2024ರ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ 300 ಸೀಟುಗಳು ಲಭಿಸುವುದೆಂದು ಹೇಳಲು ಆಗದು: ಗುಲಾಂ ನಬಿ ಆಝಾದ್

0
215

ಸನ್ಮಾರ್ಗ ವಾರ್ತೆ

ಜಮ್ಮು: ಈಗಿನ ಪರಿಸ್ಥಿತಿಗಳು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ 300 ಸೀಟುಗಳನ್ನು ಒದಗಿಸಿಕೊಡುತ್ತವೆಂದು ಅನಿಸುವುದಿಲ್ಲ ಎಂದು ಕಾಂಗ್ರೆಸ್ ನಾಯಕ ಗುಲಾಂ ನಬಿ ಆಝಾದ್ ತಿಳಿಸಿದರು. 370 ವಿಧಿ ರದ್ದತಿ ಕುರಿತ ಮೌನವಹಿಸಿದ್ದನ್ನು ಸಮರ್ಥಿಸಿಕೊಂಡ ಗುಲಾಂ ನಬಿ ಆಝಾದ್ ವಿಷಯ ಕೋರ್ಟಿನಲ್ಲಿದೆ ನಂತರ ಕೇಂದ್ರ ಸರಕಾರಪುನಃ ಅದನ್ನು ಸ್ಥಾಪಿಸಬೇಕಾಗುತ್ತದೆ ಎಂದರು.

ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಕಾಶ್ಮೀರದ ವಿಶೇಷ ಅಧೀಕಾರವನ್ನು ತೆಗೆದು ಹಾಕಿದೆ. ಮತ್ತೆ ಅದು ಮರುಸ್ಥಾಪಿಸಿಲ್ಲ ಎಂದು ಪೂಂಛ್ ಜಿಲ್ಲಾ ರ್ಯಾಲಿಯಲ್ಲಿ ಗಲಾಂ ನಬಿ ಆಝಾದ್ ಹೇಳಿದರು. ಸ್ವಯಂ ಸರಕಾರ ರೂಪಿಸಲು 300 ಸಂಸದರು ಕಾಂಗ್ರೆಸ್‌ಗೆ ಯಾವಾಗ ಸಿಗುತ್ತಾರೆ? ಹಾಗಾಗಿ 370ನೇ ವಿಧಿ ಮರುಸ್ಥಾಪಿತವಾಗಲಿದೆ ಎಂದು ನನ್ನಿಂದ ಖಚಿತತೆ ನೀಡಲಾಗದು ಎಂದು ಗುಲಾಮ್ ನಬಿ ಆಝಾದ್ ಈ ವೇಳೆ ಹೇಳಿದರು.

ದೇವನು ನಮಗೆ 300 ಸಂಸದರನ್ನು ಕೊಡಲಿ. ಈಗಿನ ಪರಿಸ್ಥಿತಿಯಲ್ಲಿ ಸಿಗುತ್ತದೆ ಎಂದು ಅನಿಸುವುದಿಲ್ಲ. ಆದುದರಿಂದ ಸುಳ್ಳು ಭರವಸೆ ಕೊಡುವುದಿಲ್ಲ. 370ನೇ ವಿಧಿ ಕುರಿತು ಮಾತಾಡುವುದಿಲ್ಲ ಎಂದು ಹೇಳಿದರು. ಅವರು ಪೂಂಛ್, ರಜೌರಿಯಲ್ಲಿ ಸಂದರ್ಶಿಸುತ್ತಿದ್ದಾರೆ