ಭಾರತದಿಂದ ಆಗಮಿಸುವ ಪ್ರಯಾಣಿಕರಿಗೆ ನ್ಯೂಝಿಲೆಂಡ್ ನಲ್ಲಿ ನಿಷೇಧ

0
682

ಸನ್ಮಾರ್ಗ ವಾರ್ತೆ

ವೆಲ್ಲಿಂಗ್ಟನ್: ಭಾರತದಿಂದ ಬರುವ ಪ್ರಯಾಣಿಕರಿಗೆ ನ್ಯೂಝಿಲೆಂಡ್ ನಿಷೇಧ ಹೇರಿದೆ. ಪ್ರಧಾನಿ ಜೆಸಿಂತಾ ಆರ್ಡನ್ ನಿಷೇಧ ಹೇರಿದ ವಿವರವನ್ನು ತಿಳಿಸಿದರು.

ಎಪ್ರಿಲ್ 11ರಿಂದ ಪ್ರಯಾಣ ನಿಷೇಧ ಜಾರಿಗೆ ಬರಲಿದೆ. ಎಪ್ರಿಲ್ 28ರವರೆಗೆ ಈ ತೀರ್ಮಾನ ಮುಂದುವರಿಯಲಿದೆ. ನ್ಯೂಝಿಲೆಂಡ್ ಪ್ರಜೆಗಳಿಗೂ ನಿಷೇಧ ಅನ್ವಯವಾಗಲಿದೆ. ತಾತ್ಕಾಲಿಕ ನಿಷೇಧ ಇದು ಎಂದು ಜೆಸಿಂತಾ ಆರ್ಡನ್ ತಿಳಿಸಿದರು.

ಭಾರತದಲ್ಲಿ ಕೊರೊನ ಅಲೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ನ್ಯೂಝಿಲೆಂಡ್‍ಗೆ ಬರುವ ಪ್ರಯಾಣಿಕರನ್ನು ನಿಷೇಧಿಸಲಾಗಿದೆ. ಭಾರತದಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ದಿನನಿತ್ಯ ಹೆಚ್ಚುತ್ತಿದೆ.