ಅಮೆರಿಕ ದಾಳಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲದರ ಏರಿಕೆ

0
1421

ಸನ್ಮಾರ್ಗ ವಾರ್ತೆ-
ಟೆಹ್ರಾನ್, ಜ. 3: ಇರಾಕಿನಲ್ಲಿ ಅಮೆರಿಕ ನಡೆಸಿದ ದಾಳಿಯಿಂದ ಇರಾನಿನ ಉನ್ನತ ಕಮಾಂಡರ್ ಕೊಲ್ಲಲ್ಪಟ್ಟ ಬೆನ್ನಿಗೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಾಗಿದೆ. ತೈಲ ಬೆಲೆಯಲ್ಲಿ ಶೇ. 4ರಷ್ಟು ಏರಿಕೆಯಾಗಿದೆ. ಕಚ್ಚಾತೈಲದ ಬೆಲೆ ಬ್ಯಾರಲ್‍ಗೆ 69.16 ಡಾಲರ್ ಆಗಿ ಏರಿಕೆಯಾಗಿದೆ. ಈ ಮೂಲಕ ಶೆ. 3ರಷ್ಟು ಹೆಚ್ಛಾಗಿದೆ. ಕಳೆದ ಸೆಪ್ಟಂಬರ್ ನಲ್ಲಿ 17ರ ನಂತರ ಅತಿಹೆಚ್ಚು ತೈಲ ಬೆಲೆಯೇರಿಕೆ ಇದು.

ಅಮೆರಿಕದ ಕಚ್ಚಾತೈಲದ ಬೆಲೆ ಬ್ಯಾರಲಿಗೆ 62,94 ಡಾಲರ್ ಆಗಿದೆ. 1.76 ಡಾಲರ್ ಹೆಚ್ಚಳ ಇದು. ಕಳೆದ ಮೇ.1ರಂದು ಬ್ಯಾರಲ್‍ಗೆ 63.84 ಡಾಲರ್ ಇತ್ತು. ತೈಲೋತ್ಪಾದನ ದೇಶಗಳಲ್ಲಿ ಇರಾನ್‍ಗೆ ನಾಲ್ಕನೆ ಸ್ಥಾನವಿದೆ. ಒಪೆಕ್ ಕೂಟದಲ್ಲಿ ಅದಕ್ಕೆ ಎರಡನೆ ತೈಲರಫ್ತು ಸ್ಥಾನ ಇದೆ.