ಪ್ರಭುವಿನ ಭೇಟಿ

0
16041

ಸನ್ಮಾರ್ಗ ವಾರ್ತೆ

ಖುರ್ರಮ್ ಮುರಾದ್

ಜೀವನದ ಅತೀ ದೊಡ್ಡ ಸತ್ಯ ಮರಣ ವಾಗಿದೆ. ಮರಣದ ಬಳಿಕ ಮುಂದೇನು ಎಂಬು ದರ ಬಗ್ಗೆ ಭಿನ್ನಾಭಿಪ್ರಾಯವಿರಬಹುದು. ಆದರೆ ಪ್ರತಿಯೊಬ್ಬರಿಗೂ ಮರಣ ಹೊಂದಲೇಬೇಕು ಎಂಬುದರಲ್ಲಿ ಭಿನ್ನಾಭಿಪ್ರಾಯವಿಲ್ಲ. ಮರಣವೆಂದರೆ ತನ್ನ ಶಕ್ತಿ, ಸಾಮಥ್ರ್ಯ, ಶರೀರ, ಸೊತ್ತು, ಸಂಪನ್ಮೂಲ ಮತ್ತು ಸಂಬಂಧ ಕೊನೆಗೊಳ್ಳುವುದು.

ಮುಸ್ಲಿಮನಾಗಿರಲಿ, ಮುಸ್ಲಿಮೇತರನಾಗಿರಲಿ ತನ್ನ ಚೆಕ್ ಪುಸ್ತಕದಲ್ಲಿ ಹಸ್ತಾಕ್ಷರ ಮಾಡಲಾರ, ಮನೆಯಲ್ಲಿರಲಾರ, ಸಂಬಂಧಿಕರೊಂದಿಗೆ ಭೇಟಿ ಯಾಗಲಾರ. ಆತನ ಅವಧಿ ಅಂತ್ಯವಾಗುವುದು. ಮರಣದ ಬಳಿಕ ತನ್ನ ಪ್ರಭುವಿನೊಂದಿಗೆ ಭೇಟಿ ಯಾಗಲಿಕ್ಕಿದೆ, ಅವನ ಮುಂದೆ ನಿಲ್ಲಬೇಕಾಗಿದೆ. ತನ್ನ ಜೀವನದ ಲೆಕ್ಕಾಚಾರ ಕೊಡಬೇಕಾಗಿದೆ ಎಂದು ಪ್ರವಾದಿ(ಸ) ತಿಳಿಸಿರುವಂತೆ ನಾವು ವಿಶ್ವಾಸವಿರಿಸುತ್ತೇವೆ. ತನ್ನ ಪ್ರಭುವಿನ ಭೇಟಿಯ ದೃಢತೆ ಮತ್ತು ಅದರ ಸಿದ್ಧತೆಯು ನಿಜವಾದ ಶಕ್ತಿಯ ಕೇಂದ್ರವಾಗಿದೆ. ಇದರಿಂದಾಗಿ ಅತ್ಯುತ್ತಮ ಚಾರಿತ್ರ್ಯ ಮತ್ತು ಸತ್ಕರ್ಮಗಳು ಉಂಟಾಗಲು ಸಾಧ್ಯ. ಇದು ದುರ್ಬಲವಾದರೆ ನೀವೆಷ್ಟು ಉಪಾಯಗಳನ್ನು ಹೂಡಿ, ಪುರಾವೆ ನೀಡಿ, ತರ ಬೇತಿ ಮಾಡಿ, ಸಾಹಿತ್ಯಗಳ ಅಧ್ಯಯನ ನಡೆಸಿ ಚಾರಿತ್ರ್ಯ ನಿರ್ಮಾಣವಾಗದು. ಸತ್ಕರ್ಮಗಳುಂಟಾಗ ಲಾರದು. ದೊಡ್ಡ ದೊಡ್ಡ ತತ್ವಜ್ಞಾನಿಗಳು ಮತ್ತು ವಿದ್ವಾಂಸರು ಗತಿಸಿ ಹೋಗಿದ್ದಾರೆ, ಅವರಿಂದ ಸತ್ಕರ್ಮಗಳನ್ನೆಸಗಲಾಗಲಿಲ್ಲ. ಇದೇ ವಿಷಯವನ್ನು ಪವಿತ್ರ ಕುರ್‍ಆನ್ ಹೆಚ್ಚಾಗಿ ಹೇಳಿದೆ. ಪದೇ ಪದೇ ನೆನಪಿಸುತ್ತದೆ. ವಿಶಾಲವಾಗಿ ವಿವರಿಸಿದೆ. ಪು ನರಾವರ್ತಿಸಿದೆ. ಕೆಲವೇ ದಿನಗಳ ಜೀವನ. ಅದರಿಂದ ಪ್ರಯೋಜನ ಪಡೆಯಬೇಕು. ಜೀವನ ವನ್ನೇ ಉದ್ದೇಶವನ್ನಾಗಿ ಮಾಡಿಕೊಳ್ಳಬಾರದು. ಅದು ಮೂರ್ಖತನವಾಗಿದೆ. ಮುಂದಿನ ಮರಣಾ
ನಂತರದ ಜೀವನ ಶಾಶ್ವತವಾಗಿದೆ. ಅದನ್ನು ಉದ್ದೇಶ ವಾಗಿಸುವುದೇ ಬುದ್ಧಿವಂತಿಕೆಯ ಕೆಲಸವಾಗಿದೆ.

