‘ವಿದೇಶಿ’ಯರೆಂದು ಸಾರಲ್ಪಟ್ಟವರಿಗೆ ತಯಾರಾಗುತ್ತಿರುವ ಜೈಲುಗಳಿವು!

0
857

ಸನ್ಮಾರ್ಗ ವಾರ್ತೆ

ಗುವಾಹಟಿ,ಸೆ.7: “ತನಗೆ ಇನ್ನು ಮಲಗಲು ಇರುವ ಸ್ಥಳ ಇದು” ಎಂದು ಗೋಲ್‍ಪಾರ ಜಿಲ್ಲೆಯ ಮಡಿಯದ ವ್ಯಾಪಾರಿ ಮುಖ್ಯಸ್ಥ ಸುರುಮಾನ್ ಅಲಿಯವರನ್ನು ಅಧಿಕಾರಿಗಳು ಬೃಹತ್ ಜೈಲಿಗೆ ಕರೆದುಕೊಂಡು ಹೋದರೆಂದು ಅವರು ಹೇಳುತ್ತಾರೆ. ಇವರ ವ್ಯಾಪಾರದ ಬೆಳವಣಿಗೆಯನ್ನು ನೋಡಿ ಅಸೂಯೆ ಪಟ್ಟವರು ಎರಡು ಬಾರಿ ವಿದೇಶಿ ಟ್ರಿಬ್ಯೂನಲ್‍ಗೆ ದೂರು ನೀಡಿದ್ದರು. ಆದರೆ, ಸುರುಮಾನ್ ಅಲಿ ‘ಭಾರತೀಯ’ ಎಂದು 2001 ಮತ್ತು 2009ರಲ್ಲಿ ಟ್ರಿಬ್ಯೂನಲ್ ತೀರ್ಪು ನೀಡಿತ್ತು. ಆದರೆ, ಬಾರ್‍‌ಪೇಟದ ಅದೇ ಟ್ರಿಬ್ಯೂನಲ್ ಪೌರತ್ವ ಸಾಬೀತು ಪಡಿಸಲು ಪುನಃ ಇವರಿಗೆ ನೋಟಿಸು ಕಳುಹಿಸಿದೆ. ಸ್ವಂತ ಪ್ರಜೆಗಳನ್ನು ವಿದೇಶಿಯರೆಂದು ಜೈಲಿಗೆ ಹಾಕಲು ದೇಶ ಕಟ್ಟುತ್ತಿರುವ ಜೈಲು ಇದು ಎಂದು ಸುರುಮಾನ್ ಅಲಿ ತೋರಿಸಿಕೊಟ್ಟರು.

ಕಳೆದ ಡಿಸೆಂಬರ್‍‌ನಿಂದ ನೂರಾರು ಕಾರ್ಮಿಕರು ಅವಸರವಸರವಾಗಿ ಕೆಲಸ ಮಾಡುತ್ತಿದ್ದಾರೆ. ಮುಖ್ಯ ದ್ವಾರದ ಕೆಲಸ ಮುಗಿಸಿ ಬೀಗ ಜಡಿಯಲಾಗಿದೆ. ಏಕಾಂತ ಕೈದಿಗಳಿಗಿರುವ ಒಂದು ಕೋಣೆಯ ಸೆಲ್‍ಗಳ ಗೋಡೆ ಕಟ್ಟಲಾಗುತ್ತಿದೆ. ‘ವಿದೇಶಿ’ ಎಂದು ಘೋಷಿಸುವ ಮಕ್ಕಳಿಗೆ ಜೈಲಿನಲ್ಲಿ ಶಾಲಾಕಟ್ಟಡವನ್ನು ಕಟ್ಟಲಾಗುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ ಕುಡಿಯುವ ನೀರು ಎಲ್ಲವೂ ಅಂತಿಮ ಹಂತದಲ್ಲಿದೆ. ಸುತ್ತಲೂ ಗೋಡೆ ಮತ್ತು ವಾಚ್ ಟವರ್‍‌ಗಳೂ ಇವೆ. ಬಯಲು ಬಂದಿಖಾನೆಯ ಹೊಣೆಯಿರುವ ಅಧಿಕಾರಿಗಳು ಮತ್ತು ಸುರಕ್ಷಾ ಸೈನಿಕರು ವಾಸಿಸಲು ನಿರ್ಮಿಸಿದ ಐದು ಕಟ್ಟಡಗಳ ಪೆಯಿಂಟಿಂಗ್ ಕೆಲಸ ಮುಗಿದಿದೆ.

