ಜನತಾಕಾ ರಿಪೋರ್ಟರ್
ಅಬುಧಾಬಿಯ ರಾಜ ಶೇಖ್ ಮೊಹಮ್ಮದ್ ಬಿನ್ ಝಯೆದ್ ಮತ್ತು ಸೌದಿ ಅರೇಬಿಯಾವು ಪ್ರಧಾನಿ ನರೇಂದ್ರ ಮೋದಿಯನ್ನು ಹಿಂಬಾಲಿಸುವುದನ್ನು ಅಪಾಯಕಾರಿ ಆಟವೆಂದು ತಜ್ಞರು ಮತ್ತು ಮಾಜಿ ರಾಜತಾಂತ್ರಿಕರು ಎಚ್ಚರಿಸಿದ್ದಾರೆ. ಏಪ್ರಿಲ್ 20 ರಂದು ಅಬುಧಾಬಿಯಲ್ಲಿರುವ ಸ್ವಾಮಿ ನಾರಾಯಣ ಪಂಥದ ಹಿಂದೂ ದೇವಸ್ಥಾನದ ಎರಡನೇ ಸಮಾರಂಭದಲ್ಲಿ ಮೋದಿ ಭಾಗವಹಿಸಲಿದ್ದಾರೆ ಎಂಬ ಸುದ್ದಿ ಹೊರಬಿದ್ದ ನಂತರ ಈ ಬೆಳವಣಿಗೆಗಳು ನಡೆದಿವೆ. ಅಬುಧಾಬಿ ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ದಿನಪತ್ರಿಕೆ ವರದಿ ಮಾಡಿದಂತೆ, ಮೋದಿ ಫೆಬ್ರವರಿ 2018 ರಲ್ಲಿ ಭೇಟಿ ನೀಡಿದ ಸಂದರ್ಭದಲ್ಲಿ ಮೊದಲ ಶಂಕುಸ್ಥಾಪನೆ ಸಮಾರಂಭದಲ್ಲಿ ಭಾಗವಹಿಸಿದ್ದರು, ಆ ಸಂದರ್ಭದಲ್ಲಿ ರಾಜಧಾನಿಯ ಮೊದಲ ಹಿಂದೂ ದೇವಸ್ಥಾನದ ಯೋಜನೆಯನ್ನು ಸಹ ಮುಂದಿಟ್ಟಿದ್ದರು.
ಶಂಕುಸ್ಥಾಪನಾ ಸಮಾರಂಭವು ಭಾರತೀಯ ಚುನಾವಣೆಗಳ ಮಧ್ಯದಲ್ಲಿ ಬರುತ್ತದೆ. ಎರಡನೇ ಅವಧಿಗೆ ಅಧಿಕಾರ ವಹಿಸಿಕೊಳ್ಳಲು ಭಾರತದ ಹಿಂದೂ ಮತದಾರರನ್ನು ಓಲೈಸುವ ಹತಾಶ ಪ್ರಯತ್ನಗಳನ್ನು ಮೋದಿ ಮಾಡುತ್ತಿದ್ದಾರೆ.