ತನ್ನ ಪ್ರಭುವನ್ನು ಭೇಟಿಯಾಗಲಿಕ್ಕಿದೆ, ಅವನತ್ತ ಮರಳಬೇಕಾಗಿದೆ ಎಂಬ ಚಿಂತೆಯಲ್ಲಿರಬೇಕು. ಇದು ನಮ್ಮಲ್ಲಿ ಭಯ ಭಕ್ತಿಯನ್ನುಂಟು ಮಾಡುವ ಕೇಂದ್ರ ಬಿಂದುವಾಗಿದೆ. ಕುರ್‍ಆನ್ ಅಲ್ಪಸ್ವಲ್ಪ ಓದಿದವರೂ ಅಲ್ಲಾಹನ ಭೇಟಿಯ ಬಗ್ಗೆ ದೃಢತೆ ಹೊಂದಿದ್ದಾರೆ. ಅವರಲ್ಲಿ ಶಕ್ತಿ, ಸಾಮರ್ಥ್ಯ, ಸತ್ಕರ್ಮಗಳನ್ನೆಸಗುವ ಅಭಿಲಾಷೆ ಇರುತ್ತದೆ. ದಿನನಿತ್ಯ ಬೇಕಾದಷ್ಟು ಕುರ್‍ಆನ್ ಪಠಿಸಲಿ, ದರ್ಸ್ ಕೊಡಲಿ ಅಥವಾ ಕಂಠ ಪಾಠ ಮಾಡಿರಲಿ, ಆದರೆ ಈ ದೃಢತೆಯಿಂದ ಮುಕ್ತನಾಗಿದ್ದರೆ, ಆತನಲ್ಲಿ ಶಕ್ತಿ ಸಾಮಥ್ರ್ಯ ನಷ್ಟವಾಗುವುದು ಮತ್ತು ಸತ್ಕರ್ಮಗಳಿಂದಲೂ ಮುಕ್ತನಾಗಿರುವನು. ಪವಿತ್ರ ಕುರ್‍ಆನ್ ಹೇಳುತ್ತದೆ,

“ಇವರಲ್ಲಿ ಯಾರಿಗಾದರೂ ಮರಣ ಬಂದಾಗ, ನನ್ನ ಪ್ರಭೂ ನಾನು ಬಿಟ್ಟು ಬಂದ ಲೋಕಕ್ಕೆ ನನ್ನನ್ನು ಮರಳಿ ಕಳುಹಿಸಿ ಬಿಡು. ಇನ್ನು ನಾನು ಸತ್ಕರ್ಮ ವೆಸಗುವ ನಿರೀಕ್ಷೆ ಇದೆ” ಎಂದು ಹೇಳಲಾರಂಭಿಸುವ ವರೆಗೂ (ಇವರು ತಮ್ಮ ಕುಕೃತ್ಯವನ್ನು ಬಿಡಲಾರರು). ಎಷ್ಟು ಮಾತ್ರಕ್ಕೂ ಹಾಗಾಗದು. ಇದು ಅವನಾಡುವ ಮಾತು.
(ಅಲ್ ಮೂಮಿನೂನ್: 99-100)