ಟ್ರಿಬ್ಯೂನಲ್ ‘ವಿದೇಶಿ’ ಎಂದು ಘೋಷಿಸಿದರೆ ದಿಬ್ರೂಗಡ್, ಜೋರ್‍ಹಟ್, ಕೊಕ್ರಜಾರ್, ಸಇಲ್‍ಚಾರ್, ತೆಝ್‍ಪುರ್, ಗೋಲ್‍ಪಾರ ಜಿಲ್ಲೆಗಳಲ್ಲಿ ಸಿದ್ಧಪಡಿಸಲಾಗಿರುವ ಆರು ಜೈಲುಗಳಿಗೆ ಜನರನ್ನು ಕೊಂಡು ಹೋಗಿ ಬಿಡಲಾಗುತ್ತದೆ. ಮಹಿಳೆಯರನ್ನು ಅವರಿಗೆ ಮೀಸಲಾಗಿರುವ ಕೊಕ್ರಜಾರಿಗೆ ಕರೆದುಕೊಂಡು ಹೋಗಲಾಗುವುದು. ಇಂತಹ ತಾತ್ಕಾಲಿಕ ಜೈಲು ಕೇಂದ್ರಗಳಿಂದ ವರ್ಷಗಳ ಕಾಲ ವಾಸಿಸಿದ ಎಲ್ಲರನ್ನೂ ಹೊಸ ಜೈಲಿಗೆ ವರ್ಗಾಯಿಸಲಾಗುತ್ತದೆ. ಹೊಸದಾಗಿ ವಿದೇಶಿಗಳೆಂದು ಘೋಷಿಸುವವರನ್ನು ಅಲ್ಲಿಗೆ ಕರೆತರಲಾಗುವುದು.

ಆದರೂ 1.17 ಲಕ್ಷಕ್ಕೂ ಹೆಚ್ಚು ಜನರು ವಿದೇಶಿಗಳು ಎಂದು ಘೋಷಿಸಲಾಗಿದೆ. ಮೂರು ಶತಮಾನ ಕಳೆದರೂ ಇದು ಸಾಲದು. ಆದ್ದರಿಂದ ಇಂತಹ ಹತ್ತು ಬಂದಿಖಾನೆ ನಿರ್ಮಿಸಲು ಅಸ್ಸಾಂ ಸರಕಾರ ಯೋಜನೆ ರೂಪಿಸಿದೆ. ಈಗ ಇರುವ ತಾತ್ಕಾಲಿಕ ಜೈಲು ಕೇಂದ್ರಗಳಲ್ಲಿ 30 ಮಂದಿ ಇರುವ ಸೌಕರ್ಯ ಇದೆ. ಕೆಲವೊಮ್ಮೆ 300 ಮಂದಿಯನ್ನು ಕೂಡಿ ಹಾಕಲಾಗಿತ್ತು. 3000 ಮಂದಿಗೆ ಎಂದು ಹೇಳುವ ಜೈಲಿನಲ್ಲಿ 30,000 ಮಂದಿಯನ್ನು ಇರಿಸಬಹುದು. ಎಂದು ಸುರುಮಾನ್ ಅಲಿ ಹೇಳಿದರು.

