ಈ ಸಲ ತಪ್ಪು ಸಂಭವಿಸದು: ಮಲಾಲರಿಗೆ ಟ್ವಿಟ್ಟರ್ ನಲ್ಲಿ ಕೊಲೆ ಬೆದರಿಕೆ ಹಾಕಿದ ತಾಲಿಬಾನ್ ಉಗ್ರ

0
554

ಸನ್ಮಾರ್ಗ ವಾರ್ತೆ

ಲಂಡನ್: ನೋಬೆಲ್ ಪುರಸ್ಕೃತೆ ಸಾಮಾಜಿಕ ಹೋರಾಟಗಾರ್ತಿ ಮಲಾಲ ಯೂಸುಫ್ ಝಾಯ್ ವಿರುದ್ಧ ಪುನಃ ತಾಲಿಬಾನ್‍ನಿಂದ ಕೊಲೆ ಬೆದರಿಕೆ ಬಂದಿದ್ದು ಪಾಕಿಸ್ತಾನದ ತಾಲಿಬಾನ್ ಭಯೋತ್ಪಾದಕ ಇಹ್ಸಾನುಲ್ಲ ಇಹ್ಸಾನ್ ಟ್ವಿಟ್ಟರ್ ನಲ್ಲಿ ಕೊಲೆ ಬೆದರಿಕೆ ಹಾಕಿದ್ದಾನೆ.

ಒಂಬತ್ತು ವರ್ಷದ ಹಿಂದೆ ಮಲಾಲರನ್ನು ಕೊಲೆ ಮಾಡಲೆತ್ನಿಸಿದ ಪ್ರಕರಣದಲ್ಲಿ ಇಹ್ಸಾನುಲ್ ಆರೋಪಿಯಾಗಿದ್ದಾನೆ. ಕೂದಲೆಳೆಯ ಅಂತರದಿಂದ ಮಲಾಲ ಬದುಕಿ ಉಳಿದಿದ್ದರು.

ಮತ್ತೆ ಮನೆಗೆ ಬರುತ್ತೇನೆ. ನಿನ್ನೊಂದಿಗೂ, ತಂದೆಯೊಂದಿಗೂ ಲೆಕ್ಕ ತೀರಿಸಲಿಕ್ಕಿದೆ. ಈ ಬಾರಿ ತಪ್ಪು ಸಂಭವಿಸುವುದಿಲ್ಲ ಎಂದು ಇಹ್ಸಾನುಲ್ಲ ಟ್ವೀಟ್ ಮಾಡಿದ್ದಾನೆ. ಉರ್ದು ಭಾಷೆಯಲ್ಲಿ ಈ ಟ್ವೀಟ್ ಇದೆ. ಈ ಖಾತೆಯನ್ನು ಸದ್ಯ ಟ್ವಿಟರ್ ಖಾಯಂ ರದ್ದುಪಡಿಸಿದೆ.

ತನ್ನ ಮೇಲೆ ದಾಳಿ ನಡೆಸಿದ ಮತ್ತು ನಿರಪರಾಧಿಗಳ ಹತ್ಯೆ ಮಾಡಿದ ಹೊಣೆವಹಿಸಿಕೊಂಡ ತೆಹ್ರೀಕೆ ಇ ತಾಲಿಬಾನ್‍ನ ಮಾಜಿ ವಕ್ತಾರ ಈತ. ಈಗ ಸಾಮಾಜಿಕ ಮಾಧ್ಯಮದಲ್ಲಿ ಬೆದರಿಕೆ ಹಾಕಿದ್ದಾನೆ. ಹೇಗೆ ಈತ ಕಸ್ಟಡಿಯಿಂದ ಪಾರಾಗಿದ್ದಾನೆ ಎಂದು ಆಗ್ರಹಿಸಿರುವ ಮಲಾಲ, ಈ ಟ್ವೀಟ್ ಅನ್ನು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಗೆ ರೀ ಟ್ವೀಟ್ ಮಾಡಿದ್ದು, ಈ ಬಗ್ಗೆ ಪ್ರಧಾನಿ ಹಾಗೂ ಸೇನೆ ಉತ್ತರಿಸಬೇಕೆಂದು ಒತ್ತಾಯಿಸಿದ್ದಾರೆ.