ಮರಣ ಬಾಧಿಸುವ ಚಿತ್ರಣವನ್ನು ಪವಿತ್ರ ಕುರ್‍ಆನ್ ಬಹಳಷ್ಟು ಕಡೆಗಳಲ್ಲಿ ಚಿತ್ರೀಕರಿಸಿದೆ. “ಪ್ರತಿಯೊಬ್ಬರಿಗೂ ಮರಣದ ರುಚಿಯನ್ನು ಸವಿಯಲೇಬೇಕು.” ಎಲ್ಲಿ ಸಾಯಬೇಕೋ ಅಲ್ಲೇ ಮರಣ ಹೊಂದುವಿರಿ. ಅದರಿಂದ ತಪ್ಪಿಸಿಕೊಳ್ಳಲು, ಓಡಲು ಸಾಧ್ಯವಿಲ್ಲ. ಸುತ್ತಮುತ್ತಲು ಜನರು ಕುಳಿತಿರಬಹುದು. ಶರೀರದಿಂದ ಆತ್ಮ ಹೊರಟು ಹೋಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಕೆಲವರ ಸ್ವಾಗತ ಕರುಣೆಯ ದೇವ ಚರರು ಮಾಡುತ್ತಾರೆ. ಕೆಲವರನ್ನು ಬೆಂಕಿಯ ಜ್ವಾಲೆಯಿಂದ ಪೆಟ್ಟುಕೊಟ್ಟು ಎಳೆದೊಯ್ಯಲಾಗುತ್ತದೆ. ಬಹಳ ಸೂಕ್ಷ್ಮವಾಗಿ ಅದ್ಭುತವಾಗಿ ಪವಿತ್ರ ಕುರ್‍ಆನ್ ಮರಣದ ದೃಶ್ಯವನ್ನು ನಮ್ಮ ಮುಂದಿ ಡುತ್ತದೆ. ಒಂದು ಕ್ಷಣ ನಮ್ಮ ಭೌತಿಕ ಕಣ್ಣನ್ನು ಮುಚ್ಚಿ ಆಂತರಿಕ ಕಣ್ಣನ್ನು ತೆರೆದು ನೋಡಿದರೆ ಅಲ್ಲಾಹನ ವಚನದ ಮೇಲಿನ ವಿಶ್ವಾಸದಿಂದಾಗಿ ಅದನ್ನು ವಿಡಿಯೋ ಚಿತ್ರಣದಂತೆ ಕಾಣಲು ಸಾಧ್ಯ.

ರಬ್ಬಿರ್‍ಜಿವೂನಿ- ನನ್ನ ಪ್ರಭೂ ನಾನು ಬಿಟ್ಟು ಬಂದ ಲೋಕಕ್ಕೆ ಮರಳಿ ಕಳುಹಿಸಿಬಿಡು. ಬಹುಶಃ ನಾನು ಸತ್ಕರ್ಮ ವೆಸಗುವವ ಆಗುವೆನು. ಸತ್ಕರ್ಮವು ಅವಧಿ ನಿರ್ಧರಿತವಾಗಿದೆ. ಮರಣದ ಸಂದರ್ಭದಲ್ಲಿ ವ್ಯಕ್ತಿ ಹೇಳುವನು, “ನನ್ನನ್ನು ಮರಳಿ ವಾಪಸು ಕಳುಹಿಸು. ಗೋರಿಯಿಂದ ಎದ್ದೇಳಿಸಿ ಕೂರಿಸಿದಾಗಲೂ ಇದನ್ನೇ ಪುನರಾವರ್ತಿಸು ವನು. ನರಕಕ್ಕೆಸೆಯಲ್ಪಡುವಾಗಲೂ ಇದನ್ನೇ ಹೇಳುವನು. ಒಂದು ಅವಕಾಶ ಕೊಡು, ನಾನು ನೀನು ಹೇಳಿದ ಎಲ್ಲ ಸತ್ಕರ್ಮಗಳನ್ನೆಸಗುವೆನು.”

