ಸನ್ಮಾರ್ಗ ವಾರ್ತೆ
ಮುಂಬೈ,ಅ.13: ಬಿಹಾರ ವಿಧಾನ ಸಭಾ ಚುನಾವಣೆಯಲ್ಲಿ ಶಿವಸೇನೆ 40 ರಿಂದ 50ಸೀಟುಗಳವರೆಗೆ ಸ್ಪರ್ಧಿಸಲಿದೆ ಎಂದು ಸಂಜಯ್ ರಾವತ್ ತಿಳಿಸಿದ್ದಾರೆ. ಯಾವುದೇ ಪಾರ್ಟಿಯೊಂದಿಗೆ ರಾಜಕೀಯ ಸಖ್ಯದ ಕುರಿತು ಯಾವುದೇ ರೀತಿಯ ಚರ್ಚೆ ನಡೆದಿಲ್ಲ. ಪಪ್ಪು ಯಾದವ್‍ರ ಸಹಿತ ಪ್ರಾದೇಶಿಕ ಪಾರ್ಟಿಗಳು ಚರ್ಚೆಗೆ ಸಿದ್ಧವಾಗಿದೆ ಎಂದು ಸಂಜಯ್ ರಾವತ್ ಹೇಳಿದರು.
ಎನ್‍ಸಿಪಿಯೊಂದಿಗೆ ಸೇರಿ ಬಿಹಾರದಲ್ಲಿ ಚುನಾವಣೆಗಿಳಿಯುವುದು ಶಿವಸೇನೆಯ ಉದ್ದೇಶ ಎನ್ನಲಾಗಿದೆ. ಆರ್‍ಜೆಡಿ, ಕಾಂಗ್ರೆಸ್, ಎಡಪಕ್ಷಗಳು, ಜೆಡಿಯು-ಬಿಜೆಪಿ ಸಖ್ಯಗಳ ಸೀಟು ಹೊಂದಾಣಿಕೆ ಕೊನೆಗೊಂಡಿದೆ. ಬಿಎಸ್‍ಪಿ, ಉಪೇಂದ್ರ ಕುಶ್ವಾಹರ ರಾಷ್ಟ್ರೀಯ ಲೋಕ ಸಮತಾ ಪಾರ್ಟಿ, ಅಸದುದ್ದೀನ್ ಉವೈಸಿಯ ಎಐಎಂಐಎಂ ಸೇರಿ ಮೂರನೇ ಸಖ್ಯವನ್ನು ರೂಪಿಸಿದ್ದಾರೆ.
ಒಟ್ಟು 243 ಸೀಟುಗಳಲ್ಲಿ ನಿತೀಶ್ ಕುಮಾರ್‌ರ ಜೆಡಿಯು 122 ಸ್ಥಾನಗಳಲ್ಲಿ ಬಿಜೆಪಿ 121 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿವೆ. ಜೆಡಿಯುಗೆ ಲಭಿಸಿದ ಸೀಟುಗಳಲ್ಲಿ 7ನ್ನು ಜಿತನ್ ರಾಮ್ ಮಾಂಜಿಯ ಹಿಂದುಸ್ತಾನಿ ಅವಾಂ ಮೋರ್ಚಾ ಮತ್ತು ಬಿಜೆಪಿಯ ಸೀಟುಗಳಲ್ಲಿ ವಿಕಾಸಶೀಲ್ ಇನ್ಸಾನ್ ಪಾರ್ಟಿಗೂ ನೀಡಲಿವೆ.
ಆರ್‍ಜೆಡಿ 114 ಸೀಟುಗಳಲ್ಲಿ ಕಾಂಗ್ರೆಸ್ 70 ಸೀಟುಗಳಲ್ಲಿ ಸಿಪಿಐಎಂಎಲ್ 19, ಸಿಪಿಐ ಆರ್, ಸಿಪಿಎಂ ನಾಲ್ಕು ತಲಾ ಸೀಟುಗಳಲ್ಲಿ ಸ್ಪರ್ಧಿಸಲಿವೆ.












