ನಕಲಿ TRP ಪ್ರಕರಣ: ಟಿಆರ್‌ಪಿ ರೇಟಿಂಗ್ ಏಜೆನ್ಸಿಯ ಮಾಜಿ ಸಿಇಒ ಬಂಧನ

0
369

ಸನ್ಮಾರ್ಗ ವಾರ್ತೆ

ಮುಂಬೈ,ಡಿ.25: ವಿವಾದ ನಕಲಿ TRP ಭ್ರಷ್ಟಾಚಾರ ಪ್ರಕರಣದಲ್ಲಿ ಬ್ರಾಡ್‍ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್‍ನ(BARC) ಮಾಜಿ ಸಿಒಒ ಪಾರ್ಥೊ ದಾಸ್ ಗುಪ್ತರನ್ನು ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ್ದು ಅಧಿಕಾರಿಯೊಬ್ಬರ ಹೇಳಿಕೆಯನ್ನು ಆಧರಿಸಿ ಟೈಮ್ಸ್ ಆಫ್ ಇಂಡಿಯ ವರದಿ ಮಾಡಿದೆ. ರಿಪಬ್ಲಿಕ್ ಟಿವಿ ಸಹಿತ ವಿವಿಧ ಚ್ಯಾನೆಲ್‍ಗಳಿಗೆ ಟಿವಿ ರೇಟಿಂಗ್ ಪಾಯಿಂಟು(TRP) ನಕಲಿಯಾಗಿ ನೀಡಿದ ಪ್ರಕರಣದಲ್ಲಿ ದಾಸ್ ಗುಪ್ತ ಸೆರೆಯಾಗಿದ್ದಾರೆ.

ಕ್ರೈಂ ಇಂಟಲಿಜೆನ್ಸ್ ಯುನಿಟ್(ಸಿಐಯು) ಪುಣೆಯ ರಾಜ್‍ಗಢ ಪೊಲೀಸ್ ಠಾಣೆಯ ಸಮೀಪದಲ್ಲಿ ದಾಸ್‍ಗುಪ್ತರನ್ನು ಸೆರೆಹಿಡಿಯಿತು. ಶುಕ್ರವಾರ ಅವರನ್ನು ಕೋರ್ಟಿಗೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿಗಳು ಹೇಳಿದರು. ಪ್ರಕರಣದಲ್ಲಿ ಬಾರ್ಕ್‌ನ ಮಾಜಿ ಚೀಫ್ ಆಪರೇಟಿಂಗ್ ಅಧಿಕಾರಿ ಸಿಒಯು ರೊಮಿಲ್ ರಾಂಗರಿಯವರನ್ನು ಈ ಹಿಂದೆಯೇ ಬಂಧಿಸಲಾಗಿದೆ.

ಕೆಲವು ಚ್ಯಾನೆಲ್‍ಗಳು TRP ರೇಟಿಂಗ್‍ನ್ನು ಕೃತಕಗೊಳಿಸುತ್ತಿದೆ ಎಂದು ಬಾರ್ಕ್ ನೀಡಿದ ದೂರಿನಲ್ಲಿ ಮುಂಬೈ ಪೊಲೀಸರು ತನಿಖೆ ಆರಂಭಿಸಿದ್ದರು. ರೇಟಿಂಗ್ ಏಜೆನ್ಸಿ ಆಯ್ಕೆ ಮಾಡುವ ಕೆಲವು ಸ್ಯಾಂಪಲ್‍ಗಳನ್ನು ಮನೆಗಳ ವ್ಯೂವರ್‍ಶಿಪ್ ಡಾಟಾ ದಾಖಲಿಸಿ ಚ್ಯಾನೆಲ್‍ಗಳ TRPಯನ್ನು ಲೆಕ್ಕ ಮಾಡಲಾಗುತ್ತದೆ. ಹೆಚ್ಚು ಟಿಆರ್‌ಪಿ ಇದ್ದರೆ ಹೆಚ್ಚು ಜಾಹೀರಾತು ಸಿಗುವುದು ಟಿವಿ ಕಂಪೆನಿಗಳಿಗೆ ಬಹುದೊಡ್ಡ ಲಾಭವಾಗಿದೆ.