ಏನಾದರೊಂದು ಸಂಕಷ್ಟ ಬರುತ್ತೆಂದು ನಮಗೆ ತಿಳಿದರೆ ನಮ್ಮ ರಾತ್ರಿಯ ನಿದ್ರೆ, ದಿನದ ನೆಮ್ಮದಿ ಹಾಳಾಗುತ್ತದೆ. ಮುಂದಿನ ಭೋಜನಕ್ಕೆ ಜೀವಂತ ವಿರುವನೆಂಬ ಭರವಸೆ ನಮ್ಮಲ್ಲಿ ಯಾರೂ ತಾನೆ ಕೊಡಬಲ್ಲರು? ನಾವೆಲ್ಲ ನೋಡಿದ್ದೇವೆ, ನಡೆದಾ ಡುವ ಮನುಷ್ಯ ಸಾಯುತ್ತಾನೆ, ಅದರ ಅನುಮಾನ ಕೂಡಾ ಸುಳಿಯುವುದಿಲ್ಲ. ಆರೋಗ್ಯವಂತನೆಂಬ ಪ್ರಮಾಣ ಪತ್ರ ವೈದ್ಯರು ನೀಡಿದರೂ ಮರಣ ಬಂದೇ ಬರುತ್ತದೆ. ಹೃದಯ ಬಡಿತ ನಿಂತರೆ, ಅದನ್ನು ಪುನಃ ಬಡಿಯುವಂತೆ ಮಾಡಲಾಗದು. ಇದಾವುದೂ ಮನುಷ್ಯ ಅಧೀಕಾರ, ಇಚ್ಛೆಯಲ್ಲಿಲ್ಲ. ಆದ್ದರಿಂದ ಕೆಲವೇ ದಿನಗಳ ಅಭಿಲಾಷೆ ಇದು. ನೀವೀಗ ಸತ್ಕರ್ಮ ಆರಂಭಿಸಿದರೆ ನಾಳೆಯೇ ಮರಣ ಹೊಂದಬಹುದು. ಸಮಯ ಬಹಳ ಸೀಮಿತವಾಗಿದೆ. ಕಿಯಾಮತ್‍ನಂದು ಕೇಳಲಾಗು ವುದು, “ಭೂಮಿಯಲ್ಲಿ ಎಷ್ಟು ಸಮಯ ಜೀವಿ ಸಿದ್ದಿ? ಕೆಲವರು ಒಂದು ದಿನ/ ಎರಡು ದಿನ ಎನ್ನುವರು. ಇನ್ನು ಕೆಲವರು ಕೆಲವು ಕ್ಷಣ ಮಾತ್ರ, ಸಂಜೆ-ಮುಂಜಾನೆ ಎನ್ನುವರು. ಸಮಯ ಹೇಗೆ ಕಳೆದು ಹೋಯಿತೆಂದು ಹೇಳಲಾಗದು. ಈಗಲೂ ನಾವು ನಮ್ಮ ಕಳೆದ ಜೀವನವನ್ನು ಹಿಂತಿರುಗಿ ನೋಡಿದರೆ 25 ವರ್ಷ, 50-60 ವರ್ಷ ಕಣ್ಣು ಮಿಟುಕಿಸಿದಷ್ಟು ವೇಗವಾಗಿ ಹಾದು ಹೋಗಿದ್ದನ್ನು ಕಾಣುತ್ತೇವೆ. ಕಳೆದುಹೋದ ಸಮಯ ಮರಳಿ ಸಿಗಲಾರದು. ಇದನ್ನು ಪವಿತ್ರ ಕುರ್‍ಆನ್ ಪದೇ ಪದೇ ಪುನರಾವರ್ತಿಸುತ್ತಾ ನೆನಪಿಸುತ್ತಿದೆ. ಈ ಯಾತನೆ ದೈಹಿಕ ಯಾತನೆ ಗಿಂತಲೂ ಕಠಿಣವಾಗಿದೆ. ಹೃದಯಕ್ಕೆ ತಗಲುವ ಬೆಂಕಿ ಬಹಳ ತೀಕ್ಷ್ಣವಾಗಿರುತ್ತದೆ.

