ಒಳ್ಳೆಯ ರಸ್ತೆ ಬೇಕಾ, ಟೋಲ್ ಕೊಡಬೇಕು-ನಿತಿನ್ ಗಡ್ಕರಿ

0
463

ಹೊಸದಿಲ್ಲಿ, ಜು. 17: ರಸ್ತೆ ಅಭಿವೃದ್ಧಿಗೆ ಸರಕಾರದಲ್ಲಿ ಹಣವಿಲ್ಲ. ಆದ್ದರಿಂದ ಟೋಲ್ ಸಂಪ್ರದಾಯ ಮುಂದುವರಿಸಿದೆ ಎಂದು ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದರು. ಒಳ್ಳೆಯ ರೋಡ್ ಬೇಕಿದ್ದರೆ ಜನರು ಟೋಲ್ ಕೊಡಬೇಕು. ಸರಕಾರದ ಬಳಿ ಹಣವಿಲ್ಲ ಎಂದು ಲೋಕಸಭೆಯಲ್ಲಿ ಅವರು ಹೇಳಿದರು. ಟೋಲನ್ನು ನಿಲ್ಲಿಸಲು ಯಾವತ್ತೂ ಸಾಧ್ಯವಿಲ್ಲ. ಆದರೆ ಶುಲ್ಕದಲ್ಲಿ ವ್ಯತ್ಯಾಸ ಕಾಲಕ್ಕೆ ತಕ್ಕಂತೆ ಮಾಡಬಹುದು. ಹಣ ಸಂಗ್ರಹಿಸುವುದಕ್ಕಾಗಿ ಟೋಲ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಸ್ಕೂಲ್ ಬಸ್‍ಗಳಿಗೆ, ಸರಕಾರಿ ಬಸ್‍ಗಳಿಗೆ ಟೋಲ್ ನಿಲ್ಲಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ.

ಟೋಲ್‍ನಿಂದ ಸಿಗುವ ಹಣವನ್ನು ಊರ ಹೊರಗಿನ ರಸ್ತೆ ಅಭಿವೃದ್ಧಿಗೆ ಬಳಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.