ಸೌದಿಯಲ್ಲಿ ಕರ್ಫ್ಯೂ ಸಡಿಲಿಕೆ; ಸಾಮಾನ್ಯ ಸ್ಥಿತಿಗೆ ಮರಳಿದ ಜನಜೀವನ

0
398

ಸನ್ಮಾರ್ಗ ವಾರ್ತೆ

ಜಿದ್ದ,ಜೂ.23: ಸೌದಿ ಅರೇಬಿಯ ಸರಕಾರ ಕರ್ಫ್ಯೂ ಸಂಪೂರ್ಣ ತೆಗೆದು ಹಾಕಿದ್ದು ಖಾಸಗಿ ವ್ಯಾಪಾರ ಸಂಸ್ಥೆಗಳು ತೆರದುಕೊಂಡಿವೆ. ಜನಜೀವನ ಸಾಮಾನ್ಯ ಮಟ್ಟಕ್ಕೆ ಬಂದಿದೆ. ಕೊರೋನದಿಂದ ದೇಶದಲ್ಲಿ ಎಲ್ಲ ಕಡೆಯೂ ಸಂಪೂರ್ಣ, ಅಂಶಿಕವಾಗಿ ಸುಮಾರು ಮೂರು ತಿಂಗಳಿಗೂ ಹೆಚ್ಚು ಕಾಲ ಕರ್ಫ್ಯೂ ಜಾರಿಯಲ್ಲಿತ್ತು. ಅಂಗಡಿ ಮುಂಗಟ್ಟುಗಳನ್ನು ಮುಚ್ಚಿರಿಸಲಾಗಿತ್ತು. ರವಿವಾರದಿಂದ ಅವೆಲ್ಲವೂ ಬಾಗಿಲು ತೆರೆದಿವೆ.

ಶನಿವಾರ ಕರ್ಫ್ಯೂ‌ವನ್ನು ಸಂಪೂರ್ಣ ಹಿಂಪಡೆಯಲಾಗಿದ್ದು, ಆರೋಗ್ಯ ಸುರಕ್ಷೆಗೆ ಅಗತ್ಯ ಕ್ರಮಗಳನ್ನು ಮಾಡಿಕೊಂಡ ಬಳಿಕ ಕೆಲಸಗಾರರು ಕಾರ್ಯ ನಿರ್ವಹಿಸುತ್ತಿದ್ದಾರೆ. ನಾವು ಎಚ್ಚರದೊಂದಿಗೆ ಮರಳುತ್ತಿದ್ದೇವೆ ಎಂದು ಕರ್ಫ್ಯೂ ಹಿಂಪಡೆದುದಕ್ಕೆ ಸರಕಾರ ಶೀರ್ಷಿಕೆ ನೀಡಿದೆ. ಈ ಘೋಷಣೆಯನ್ನು ಎಲ್ಲ ರೀತಿಯಿಂದಲೂ ಅನುಸರಿಸಿ ಕೆಲಸಗಾರರು ಕೆಲಸದ ಸ್ಥಳಕ್ಕೆ ಬಂದಿದ್ದಾರೆ. ಎಲ್ಲರಿಗೂ ಮಾಸ್ಕ್ ಹಾಗೂ ಕೈಗವಸು ಧರಿಸಿದ್ದರು.‌

ಕೆಲವು ಕಡೆ ಬಾಗಿಲಲ್ಲಿಯೇ ಜನರ ದೇಹೋಷ್ಣತೆ ತಪಾಸಿಸಲಾಗುತ್ತಿತ್ತು. ಕರ್ಫ್ಯೂ ಹಿಂಪಡೆದರೂ ಅಂಗಡಿ ಸಂಸ್ಥೆಗಳು ಶೇ.75ರಷ್ಟು ಕೆಲಸಗಾರರನ್ನು ಮಾತ್ರ ಇಟ್ಟುಕೊಳ್ಳಬೇಕೆಮದು ಮಾನವ ಕಲ್ಯಾಣ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯ ತಿಳಿಸಿತ್ತು. ಆರೋಗ್ಯ ಸುರಕ್ಷೆಯನ್ನು ಮುಂದಿಟ್ಟು.ಮೂರು ಪಾಳಿಯಲ್ಲಿ ಈ ಕೆಲಸಗಾರರು ಕೆಲಸಕ್ಕೆ ಬರಬೇಕಿದೆ. ಕೆಲಸಕ್ಕೆ ಹಾಜಾರಾಗದವರು ದೂರ ತಂತ್ರಜ್ಞಾನ ವ್ಯವಸ್ಥೆಯಲ್ಲಿ ಮನೆಯಲ್ಲಿಯೇ ಕುಳಿತು ಕೆಲಸ ಮಾಡಬೇಕೆಂದು ಅದಕ್ಕೆ ಸೌಕರ್ಯ ಮಾಡಿಕೊಡಲಾಗುವುದು ಎಂದು ಸಚಿವಾಲಯ ತಿಳಿಸಿದೆ. ಖಾಸಗಿ ವಲಯದ ಸುಮಾರು ಎಲ್ಲ ಸಂಸ್ಥೆಗಳು ರವಿವಾರದಿಂದ ಕೆಲಸವನ್ನು ಆರಂಭಿಸಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.