ತಾತ್ಕಲಿಕ ಜೀವನವೊಂದು ಸಿಕ್ಕಿತ್ತು. ಅದು ಕೈಯಿಂದ ತಪ್ಪಿ ಹೋಯಿತು. ಟಿಕ್‍ಟಿಕ್ ಎಂದು ಹೇಳುವ ಸೆಕೆಂಡಿನ ಮುಳ್ಳು ಮರಳಿ ಹಿಂದೆ ಬರಲಾರದು. ಆದ್ದರಿಂದ ಜೀವನವನ್ನು ಸದುಪಯೋಗ ಪಡಿಸ ಬೇಕು. ಅದನ್ನು ಕಳಕೊಳ್ಳಬಾರದು. ಮರಣಾ ನಂತರ ಸಿಗಲಿರುವ ಜೀವನ ಶಾಶ್ವತ. ಜೀವನದಲ್ಲಿ ಗಳಿಸಿದಂತಹ ಸೊತ್ತು ಸಂಪತ್ತು, ಸಂಬಂಧ, ಯೌವನ, ಗೌರವ, ಸ್ಥಾನಮಾನ, ತಂದೆ-ತಾಯಿ, ಪತ್ನಿ-ಮಕ್ಕಳು ಒಡ ಹುಟ್ಟಿದವರು ಮುಂತಾದ ಸಂದರ್ಭಗಳು ಮತ್ತೊಮ್ಮೆ ಸಿಗಲಾ ರವು. ಸತ್ಕರ್ಮಗಳನ್ನು ಮಾಡಬೇಕಾದ ಸಮಯ ಈಗ ಅಥವಾ ಇಂದು.
ಅದಕ್ಕಾಗಿ ಮನುಷ್ಯ ಹೇಳುತ್ತಾನೆ, “ಬಹುಶಃ ನಾನು ಬಿಟ್ಟು ಬಂದ ಲೋಕ. ಅದರಲ್ಲಿ ತನ್ನ ಸಮಯ, ಯೌವನ, ಸೊತ್ತು ಸಂಪತ್ತು, ವಾಹನ, ಆಸ್ತಿ, ಮನೆ, ವ್ಯಾಪಾರ ಎಲ್ಲವೂ ಒಳಗೊಂಡಿದೆ. ಮಾತ ನಾಡುತ್ತಿದ್ದ ನಾಲಗೆ ಅದರಲ್ಲಿದೆ. ತನ್ನ ಹೃದಯದಲ್ಲಿ ಮತ್ಸರ, ದ್ವೇಷ, ಅಸೂಯೆ, ಬಹಳ ಕೆಡುಕುಗಳಿದ್ದವು. ಅದನ್ನು ಬಿಟ್ಟು ದೇವನ ಬಳಿ ತಲುಪಿದ್ದೇ ಆದರೂ ಆತನ ಆಗ್ರಹ, ಅದೆಲ್ಲ ಪುನಃ ಸಿಗಲಿ. ಬದಲಾಗುವೆ, ಸತ್ಕರ್ಮ ವೆಸಗುವೆ, ದಾನ-ಧರ್ಮ ಮಾಡುವೆ. `ಕಲ್ಲಾ’ ಅಸಾಧ್ಯ ಎಂಬ ಉತ್ತರ ಸಿಗುವುದು. ಎಷ್ಟು ಮಾತ್ರಕ್ಕೂ ಹಾಗಾಗದು. ಒಂದು ವೇಳೆ ಪುನಃ ಹೋದರೂ ಮೊದಲಿನಂತಹ ಎಲ್ಲ ದುಷ್ಕರ್ಮಗಳನ್ನೆಸಗುವನು. ಏಕೆಂದರೆ ಇಹಲೋಕ ಮತ್ತು ಪರಲೋಕ ಜೀವನದ ಮಧ್ಯೆ ಒಂದು ತಡೆಗೋಡೆಯಂತಹ ಪರದೆ (ಬರ್ಝಕ್) ಇದೆ.

ಮನುಷ್ಯ ಮರಣವಾದ ತಕ್ಷಣ ಕಠೋರವಾದ ದೇವಚರ, ನರಕಾಗ್ನಿ ಕಣ್ಣಾರೆ ಕಾಣುವನು. ಅದಕ್ಕಾಗಿ ಸತ್ಕರ್ಮವೆಸಗಲು ಹಂಬಲಿಸುವನು. ಭೂಮಿಯ ಮೇಲಿನ ಪರೀಕ್ಷೆಯಂತೂ ಪರೋಕ್ಷದ (ಗೈಬ್) ಮೇಲೆ ನೆಲೆ ನಿಂತಿದೆ. ಎಲ್ಲವೂ ಪರ ದೆಯ ಹಿಂದೆ ಇದೆ. ಅದನ್ನು ಕಣ್ಣಾರೆ ಕಾಣಲು ಸಾಧ್ಯವಿಲ್ಲ. ಆದರೆ ಅಲ್ಲಾಹ್ ಮತ್ತು ರಸೂಲ್ ಸ್ಪಷ್ಟವಾಗಿ ತಿಳಿಸಿಕೊಟ್ಟಿದ್ದಾರೆ. ಅದರ ಬಗ್ಗೆ ದೃಢ ವಿಶ್ವಾಸತಾಳಿ, ಭರವಸೆ ಮಾಡಿ ಸತ್ಕರ್ಮವೆಸಗ ಬೇಕು. ಕಣ್ಣಾರೆ ಕಂಡು ಏನಾದರೂ ಸತ್ಕರ್ಮ ವೆಸಗಿದರೆ ಅದಕ್ಕೆ ಪ್ರತಿಫಲ ಸಿಗುವುದಿಲ್ಲ. ಆದ್ದರಿಂದ ಪರೋಕ್ಷದ ಮೇಲೆ ನಂಬಿಕೆ ಇಟ್ಟರೆ ಮಾತ್ರ ಸಜ್ಜನಿಕೆ ಜೀವನ, ಧರ್ಮ ನಿಷ್ಠೆಯ ವಿಶೇಷತೆ ಮತ್ತು ಸತ್ಕರ್ಮವೆಸಗುವ ಅವಕಾಶ ಸಿಗಲು ಸಾಧ್ಯ.

ಓದುಗರೇ, sanmarga ಪೇಜ್ ಅನ್ನು Like ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.