ಚರ್ಚ್ ನಿರ್ಮಾಣದ ವಿಷಯದಲ್ಲಿ ವ್ಯಾಟಿಕನ್ ಜೊತೆ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ- ಸೌದಿ

0
609

ವರದಿ: ಮಿಡ್ಲ್ ಈಸ್ಟ್ ಮಾನಿಟರ್

ಸೌದಿ ಅರೇಬಿಯಾದಲ್ಲಿ ಚರ್ಚುಗಳನ್ನು ನಿರ್ಮಿಸುವಲ್ಲಿ ಸೌದಿ ಅರೇಬಿಯಾ ಮತ್ತು ವ್ಯಾಟಿಕನ್ ನಡುವಿನ ಯಾವುದೇ ಒಪ್ಪಂದ ನಡೆದಿಲ್ಲ ಎಂದು ಮುಸ್ಲಿಂ ವರ್ಲ್ಡ್ ಲೀಗ್ (MWL) ಕಾರ್ಯದರ್ಶಿ ಶೇಖ್ ಮೊಹಮ್ಮದ್ ಬಿನ್ ಅಬ್ದುಲ್ ಕರೀಮ್ ಅಲ್-ಇಸಾ ಹೇಳಿದ್ದಾರೆ.

ಅಂತಹ ಒಪ್ಪಂದದ ವರದಿಗಳು “ಆಧಾರರಹಿತವಾಗಿವೆ. ಆದರೂ, ವ್ಯಾಟಿಕನ್ ನೊಂದಿಗೆ ತಿಳುವಳಿಕೆಯ ಜ್ಞಾಪನಾ ಪತ್ರಕ್ಕೆ ಲೀಗ್ ಸಹಿ ಹಾಕಿದೆ ಎಂದು ಅವರು ರಶಿಯಾ ಟುಡೆ ಟಿವಿ ಚಾನಲ್ ಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಅಲ್-ಇಸಾ ಎರಡು ವರ್ಷಗಳ ಹಿಂದೆ ವ್ಯಾಟಿಕನ್ ನಲ್ಲಿ ಪೋಪರನ್ನು ಭೇಟಿ ಮಾಡಿದ್ದರು. ಅವರು ವ್ಯಾಟಿಕನ್ ಮತ್ತು ಇಸ್ಲಾಮಿ ಜಗತ್ತಿನ ನಡುವೆ ಸಹಕಾರ,ಶಾಂತಿ ಮತ್ತು ಸಹಬಾಳ್ವೆ ವಿಷಯಗಳ ಬಗ್ಗೆ ಚರ್ಚಿಸಿದ್ದರು.