ಮೋದಿ ಅವರಿಗೆ ಚುನಾವಣಾ ಲಾಭವನ್ನು ಪಡೆಯಲು ಸಹಾಯ ಮಾಡುತ್ತಿರುವುದಕ್ಕಾಗಿ ಅಬುಧಾಬಿ ಮತ್ತು ಸೌದಿ ಅರೇಬಿಯಾದ ರಾಜರನ್ನು ಮಾಜಿ ರಾಜತಾಂತ್ರಿಕ ಕೆ.ಸಿ. ಸಿಂಗ್ ಅವರು ಟೀಕಿಸಿದ್ದಾರೆ. ”ಸುದ್ದಿ ಪ್ರಕಾರ ಎಪ್ರಿಲ್ ನಲ್ಲಿ ಮೋದಿ ಅಬುಧಾಬಿಯ ದೇವಸ್ಥಾನವನ್ನು ಉದ್ಘಾಟಿಸುವ ಸಾಧ್ಯತೆಗಳಿವೆ. ನೀತಿ ಸಂಹಿತೆ? ಅಬುಧಾಬಿ / ಸೌದಿ ಅರೇಬಿಯಾದ ರಾಜ ಪ್ರಭುಗಳು ಮೋದಿಯ ಹಿಂದೆ ಆಟವಾಡಿಸುವ ಮೂಲಕ ಅಪಾಯಕಾರಿ ಆಟವಾಡುತ್ತಿದ್ದಾರೆ . ವಿದೇಶಿ ರಾಷ್ಟ್ರಗಳು ಭಾರತೀಯ ಚುನಾವಣೆಗಳಲ್ಲಿ ನೇರವಾಗಿ / ಪರೋಕ್ಷವಾಗಿ ಹಸ್ತಕ್ಷೇಪ ಮಾಡುವುದನ್ನು ಸಂಪೂರ್ಣವಾಗಿ ತಪ್ಪಿಸಬೇಕು ” ಎಂದವರು ಟ್ವೀಟರ್ ನಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.
ರಾಯಭಾರಿ ರಾಜೀವ್ ದೋಗ್ರಾ ಸಹ ಕೆ.ಸಿ. ಸಿಂಗ್ ಅವರೊಂದಿಗೆ ಸಹಮತವನ್ನು ಹೊಂದಿದ್ದಾರೆ. ಚುನಾವಣೆಯಲ್ಲಿ ಪ್ರಯೋಜನವನ್ನು ಪಡೆಯಲು ಮೋದಿಯವರು ಭೇಟಿ ನೀಡುತ್ತಿದ್ದಾರೆ ಎಂದು ಈ ಭೇಟಿಯ ವಿರುದ್ಧ ಅಬುಧಾಬಿಗೆ ಎಚ್ಚರಿಸಿದ್ದಾರೆ. “ಅರಬ್ ಸಂಯುಕ್ತ ಸಂಸ್ಥಾನವು ಕೊಲ್ಲಿ ರಾಜಪ್ರಭುತ್ವದಲ್ಲಿ ಅತ್ಯಂತ ಉದಾರಿ ಮತ್ತು ಅವರೊಂದಿಗೆ ನಮ್ಮ ಸಂಬಂಧ ಕೂಡ ತುಂಬಾ ಹಳೆಯದು. ಆದರೂ, ಚುನಾವಣಾ ಋತುವಿನಲ್ಲಿ ಶಂಕುಸ್ಥಾಪನೆಯಲ್ಲಿ ಪಾಲ್ಗೊಳ್ಳಲು ಪ್ರಧಾನ ಮಂತ್ರಿಯವರ ಭೇಟಿ ಚುನಾವಣೆಗೆ ಬಳಸಿದ ಅಸ್ತ್ರವಾಗಿದೆ” ಎಂದು ರಾಯಭಾರಿ ದೋಗ್ರ ಹೇಳಿರುವುದಾಗಿ ದಿ ಹಿಂದೂ ಹೇಳಿಕೊಂಡಿದೆ.
ಸಂಘಟಕರು ಕಳುಹಿಸಿದ ಪ್ರಚಾರ ಪತ್ರದಲ್ಲಿ ಅತಿಥಿಗಳಲ್ಲಿ ಮೋದಿಯವರ ಹೆಸರನ್ನು ಇನ್ನೂ ದೃಢಪಡಿಸಿಲ್ಲ. ನೀತಿ ಸಂಹಿತೆಯ ಹಿನ್ನಲೆಯಲ್ಲಿ ವಿದೇಶದಲ್ಲಿ ಧಾರ್ಮಿಕ ಸಮಾರಂಭದಲ್ಲಿ ಮೋದಿ ಭಾಗವಹಿಸಬಹುದೆ ಎಂಬ ಪ್ರಶ್ನೆಗಳಿವೆ.












