಾಗಿತ್ತು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.