ಟ್ರಿಬ್ಯೂನಲ್ ವಿದೇಶಿಗಳೆಂದು ಘೋಷಿಸಿದರೆ ಮೂರು ವರ್ಷ ಇದರೊಳಗೆ ಇದ್ದರೆ ಮಾತ್ರ ಜಾಮೀನು ಲಭಿಸುತ್ತದೆ. ಅದಕ್ಕೂ ಕಠಿಣ ಶರ್ತಗಳಿರುತ್ತವೆ. ಒಂದು ಲಕ್ಷ ರೂಪಾಯಿ ಬಾಂಡ್ ನೀಡಬೇಕು. ಇಲ್ಲದಿದ್ದರೆ ಜಾಮೀನು ಸಿಗದು. ಪೊಲೀಸ್ ಠಾಣೆಗೆ ವಾರಕ್ಕೊಮ್ಮೆ ಹೋಗಿ ಸಹಿ ಹಾಕಬೇಕು. ಮೂರು ತಿಂಗಳಲ್ಲಿ ಒಮ್ಮೆ ಜಾಮೀನಿನಿಂದ ಹೊರ ಬಂದವರ ಕುರಿತು ಜಿಲ್ಲಾ ಪೊಲೀಸ್ ಸೂಪರಿಡೆಂಟ್ ವರದಿ ನೀಡಬೇಕು. ಜಾಮೀನಿಗೆ ಹಣವಿಲ್ಲದ ಬಡ ಜನರು, ಪತ್ನಿಯನ್ನೂ,ಪತಿಯನ್ನೂ, ಮಕ್ಕಳನ್ನು ಶಾಶ್ವತವಾಗಿ ಕಳೆದುಕೊಳ್ಳಬಹುದು. ಸಾಯುವವರೆಗೆ ಇಲ್ಲಿಯೇ ಇರಬೇಕಾಗುವುದು. ಟ್ಟಿಬ್ಯೂನಲ್‍ಗಳು ಬಾಂಗ್ಲಾದೇಶಿಯರೆಂದು ಹೇಳಿದರೆ ಅವರನ್ನು ಸ್ವೀಕರಿಸಲು ಅದು ಸಿದ್ಧವಿಲ್ಲ. ಎಲ್ಲ ರಾಜ್ಯಗಳಲ್ಲಿ ಇಂತಹ ಜೈಲುಗಳನ್ನು ಸಿದ್ಧಪಡಿಸಲು ಕೇಂದ್ರ ಸರಕಾರ ಎಲ್ಲ ರಾಜ್ಯಗಳಿಗೆ ಸೂಚಿಸಿದೆ. ಕರ್ನಾಟಕದಲ್ಲಿ ಇಂತಹ ಬಂಧೀಖಾನೆ ಸಿದ್ಧವಾಗಿದೆ.

ರಾಷ್ಟ್ರೀಯ ಪೌರತ್ವ ಪಟ್ಟಿಯಲ್ಲಿಲ್ಲದವರು ಯಾವ ದೇಶದವರೆಂದು ಪತ್ತೆ ಹಚ್ಚಲು ನಾವು ಕೂಡ ಸಹಾಯ ಮಾಡುತ್ತೇವೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ವಿಭಾಗದ ಹೈಕಮೀಶನರ್ ಭಾರತಕ್ಕೆ ತಿಳಿಸಿದ್ದರು. ಆದರೆ ಇವರನ್ನು ವಿದೇಶಿಯರೆಂದು ಸಾಬೀತು ಪಡಿಸಲು ಸಾಧ್ಯವಿಲ್ಲದ್ದರಿಂದ ಟ್ರಿಬ್ಯೂನಲ್ ವಿದೇಶಿಯರನ್ನಾಗಿಸಿದವರನ್ನು ವಾಸ ಹೂಡಿಸಲು ಈ ರೀತಿಯ ಜೈಲುಗಳನ್ನು ಕಟ್ಟಿಸಲಾಗುತ್ತಿದೆ.

ಕೃಪೆ: ಮಾಧ್ಯಮಂ