ತಂದೆಯೇ ಕೊಲ್ಲಲು ಯತ್ನಿಸಿದ್ದ ಹೆಣ್ಣು ಮಗುವಿನ ಆರೋಗ್ಯದಲ್ಲಿ ಚೇತರಿಕೆ

0
520

ಸನ್ಮಾರ್ಗ ವಾರ್ತೆ

ಕೇರಳ,ಜೂ.23: ತಂದೆಯೇ ಕೊಲ್ಲಲು ಯತ್ನಿಸಿದ ಮಗುವಿನ ಆರೋಗ್ಯದಲ್ಲಿ ಸಣ್ಣ ಪ್ರಗತಿ‌ ಕಂಡು ಬಂದಿದೆ. ಮಗು ಕಣ್ಣು ತೆರೆದು ಕೈಕಾಲುಗಳನ್ನು ಆಡಿಸಿ ಅಳಲು ಆರಂಭಿಸಿತು ಎಂದು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸೋಜನ್ ಐಪ್ ಹೇಳಿದ್ದಾರೆ. ಈಗಿನ ಬೆಳವಣಿಗೆ ಮಗುವಿನ ಮೆದುಳಿನ ಸ್ಥಿತಿ ಉತ್ತಮಗೊಂಡಿದ್ದನ್ನು ಸೂಚಿಸುತ್ತದೆ ಎಂದು ತಿಳಿಸಿದ್ದಾರೆ.

ಮೂರು ದಿವಸಗಳ ಹಿಂದೆ ಈ ಹೆಣ್ಣು ಮಗು ಹುಟ್ಟಿತ್ತು. ತಂದೆ ಹೆಣ್ಣು ಮಗು ಎಂದು ಕೊಲ್ಲಲು ಯತ್ನಿಸಿದ್ದಾನೆ. ಅಂಗಮಾಲಿ ಜೋಸ್‍ಪುರದ ಶೈಲು ಥಾಮಸ್(40) ಎಂಬಾತ ಈ ಕ್ರೂರ ಕೃತ್ಯವೆಸಗಿದ ವ್ಯಕ್ತಿಯಾಗಿದ್ದು ಅವನನ್ನು ಪೊಲೀಸರು ಬಂಧಿಸಿದ್ದಾರೆ. 54 ದಿವಸದ ಮಗುವನ್ನು ಮಂಚಕ್ಜೆ ಎಸೆದು ಕೊಲ್ಲಲು ಈತ ಶ್ರಮಿಸಿದ್ದ. ಸ್ಥಳೀಯ ಖಾಸಗಿ ಆಸ್ಪತ್ರೆಗೆ ಮಗುವನ್ನು ತಲುಪಿಸಿದಾಗ ಮಗುವು ಜೀವನ್ಮರಣ ಹೋರಾಟ ನಡೆಸುತ್ತಿತ್ತು. ಮಗುವಿನ ಆರೋಗ್ಯದಲ್ಲಿ ಈಗ ಚೇತರಿಕೆ ಕಂಡು ಬಂದಿದ್ದರೂ ಮುಂದಿನ 36 ಗಂಟೆಗಳು ನಿರ್ಣಾಯಕ ಎಂದು ವೈದ್ಯರು ಹೇಳಿದ್ದಾರೆ. ಮಗುವಿನ ಚಿಕಿತ್ಸೆಯ ಖರ್ಚನ್ನು ಶಿಶುಕಲ್ಯಾಣ ಸಮಿತಿ ವಹಿಸಿಕೊಂಡಿದೆ.

ಸೋಮವಾರ ಬೆಳಗ್ಗೆ ಹನ್ನೊಂದು ಗಂಟೆಗೆ ಆಪರೇಷನ್ ಆರಂಭವಾಗಿತ್ತು. ಎರಡೂವರೆ ಗಂಟೆಗಳ ಶಸ್ತ್ರ ಕ್ರಿಯೆಯಿಂದ ಮಗುವಿನ ಮೆದುಲಿನಲ್ಲಾಗಿದ್ದ ರಕ್ತಸ್ರಾವವನ್ನು ತೆರವುಗೊಳಿಸಲಾಗಿದೆ. ಕಳೆದ ಮೂರು ದಿವಸಗಳಿಂದ ಮಗು ಪ್ರಜ್ಞಾಹೀನ ಸ್ಥಿತಿಯಲ್ಲಿತ್ತು. ಆಪರೇಷನ್ ಯಶಸ್ವಿಯಾಗಿದ್ದರಿಂದ ಮಗುವನ್ನು ಆಕ್ಸಿಜನ್‍ನ ಸಹಿತ ಐಸಿಯುವಿಗೆ ಸ್ಥಳಾಂತರಿಸಲಾಗಿತ್ತು

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.