‘ಕೊಟ್ಟ ಮಾತು ಉಳಿಸಿಕೊಳ್ಳಲಾಗಿಲ್ಲ’- ಅಳುತ್ತಾ ಜನರಲ್ಲಿ ಕ್ಷಮೆಯಾಚಿಸಿದ ಉತ್ತರ ಕೊರಿಯ ಅಧ್ಯಕ್ಷ ಕಿಮ್ ಜೊಂಗ್ ಉನ್

0
571

ಸನ್ಮಾರ್ಗ ವಾರ್ತೆ

ಸೋಲ್,ಅ.13: ಸೈನಿಕರ ತ್ಯಾಗಕ್ಕೆ ಕೃತಜ್ಞತೆ ಸೂಚಿಸುತ್ತಾ ಜನರ ಜೀವನ ಮಟ್ಟ ಉನ್ನತಿಗೇರಿಸಲು ಸಾಧ್ಯವಾಗದಕ್ಕೆ ಉತ್ತರ ಕೊರಿಯದ ಸರ್ವಾಧಿಕಾರಿ ಕಿಮ್ ಜೊಂಗ್ ಉನ್ ಕ್ಷಮೆ ಯಾಚಿಸಿದ್ದಾರೆ. ಆಡಳಿತ ಪಕ್ಷ ವರ್ಕರ್ಸ್ ಪಾರ್ಟಿ ಆಫ್ ಕೊರಿಯದ 75ನೇ ವರ್ಷ ಆಚರಣೆಯ ಅಂಗವಾಗಿ ಅವರು ಭಾವನಾತ್ಮಕವಾಗಿ ಭಾಷಣ ಮಾಡಿದ್ದಾರೆ. ವೀಡಿಯೊದ ಕೆಲವು ಭಾಗಗಳನ್ನು ಸ್ಟೇಟ್ ಟಲಿವಿಷನ್ ಸ್ಟೇಶನ್ ಹೊರಗೆ ಬಿಟ್ಟಿದೆ. ಇದರಲ್ಲಿ ಕಿಮ್ ಅಳುತ್ತಿದ್ದುದು ಕಾಣಿಸುತ್ತಿದೆ.

ಕನ್ನಡಕ ತೆಗೆದು ಕಣ್ಣೀರನ್ನು ಉಜ್ಜಿಕೊಂಡು ಕಿಮ್ ಜನರಲ್ಲಿ ಕ್ಷಮೆ ಯಾಚಿಸಿದರು. ಉತ್ತರ ಕೊರಿಯದಲ್ಲಿ ಯಾರಿಗೂ ಕೊರೋನ ಬಂದಿಲ್ಲ ಇದಕ್ಕಾಗಿಯೂ ಕಿಮ್ ಜೊಂಗ್ ಉನ್ ಕೃತಜ್ಞತೆ ಸಲ್ಲಿಸಿದರು. ಆದರೆ ಕಿಮ್‍ರ ಈ ವಾದವನ್ನು ಅಮೆರಿಕ ದಕ್ಷಿಣ ಕೊರಿಯ ಶಂಕೆಯಿಂದ ನೋಡುತ್ತಿದೆ. ಕೊರೋನ ಪ್ರತಿರೋಧಕ್ಕಾಗಿ ನಿಯಂತ್ರಣಗಳು ಮತ್ತು ಅಂತಾರಾಷ್ಟ್ರೀಯ ದಿಗ್ಬಂಧನಗಳಿಂದ ಜನಜೀವನ ಮಟ್ಟ ಕುಸಿದಿದೆ. ಜನರ ಜೀವನ ಮಟ್ಟವನ್ನು ಉನ್ನತಗೊಳಿಸುವೆ ಎಂದು ಕಿಮ್ ಜನರಿಗೆ ಭರವಸೆ ನೀಡಿದ್ದರು. ಜನರು ತನ್ನಲ್ಲಿ ಇಟ್ಟ ವಿಶ್ವಾಸವನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಹೇಳುತ್ತಾ ಅವರು ಕ್ಷಮೆಯಾಚಿಸಿದರು.

ಉತ್ತರ ಕೊರಿಯಕ್ಕೆ ಅಣ್ವಸ್ತ್ರ, ಬ್ಯಾಲಸ್ಟಿಕ್ ಮಿಸೈಲ್ ಪರೀಕ್ಷೆಗಾಗಿ ಅಂತಾರಾಷ್ಟ್ರೀಯ ದಿಗ್ಬಂಧನ ಹೇರಲಾಗಿದೆ. ನಂತರ ದೇಶದ ಆರ್ಥಿಕ ವ್ಯವಸ್ಥೆ ಕುಸಿದಿದೆ. ಕೊರೋನ ವೈರಸ್ ತಡೆಯುವ ನಿಟ್ಟಿನಲ್ಲಿ ದೇಶದ ಎಲ್ಲ ಗಡಿಗಳನ್ನು ಮುಚ್ಚಿ ಸಾರಿಗೆ ಸಂಚಾರವನ್ನು ನಿಷೇಧಿಸಲಾಗಿದೆ. ಉತ್ತರ ಕೊರಿಯದ ಶೇ.40ರಷ್ಟು ಜನರು ಹಸಿವಿನಿಂದ ಬಳಲುತ್ತಿದ್ದಾರೆ ಎಂದು ಇತ್ತೀಚೆಗೆ ವಿಶ್ವಸಂಸ್ಥೆಯ ವರದಿ ತಿಳಿಸಿತ್ತು.