ಸನ್ಮಾರ್ಗ ವಾರ್ತೆ
ಗೂಗಲ್ನ ಜನಪ್ರಿಯ ಎಐ ಆಗಿರುವ ಜೆಮಿನಿಯ ಉಚಿತ ಬಳಕೆದಾರರಿಗೆ ಗೂಗಲ್ ತನ್ನ ಸೇವೆಗಳಲ್ಲಿ ಪ್ರಮುಖ ಬದಲಾವಣೆಗಳು ತಂದಿದ್ದು ಅಕ್ಟೋಬರ್ 9 ರಿಂದ ಉಚಿತ ಜೆಮಿನಿ ಉಪಯೋಗಿಸುವವರಿಗೆ ಬೇಸಿಕ್ ಯೋಜನೆಯಾದ ಎಐ ಪ್ಲಸ್ ಮಾಡುವವರಿಗೂ ಜೆಮಿನಿಯ ಉನ್ನತ ಮಾಡೆಲ್ಗಳು ಸಿಗುವುದಿಲ್ಲ.
ಜೆಮಿನಿಯ ಫ್ರೀ ಪ್ಲಾನ್ ಬಳಸುವವರಿಗೆ ಇನ್ನು ಮುಂದೆ ಜೆಮಿನಿಯ ಉನ್ನತ ಮಟ್ಟದ ಮಾಡೆಲ್ಗಳು ಸಿಗುವುದಿಲ್ಲ. ಬದಲಿಗೆ, ಕೇವಲ ಪ್ಲಾಶ್ ಲೈಟ್ ಮಾಡೆಲ್ ಮಾತ್ರ ಉಚಿತ ಬಳಕೆದಾರರಿಗೆ ಲಭ್ಯವಿರುತ್ತದೆ. ಹಳೆಯ ಪ್ಲಾಶ್ ಮತ್ತು ಪ್ರೋ ಮಾಡೆಲ್ಗಳು ಇನ್ನು ಮುಂದೆ ಉಚಿತವಾಗಿ ಸಿಗುವುದಿಲ್ಲ.
ಎಐ ಪ್ಲಸ್ ಚಂದಾದಾರರಿಗೂ ಜೆಮಿನಿಯಲ್ಲಿ ಕೆಲವು ಬದಲಾವಣೆ ಆಗಿದೆ. ಕಡಿಮೆ ದರದ ಎಐ ಪ್ಲಸ್ ಸಬ್ಸ್ಕ್ರಿಪ್ಶನ್ ಹೊಂದಿರುವವರಿಗೂ ಪ್ರೋ ಮಾಡೆಲ್ ಲಭ್ಯವಿರುವುದಿಲ್ಲ. ಇವರು ಇನ್ನು ಮುಂದೆ ಪ್ಲಾಶ್ ಲೈಟ್ ಮತ್ತು ಪ್ಲಾಶ್ ಮಾಡೆಲ್ಗಳನ್ನು ಮಾತ್ರ ಬಳಸಬಹುದು.
ಉನ್ನತ ಪ್ಲಾನ್ಗಳಲ್ಲಿ ಜೆಮಿನಿ ಯಾವುದೇ ಬದಲಾವಣೆ ತಂದಿಲ್ಲ. ಎಐ ಪ್ರೋ ಅಥವಾ ಎಐ ಅಲ್ಟ್ರಾ ಮುಂತಾದ ಉನ್ನತ ಪ್ಲಾನ್ಗಳನ್ನು ಬಳಸುವವರಿಗೆ ಮುಂಚಿನಂತೆ ಎಲ್ಲಾ ಮಾಡೆಲ್ಗಳೂ (ಪ್ಲಾಶ್- ಲೈಟ್ ಪ್ಲಾಶ್, ಪ್ರೋ) ಸಿಗುವುದನ್ನು ಮುಂದುವರಿಸಲಾಗುತ್ತದೆ. ಜೊತೆಗೆ ಇವರಿಗೆ ಡೀಪ್ ಥಿಂಕ್ ನಂತಹ ಹೊಸ ಫೀಚರ್ಗಳೂ ಸಿಗಲಿದೆ.
ಜೆಮಿನಿಯ ಅತ್ಯುತ್ತಮ ಎಐ ಅನುಭವವನ್ನು ಉಚಿತವಾಗಿ ಪಡೆಯುತ್ತಿದ್ದವರಿಗೆ ಇದು ಸ್ವಲ್ಪ ಹಿನ್ನಡೆಯಾಗಿದ್ದು, ಇನ್ನು ಮುಂದೆ ಉನ್ನತ ಕಾರ್ಯಗಳಿಗಾಗಿ ಅವರು ಪ್ರೀಮಿಯಂ ಪ್ಲಾನ್ಗಳನ್ನು ಆಶ್ರಯಿಸಬೇಕಾಗುತ್ತದೆ. ಇದೇವೇಳೆ ಲೋ- ಮೀಡಿಯಂ- ಹೈ ಎಂಬ ಮೂರು ಥಿಂಕಿಂಗ್ ಪ್ರೋಗ್ರಾಂಗಳನ್ನು ಗೂಗಲ್ ಪರಿಚಯಿಸಲು ಮುಂದಾಗಿದೆ. ಇದರಿಂದ ಪ್ರಶ್ನೆಗಳಿಗೆ ಉತ್ತರಕ್ಕಾಗಿ ಎಷ್ಟು ಕಂಪ್ಯೂಟರಿಂಗ್ ಸಾಮರ್ಥ್ಯ ಉಪಯೋಗಿಸಬೇಕೆಂದು ತೀರ್ಮಾನಿಸಲು ಸಾಧ್ಯವಾಗಲಿದೆ.
ಎಐ ಮಾಡೆಲ್ಗಳಲ್ಲಿ ನಿಯಂತ್ರಣದೊಂದಿಗೆ ಚಿತ್ರಗಳು, ವೀಡಿಯೊಗಳು ಸಂಗೀತ ಮುಂತಾದ ಮೀಡಿಯ ಜನರೇಷನ್ ಫೀಚರ್ಗಳಲ್ಲಿ ಡೀಪ್ ರಿಸರ್ಚ್ಗಳಲ್ಲಿ ಗೂಗಲ್ ನಿಯಂತ್ರಣ ತಂದಿದ್ದು ಉಪಯೋಗಿಸುವ ಪ್ರಾಂಪ್ಟ್ಗಳ ಜಟಿಲತೆ, ಫೀಚರ್ಗಳು, ಚ್ಯಾಟ್ನ ವಿಸ್ತಾರವನ್ನು ಪರಿಗಣಿಸಿ ಹೊಸ ಉಪಯೊಗದ ವ್ಯಾಪ್ತಿಯನ್ನು ಲೆಕ್ಕ ಹಾಕಲಾಗುವುದು. ಇದು ಪ್ರತೀ ಐದು ಗಂಟೆಗಳಲ್ಲಿ ನವೀಕರಣಗೊಳ್ಳಲಿದೆ.












